ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲೆಂ ಬಸ್ ದುರಂತಕ್ಕೆ ಟ್ರಾವೆಲ್ಸ್ ಸಂಸ್ಥೆ ಯೇ ಕಾರಣ

By Mahesh
|
Google Oneindia Kannada News

ಹೈದರಾಬಾದ್, ಜೂ.1: ಆಂಧ್ರ ಪ್ರದೇಶದ ಮೆಹಬೂಬ್‌ನಗರ ಜಿಲ್ಲೆಯ ಪಾಲೆಂ ಬಳಿ ಅ.30ರಂದು ಸಂಭವಿಸಿದ ವೋಲ್ವೋ ಬಸ್ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಿಐಡಿ ಪೊಲೀಸರು ವಿಚಾರಣೆ ಮುಗಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ವೋಲ್ವೊ ಸಂಸ್ಥೆ, ದಿವಾಕರ್ ರೋಡ್ ಲೈನ್ಸ್, ಜಬ್ಬಾರ್ ಟ್ರಾವೆಲ್ಸ್ ಒಂದಲ್ಲ ಒಂದು ರೀತಿ ಈ ದುರಂತಕ್ಕೆ ಕಾರಣರಾಗಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಜಬ್ಬಾರ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಈ ಬಸ್(AP02-TA-0963) ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣ ಮಾಡುವಾಗ ರಸ್ತೆ ಪಕ್ಕದಲ್ಲಿರುವ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಅವಘಡ ಸಂಭವಿಸಿ 45 ಪ್ರಯಾಣಿಕರು ಸುಟ್ಟು ಕರಕಲಾಗಿದ್ದರು. ಮೃತಪಟ್ಟವರಲ್ಲಿ 19 ಜನ ಸಾಫ್ಟ್ ವೇರ್ ಉದ್ಯೋಗಿಗಳು, 2 ವರ್ಷದ ಮಗು, ಓರ್ವ ಗರ್ಭಿಣಿ ಪ್ರಯಾಣಿಕರು ಇದ್ದರು.

Palem Inferno: CID Blames Volvo Bus Design for Mishap

ಈಗ ವಿಚಾರಣೆ ಪೂರ್ಣ ಮಾಡಿ ಆರೋಪ ಪಟ್ಟಿ ಸಲ್ಲಿಸಿರುವ ಪೊಲೀಸರು ಕಂಡುಹಿಡಿದಿರುವ ಲೋಪದೋಷವೆಂದರೆ ಬಸ್‌ ಅನ್ನು ಸರಿಯಾಗಿ ವಿನ್ಯಾಸಗೊಳಿಸದೆ ಇರುವುದು ಹಾಗೂ ಚಾಲಕನ ಅಜಾಗರೂಕತೆಯಿದ ಅವಘಡ ಸಂಭವಿಸಿದೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. [ಬಸ್ ದುರಂತದ ಚಿತ್ರಗಳು]

ಘಟನೆಗೆ ಸಂಬಂಧಿಸಿದಂತೆ ಆಂಧ್ರ ಪೊಲೀಸರು 400 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಮಾಜಿ ಸಚಿವ ಜೆಸಿ ದಿವಾಕರ್ ರೆಡ್ಡಿ ಅವರ ಪತ್ನಿ ಹೆಸರು ಚಾರ್ಜ್ ಶೀಟ್ ನಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಮಂದಿಯನ್ನು ಬಂಧಿಸಲಾಗಿದೆ. ಕಳೆದ ಮೇ 7 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಹೆಚ್ಚುವತಿ ಡಿಜಿಪಿ(ಸಿಐಡಿ) ಟಿ ಕೃಷ್ಣ ಪ್ರಸಾದ್ ಹೇಳಿದ್ದಾರೆ.

ಡೀಸೆಲ್ ಟ್ಯಾಂಕ್ ಪಕ್ಕದಲ್ಲೇ ಬ್ಯಾಟರಿಯನ್ನು ಇಟ್ಟಿರುವುದರಿಂದ ಬಸ್ ಕಲ್ಲಿಗೆ ಅಪ್ಪಳಿಸಿದಾಗ ಬ್ಯಾಟರಿಯಿಂದ ಬೆಂಕಿ ಸಂಭವಿಸಿ ಆನಂತರ ಅದು ಡೀಸೆಲ್ ಟ್ಯಾಂಕಿಗೂ ಆವರಿಸಿಕೊಂಡು ಆಮೇಲೆ ಇಡೀ ಬಸ್‌ಅನ್ನೇ ಸುಟ್ಟು ಹಾಕಿದೆ ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

150 ಲೀಟರ್ ಹೆಚ್ಚುವರಿ ಇಂಧನವನ್ನು ಶೇಖರಿಸಿಡಲಾಗಿತ್ತು ಇದು ಬೆಂಕಿ ಪರಿಣಾಮ ಉಲ್ಬಣಗೊಳ್ಳಲು ಕಾರಣವಾಯಿತು. ವೋಲ್ವೋ ಬಸ್ ವಿನ್ಯಾಸದಲ್ಲಿ ಪಿವಿಸಿ ಹಾಗೂ ಇನ್ನಿತರ ವಸ್ತು ಬಳಸಿದ್ದ್ದು ಇದು ಕೂಡಾ ಬೆಂಕಿ ಆಕಸ್ಮಿಕ ತೀವ್ರತೆ ಹೆಚ್ಚಿಸಿದೆ.[ಪ್ರಾಥಮಿಕ ತನಿಖಾ ವರದಿ]

ಈ ಘಟನೆಗೆ ಸಂಬಂಧಿಸಿದಂತೆ ಜಬ್ಬಾರ್ ಟ್ರಾವೆಲ್ಸ್ ಮಾಲೀಕ ಸೇರಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್‌ಅನ್ನು ಪಿವಿಸಿ ಪದಾರ್ಥಗಳಿಂದ ತಯಾರು ಮಾಡಿರುವುದರಿಂದ ಇದು ಬಲುಬೇಗ ಬೆಂಕಿ ಹೊತ್ತಿಕೊಳ್ಳಲಿದೆ. ಆದ್ದರಿಂದ ಬಸ್‌ನ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕು. ಅಲ್ಲದೆ, ತುರ್ತು ಪ್ರವೇಶದ್ವಾರವನ್ನು ಅಳವಡಿಸಿಕೊಳ್ಳದೆ ಇರುವುದು ಕೂಡ ಸಂಚಾರ ನಿಯಮದ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.

English summary
CID officials, in the charge-sheet filed in the case of the bus blaze in Mahbubnagar district in October last year which claimed 45 lives, pointed out that the bus manufacturers, Volvo Buses India Ltd; the bus owners, Diwakar Road Lines; and the bus operator, Jabbar Travels, have all contributed to the accident in one way or the other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X