ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯಿಂದ ಪ್ರೇರಿತ, 2019ರ ಚುನಾವಣೆಗೆ ಪವನ್ ಎಂಟ್ರಿ!

ಜನಸೇನಾ ಪಕ್ಷದ ಮುಖ್ಯಸ್ಥ, ತೆಲುಗಿನ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಹಾರ್ವಡ್ ವಿವಿಯಲ್ಲಿ ಭಾಷಣ ಮಾಡಿ ಬಂದಿರುವ ಪವನ್ ಅವರು ಮಾರ್ಚ್ 14ರಂದು ಮಹತ್ವದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.

By Mahesh
|
Google Oneindia Kannada News

ಹೈದರಾಬಾದ್, ಫೆಬ್ರವರಿ 22: ಜನಸೇನಾ ಪಕ್ಷದ ಮುಖ್ಯಸ್ಥ, ತೆಲುಗಿನ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಹಾರ್ವಡ್ ವಿವಿಯಲ್ಲಿ ಭಾಷಣ ಮಾಡಿ ಬಂದಿರುವ ಪವನ್ ಅವರು ಮಾರ್ಚ್ 14ರಂದು ಮಹತ್ವದ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಮೋದಿಗಾಗಿ ನಾನು ರಾಜಕೀಯಕ್ಕೆ ಹತ್ತಿರವಾಗುತ್ತಿದ್ದೇನೆ ಎಂದಿದ್ದ ಪವನ್ ಈಗ ಚುನಾವಣೆ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಮಾರ್ಚ್ 14ರಂದು ಪಕ್ಷದ ಮೂರನೇ ಸಂಸ್ಥಾಪನಾ ದಿನದಂದು ಹೊಸ ಯೋಜನೆಗಳು, ಹೊಸ ವೆಬ್ ಸೈಟ್ ಅನಾವರಣಗೊಳ್ಳಲಿದೆ. 2019ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಕೇಂದ್ರ ಬಿಜೆಪಿ, ಆಂಧ್ರದಲ್ಲಿ ತೆಲುಗುದೇಶಂ ಪಕ್ಷದ ಕಚೇರಿಯಲ್ಲಿ ಮತ್ತೆ ಸಂಚಲನ ಮೂಡಿದೆ.[ಪವರ್ ಸ್ಟಾರ್ ಗೆ ಮೋದಿಯಿಂದ ಭಾರಿ 'ಗಿಫ್ಟ್'?]

ಈ ನಡುವೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ವಿಪಕ್ಷದ ಮುಂದೆ ನಿಂತು, ನಮ್ಮ ಬೆನ್ನ ಹಿಂದೆ ಪವನ್ ಕಲ್ಯಾಣ್ ಇದ್ದಾರೆ ಎಂದು ಘೋಷಿಸಿದ್ದಾರೆ.

ಪವನ್ ರಿಂದ ಜನ ಹಿತಕ್ಕಾಗಿ ಸಮಾವೇಶ

ಪವನ್ ರಿಂದ ಜನ ಹಿತಕ್ಕಾಗಿ ಸಮಾವೇಶ

ಆಂಧ್ರದಲ್ಲಿ ಟಿಡಿಪಿ ಗೆಲುವಿಗೆ ಕಾರಣರಾಗಿದ್ದ ಪವನ್ ಆಂಧ್ರದಲ್ಲಿ ಟಿಡಿಪಿ ಗೆಲುವಿಗೆ ಕಾರಣರಾಗಿದ್ದ ಪವನ್ ಅವರು ಜನ ಸೇನಾ ಪಕ್ಷದ ಮೂಲಕ ರಾಜ್ಯದ ಹಿತಾಸಕ್ತಿಗಾಗಿ ದುಡಿಯುತ್ತಿದ್ದಾರೆ. ಆದರೆ, ಬಿಜೆಪಿ ಟಿಕೆಟ್ ಕೂಡಾ ನಿರಾಕರಿಸಿ ಚುನಾವಣೆ ಸ್ಪರ್ಧಿಸದೇ ಜನ ಹಿತಕ್ಕಾಗಿ ಸಮಾವೇಶಗಳನ್ನು ನಡೆಸಿದ್ದಾರೆ. ಮೋದಿ ಅವರಿಂದಲೂ ಹೊಗಳಿಕೆ ಪಡೆದುಕೊಂಡಿದ್ದ ಪವನ್ ಅವರು ಕೇಂದ್ರ ಸರ್ಕಾರದ ವಿರುದ್ಧವೂ ತಿರುಗಿ ಬಿದ್ದಿದ್ದರು.

ನೋಟು ನಿಷೇಧ ಬಗ್ಗೆ ಕಿಡಿಕಾರಿದ್ದ ಪವನ್

ನೋಟು ನಿಷೇಧ ಬಗ್ಗೆ ಕಿಡಿಕಾರಿದ್ದ ಪವನ್

ನೋಟುಗಳ ನಿಷೇಧ, ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ನೀತಿ, ದಲಿತರ ಮೇಲಿನ ದೌರ್ಜನ್ಯ, ರೋಹಿತ್ ವೆಮುಲಾ ಪ್ರಕರಣ ಸೇರಿದಂತೆ ಅನೇಕ ವಿಷಯಗಳಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿಯನ್ನು ತೀವ್ರವಾಗಿ ಖಂಡಿಸಿ ಪವನ್ ಕಲ್ಯಾಣ್ ಅವರು ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ ಕೂಡಾ ತೀವ್ರವಾಗಿ ಪ್ರತಿಕ್ರಿಯಿಸಿತ್ತು. [ವಿಪರ ಇಲ್ಲಿ ಓದಿ]

ಖಾದಿ ಗ್ರಾಮೋದ್ಯಮದ ಪರ ದನಿ ಎತ್ತಿದ ಪವನ್

ಖಾದಿ ಗ್ರಾಮೋದ್ಯಮದ ಪರ ದನಿ ಎತ್ತಿದ ಪವನ್

ಆಂಧ್ರಪ್ರದೇಶದ ಗುಂಟೂರಿನಲಿ ನಡೆದ ಪದ್ಮಶಾಲಿ ಸಾಧಿಕಾರಿಕ ಸಂಘದ ಸಮಾವೇಶದಲ್ಲಿ ಮಾತನಾಡಿದ ಪವನ್, ಕೂಲ್ ಡ್ರಿಂಕ್ಸ್ ಪರ ಪ್ರಚಾರ ಮಾಡಲು ನಾನು ಇಲ್ಲಿ ನಿಂತಿಲ್ಲ, ಖಾದಿ ಗ್ರಾಮೋದ್ಯಮ, ಕೈಮಗ್ಗ, ನೇಯ್ಗೆ ಪರ ಮಾತನಾಡುತ್ತಿದ್ದೇನೆ. ಜಾತಿ, ಮತ, ಪಂಥ ಬಿಟ್ಟು, ನಿಮ್ಮ ರಾಜ್ಯ ನಿಮ್ಮತನ ಉಳಿಸಿಕೊಳ್ಳಿ ಎಂದು ಕರೆ ನೀಡಿದರು.

ಪಕ್ಷಕ್ಕೆ ಮಾನ್ಯತೆ ಸಿಕ್ಕಿ 2 ವರ್ಷವಾಯ್ತು

ಪಕ್ಷಕ್ಕೆ ಮಾನ್ಯತೆ ಸಿಕ್ಕಿ 2 ವರ್ಷವಾಯ್ತು

ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಅನ್ವಯ ಭಾರತ ಚುನಾವಣಾ ಆಯೋಗವು ಜನಸೇನಾ ಪಾರ್ಟಿಯನ್ನು ನೋಂದಣಿ ಮಾಡಿಕೊಂಡು 2014ರ ನವೆಂಬರ್ 24ರಿಂದ ಅನ್ವಯವಾಗುವಂತೆ ಪ್ರಮಾಣಪತ್ರ ನೀಡಿದೆ. ನೋಂದಣಿ ಸಂಖ್ಯೆ 56/118/2014 ಪಿಪಿಎಸ್-1 ಎಂದು ಜನಸೇನಾ ಪಾರ್ಟಿಯ ಮುಖಂಡರು ಪ್ರಕಟಿಸಿದ್ದಾರೆ.

ನಾನು ರಾಜಕೀಯ ರಂಗಕ್ಕೆ ಇಷ್ಟು ಹತ್ತಿರವಾಗುತ್ತಿರುವುದು ಮೋದಿ ಅವರಿಗಾಗಿ ಮಾತ್ರ, ನಾನು ಸ್ಥಾನ ಮಾನ ಸಿಗಬೇಕೆಂದು ಬಯಸುವುದಿಲ್ಲ ಎಂದು ಪವನ್ ಹೇಳಿದ್ದರು. ಆದರೆ, ಇತ್ತೀಚೆಗೆ ಹಾರ್ವಡ್ ನಲ್ಲಿ ರಾಜಕೀಯ ಜ್ಞಾನ ಹಂಚಿಕೊಂಡು ಬಂದಿದ್ದಾರೆ.

ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ ಪವನ್

ಹಾರ್ವಡ್ ವಿವಿಯಲ್ಲಿ ಪವನ್ ಕಲ್ಯಾಣ್ ಅವರು ತಮ್ಮ ಜನಸೇನಾ ಪಕ್ಷ ಹೇಗೆ ವಿಭಿನ್ನ ಎಂಬುದನ್ನು ವಿವರಿಸಿದರು. ನಂತರ ಪ್ರೇಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ವಿಡಿಯೋ ಇಲ್ಲಿ ನೋಡಿ

English summary
Jana Sena Party chief K Pawavn Kalyan has said the party's policies on various issues like agriculture, land acquisition and capital city will be announced on March 14, the third formation day of the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X