ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರ ರೇಗಿಸಲು ಹೊಸ ತಂತ್ರ ಹೂಡಿದ ಸಿರೆಂಜ್ ಸೈಕೋ

By ವಿಕಾಸ್ ನಂಜಪ್ಪ
|
Google Oneindia Kannada News

ಹೈದರಾಬಾದ್, ಸೆ, 01 : ಮಹಿಳೆಯರಿಗೆ ಸೀಟಿ ಹಾಕಿಯೋ, ಅವಾಚ್ಯವಾಗಿ ಮಾತನಾಡಿಯೋ ರೇಗಿಸುವ ಪೋಲಿಗಳ ಗುಂಪನ್ನು ನೀವು ನೋಡಿದ್ದೀರಿ. ಆದರೆ ಇಲ್ಲೊಂದು ಪೋಲಿಗಳ ಗುಂಪು ಒಂದು ಹೊಸ ತಂತ್ರ ರೂಪಿಸಿ ಮಹಿಳೆಯರನ್ನು ಚುಡಾಯಿಸಲು ಮುಂದಾಗಿದೆ.

ಆಂಧ್ರ ಪ್ರದೇಶದಲ್ಲಿ 'ಸಿರೆಂಜ್ ಸೈಕೋ' ಎನ್ನುವ ಒಂದು ಪುಂಡರ ಗುಂಪು ತಲೆ ಎತ್ತಿದೆ. ರಸ್ತೆಯಲ್ಲಿ ನಡೆದು ಹೋಗುವ ಮಹಿಳೆಯರನ್ನು ಗಮನಿಸುವ ಈ ಪೋಲಿಗಳು ಬೈಕಿನಲ್ಲಿ ವೇಗವಾಗಿ ಬಂದು, ಅವರ ಹಿಂದಕ್ಕೆ ಸಿರೆಂಜ್ ನಿಂದ ಚುಚ್ಚಿ ಸಾರ್ವಜನಿಕವಾಗಿ ಮುಜುಗರಕ್ಕೆ ಈಡು ಮಾಡಿದ್ದಾನೆ.[ಭಾರತದ ಹೆಣ್ಣು ಮಕ್ಕಳ ವ್ಯಥೆ ಬಿಚ್ಚಿಡುವ ವರದಿಯಲ್ಲೇನಿದೆ?]

Now 400 cops haunt for syringe psycho in Hyderabad

ನಗರದಲ್ಲಿ ಈ ಹೇಯ ಕೃತ್ಯ ಎಸಗುತ್ತಿರುವ ಪೋಲಿಗಳ ಗುಂಪಿನ ಜಾಲ ಪತ್ತೆ ಹಚ್ಚಿದ ಪೊಲೀಸರು ಇದೀಗ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಉಳಿದವರಿಗಾಗಿ 50 ತಂಡಗಳ 400 ಪೊಲೀಸರ ತಂಡ ಹುಡುಕಾಟ ನಡೆಸುತ್ತಿದೆ.

ಪಲ್ಸರ್ ಬೈಕಿನಲ್ಲಿ ಬರುವ ಈ ಪೋಲಿಗಳ ಚುಡಾಯಿಸುವಿಕೆಗೆ ಗೋದಾವರಿ ಜಿಲ್ಲೆಯ 13 ಮಹಿಳೆಯರು ಗುರಿಯಾಗಿದ್ದು, ಈ ಕೃತ್ಯದ ಕುರಿತಾಗಿ ಕೆಲವು ಮಹಿಳೆಯರು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.

ಚುಡಾಯಿಸುವಿಕೆಗೆ ಗುರಿಯಾದ ಕೆಲವು ಮಹಿಳೆಯರ ರಕ್ತ ಪಡೆದ ಪೊಲೀಸರು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಬಳಿಕ ಪರೀಕ್ಷೆಯ ದಾಖಲೆ ಪಡೆದ ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿ ಮಹಿಳೆಯರು ಆರೋಗ್ಯವಾಗಿ ಇರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ.

ಈ ಪುಂಡರ ಗುಂಪನ್ನು ಹಿಡಿದುಕೊಟ್ಟವರಿಗೆ ಅಥವಾ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದು ಸೂಪರ್ಡೆಂಟ್ ಆಫ್ ಪೊಲೀಸ್ ಭಾಸ್ಕರ್ ಭೂಷಣ್ ಹೇಳಿದ್ದಾರೆ.

English summary
The man who travels on a Pulsar motor cycle pricking women on their back sides with a syringe on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X