ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಿನೊಂದಿಗೆ ಹಿಂದೂ ಚಾಲಕ ಬೇಕು, ಓಲಾಗೆ ವಿಚಿತ್ರ ಬೇಡಿಕೆ

|
Google Oneindia Kannada News

ಹೈದರಾಬಾದ್, ಏ. 8 : ಹಿಂದೂ ಚಾಲಕ ಇರುವ ಕಾರನ್ನು ಕಳಿಸುವಂತೆ ಓಲಾ ಕ್ಯಾಬ್‌ಗೆ ಮನವಿ ಮಾಡಿದ್ದ ವ್ಯಕ್ತಿಗೆ ಮುಖಭಂಗವಾಗಿದೆ. ಮನವಿ ಸಲ್ಲಿಸಿದ್ದ ವ್ಯಕ್ತಿಗೆ ಓಲಾ ಕ್ಯಾಬ್ ಸರಿಯಾಗಿಯೇ ತಿರುಗೇಟು ಕೊಟ್ಟಿದೆ. ಈ ಬೇಡಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಭಾರೀ ವಿರೋಧ ವ್ಯಕ್ತವಾಗಿದೆ.

ಹೈದರಾಬಾದ್‌ನ ಸೀಲಂ ವೀರಪ್ಪ ನಾಯ್ಡು ಓಲಾ ಕ್ಯಾಬ್‌ಗೆ ಹಿಂದೂ ಚಾಲಕ ಇರುವ ಕಾರು ಕಳಿಸಿ ಎಂದು ಮನವಿ ಮಾಡಿದವರು. 'ಹಿಂದೂವಾಗಿ ನಾನು ಹೈದರಾಬಾದ್‌ನಲ್ಲಿ ಹಿಂದೂ ಚಾಲಕರ ಬಗ್ಗೆ ನಂಬಿಕೆ ಹೊಂದಿದ್ದೇನೆ. ಆದ್ದರಿಂದ ಚಾಲಕನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ' ಎಂದು ಮನವಿ ಮಾಡಿದ್ದರು. ನಾಯ್ಡು ಟ್ವೀಟ್ ಮಾಡಿ ತನ್ನ ಬೇಡಿಕೆಯನ್ನು ಓಲಾ ಕ್ಯಾಬ್‌ ಮುಂದಿಟ್ಟಿದ್ದರು. [2050ಕ್ಕೆ ಹಿಂದೂಗಳ ಸಂಖ್ಯೆ 140 ಕೋಟಿ]

ola

ಓಲಾ ಸ್ಪಷ್ಟನೆ : 'ಕ್ಷಮಿಸಿ ನಾವು ಧರ್ಮದ ಆಧಾರದಲ್ಲಿ ಚಾಲಕರನ್ನು ವಿಂಗಡನೆ ಮಾಡುವುದಿಲ್ಲ ಎಂದು ಓಲಾ ನಾಯ್ಡು ಅವರ ಬೇಡಿಕೆಗೆ ತಿರುಗೇಟು ಕೊಟ್ಟಿದೆ'. ಓಲಾ ದಿಟ್ಟ ಉತ್ತರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶ್ಲಾಘಿಸಲಾಗುತ್ತಿದೆ. [ಓಲಾ, ಉಬರ್ ಟ್ಯಾಕ್ಸಿ ಮೊಬೈಲ್ ಅಪ್ಲಿಕೇಷನ್ ಗೆ ನಿಷೇಧ?]

ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾದ ನಂತರ 'ಈ ಬೇಡಿಕೆಯನ್ನು ತಾರತಮ್ಯ ಎನ್ನುವುದರ ಬದಲು ಗ್ರಾಹಕರ ಆಯ್ಕೆ ಎಂದು ಯಾಕೆ ಪರಿಗಣಿಸಬಾರದು?' ಎಂದು ನಾಯ್ಡು ಸಮರ್ಥನೆ ನೀಡಿದ್ದಾರೆ. ಅಂತಿಮವಾಗಿ 'ಯಾರನ್ನೂ ನೋಯಿಸುವ ಉದ್ದೇಶ ನನಗೆ ಇಲ್ಲ' ಎಂದು ಟ್ವೀಟ್‌ ಮಾಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ನಾಯ್ಡುಗೆ ಟ್ವೀಟರ್‌ನಲ್ಲಿ ಪ್ರಶ್ನೆ

ನನಗೆ ದಲಿತ ಡ್ರೈವರ್ ಬೇಕು

English summary
Ola cab services recently snubbed a customer who had demanded a cab with Hindu driver. The man is being slammed on social media for making bigoted statement, posing risk to communal harmony of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X