ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿ ವಿರುದ್ಧ 11ನೇ ಚಾರ್ಜ್ ಶೀಟ್ ಸಲ್ಲಿಕೆ

By Mahesh
|
Google Oneindia Kannada News

ಹೈದರಾಬಾದ್, ಸೆ.9: ಅಕ್ರಮ ಆಸ್ತಿ ಪ್ರಕರಣ ಆರೋಪ ಹೊತ್ತಿರುವ ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರಿಗೆ ಸಿಬಿಐ ತಂಡ ಮತ್ತೊಮ್ಮೆ ಶಾಕ್ ನೀಡಿದೆ. ಸರ್ಕಾರಿ ಯೋಜನೆಗಳನ್ನು ದುರುಪಯೋಗ ಮಾಡಿಕೊಂಡು ಹಣ ಗಳಿಸಿದ ಆರೋಪ ಹೊತ್ತಿರುವ ಜಗನ್ ಸಂಸ್ಥೆಯ ಮೇಲೆ ಮತ್ತೊಂದು ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.

ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಗೆ ಪುಲಿವೆಂದುಲ ಅಸೆಂಬ್ಲಿ ಶಾಸಕ, ಆಂಧ್ರಪ್ರದೇಶದ ವಿಪಕ್ಷ ನಾಯಕ ಜಗನ್ ಅವರು ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಹ ಆರೋಪಿಗಳಾದ ಮಾಜಿ ಸಚಿವ ಡಿ ಪ್ರಸಾದ್ ರಾವ್ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು, ಉದ್ಯಮಿಗಳು ಹಾಜರಿದ್ದರು.[ರಾಹುಲ್ ಗೆಲ್ಲಿಸಲು ಆಂಧ್ರ ಒಡೆದ ಸೋನಿಯಾ]

ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಕೈಗಾರಿಕಾ ಕಾರಿಡಾರ್ ಯೋಜನೆಗಾಗಿ ವಿವಿಧ ಖಾಸಗಿ ಕಂಪನಿಗಳು ಹಣ ಹೂಡಿಕೆ ಮಾಡಿದ್ದು ಇವೆಲ್ಲದರ ಲಾಭವೂ ಜಗನ್ ಸಂಸ್ಥೆಗೆ ಸೇರುತ್ತಿತ್ತು. ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.

ಕೇಸ್ ಹಿಸ್ಟರಿ: ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿ 2012ರ ಮೇ 27ರಂದು ಬಂಧನಕ್ಕೊಳಗಾಗಿ ಚಂಚಲಗುಡ ಜೈಲು ಸೇರಿದ್ದ ಜಗನ್ ಮೋಹನ್ ರೆಡ್ಡಿ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿತ್ತು. ಜಗನ್ ವಿರುದ್ಧ ಸಿಬಿಐ ತಂಡ ಸುಮಾರು 10 ಚಾರ್ಜ್ ಶೀಟ್ ಸಲ್ಲಿಸಿತ್ತು. ಮೊದಲ ಚಾರ್ಜ್ ಶೀಟ್ ಮಾರ್ಚ್ 31,2012ರಂದು ಸಲ್ಲಿಸಲಾಯಿತು ಅರವಿಂದೋ ಫಾರ್ಮ ಕಂಪನಿಗೆ 75 ಎಕರೆ ಭೂಮಿ ಹಂಚಿಕೆ ವಿವಾದ ಜಗನ್ ಗೆ ಉರುಳಾಯಿತು.

ಪ್ರತಿ ಬಾರಿ ಜಾಮೀನು ಅರ್ಜಿ ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗಲೂ ಹೊಸ ಹೊಸ ಚಾರ್ಚ್ ಶೀಟ್ ಸಲ್ಲಿಸಲಾಗುತ್ತಿತ್ತು. ಹೀಗಾಗಿ ಪ್ರಕರಣ ತೀರ್ಪು ನೀಡಿಕೆ ವಿಳಂಬಗೊಂಡಿತ್ತು.[ಜಗನ್ - ಮೋದಿ ಭೇಟಿ ಹಿಂದಿನ ಮರ್ಮ]

ಚಾರ್ಜ್ ಶೀಟ್ ನಲ್ಲಿ ಹೆಸರು ಕಾಣಿಸಿಕೊಂಡ ಮೇಲೆ

ಚಾರ್ಜ್ ಶೀಟ್ ನಲ್ಲಿ ಹೆಸರು ಕಾಣಿಸಿಕೊಂಡ ಮೇಲೆ

ಚಾರ್ಜ್ ಶೀಟ್ ನಲ್ಲಿ ಹೆಸರು ಕಾಣಿಸಿಕೊಂಡ ಮೇಲೆ ಆಂಧ್ರದ ಅಂದಿನ ಗೃಹಸಚಿವ ಸ್ಥಾನಕ್ಕೆ ಸಬಿತಾ ರೆಡ್ಡಿ ಹಾಗೂ ರಸ್ತೆ ಸಚಿವ ಸ್ಥಾನಕ್ಕೆ ಪ್ರಸಾದ್ ರಾವ್ ರಾಜೀನಾಮೆ ನೀಡಿದ್ದರು. ಪೆನ್ನಾ ಸಿಮೆಂಟ್ಸ್, ರಘುರಾಮ್(ಭಾರತಿ) ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್ ಮೇಲೆ ಚಾರ್ಚ್ ಶೀಟ್ ಹಾಕಿರುವುದರಿಂದ ಬಿಸಿಸಿಐ ಅಧ್ಯಕ್ಷ ಹಾಗೂ ಸಿಮೆಂಟ್ ಕಂಪನಿಗಳ ಒಡೆಯ ಎನ್ ಶ್ರೀನಿವಾಸನ್ ಕೂಡಾ ಇಕ್ಕಟ್ಟಿನಲ್ಲಿ ಸಿಲುಕಿದ್ದರು.

ಜಗನ್ ಸಂಸ್ಥೆ ತನಿಖೆ ಭೀತಿ ಎದುರಿಸುತ್ತಿವೆ.

ಜಗನ್ ಸಂಸ್ಥೆ ತನಿಖೆ ಭೀತಿ ಎದುರಿಸುತ್ತಿವೆ.

ಈಗ 10 ಕಂಪನಿಗಳ ಪೈಕಿ 8 ಕಂಪನಿಗಳು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ತನಿಖೆ ಭೀತಿ ಎದುರಿಸುತ್ತಿವೆ. ಸಂಡೂರು ಪವರ್ ಕಂಪನಿ, ಕಾರ್ಮೆಲ್ ಏಷ್ಯಾ ಹೋಲ್ಡಿಂಗ್ಸ್, ಪಿವಿಪಿ ಬಿಸಿನೆಸ್ ವೆಂಚರ್ಸ್, ಜುಬುಲಿ ಮೀಡಿಯಾ ಕಮ್ಯೂನಿಕೇಷನ್ಸ್, ಕ್ಲಾಸಿಕ್ ರಿಯಾಲ್ಟಿ, ಬ್ರಹ್ಮಣಿ ಇನ್ಫ್ರಾಟೆಕ್, ಆರ್ ಆರ್ ಗ್ಲೋಬಲ್ ಎಂಟರ್ ಪ್ರೈಸಸ್ ಹಾಗೂ ಸರಸ್ವತಿ ಪವರ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ ವಿರುದ್ಧ ಯಾವುದೇ ಸಾಕ್ಷಿ ಆಧಾರ ಸಿಗದ ಕಾರಣ ಸಿಬಿಐ ತನ್ನ ತನಿಖೆ ಮುಕ್ತಾಯಗೊಳಿಸಿದೆ.

ನಾಯ್ಡುಗೆ ಸಹಕರಿಸುವುದಾಗಿ ಹೇಳಿದ್ದರು

ನಾಯ್ಡುಗೆ ಸಹಕರಿಸುವುದಾಗಿ ಹೇಳಿದ್ದರು

ಎನ್ ಡಿಎ ಮೈತ್ರಿಕೂಟಕ್ಕೆ ಸದ್ಯ ಇತರ ಯಾವುದೇ ಪಕ್ಷಗಳ ಬೆಂಬಲದ ಅವಶ್ಯಕತೆ ಇಲ್ಲದಿದ್ದರೂ, ಜಗನ್ಮೋಹನ್ ರೆಡ್ಡಿ ತಾನೇ ಮುಂದೆ ಬಂದು ಮೋದಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಮಾತುಕತೆ ನಡೆಸಿದ್ದರು. ಆಂಧ್ರದಲ್ಲಿ ಚಂದ್ರ ಬಾಬು ನಾಯ್ಡುಗೆ ಸಹಕರಿಸುವುದಾಗಿ ಘೋಷಿಸಿದ್ದರು. ಹೀಗಾಗಿ ಕೇಂದ್ರದ ಕೃಪೆ ಸಿಗುವ ಭರವಸೆ ಇತ್ತು. ಆದರೆ ಎಣಿಕೆ ಸುಳ್ಳಾಯ್ತು

ಜಗನ್ ರೆಡ್ಡಿ ಬಿಡುಗಡೆ, ಉದ್ಯಮಿಗಳಿಗೆ ನಿರಾಳ

ಜಗನ್ ರೆಡ್ಡಿ ಬಿಡುಗಡೆ, ಉದ್ಯಮಿಗಳಿಗೆ ನಿರಾಳ

ಸೆ.24, 2013ರಂದು ಜಾಮೀನು ಪಡೆದು ಚಂಚಲಗುಡ ಜೈಲಿನಿಂದ ಹೊರಬಂದ ಜಗನ್ ಅವರಿಗೆ ಸಿಬಿಐ ಭೀತಿ ಬಹುತೇಕ ಕಡಿಮೆಯಾಗಿತ್ತು. ಕಾರಣ ಏಳು ಸಂಸ್ಥೆಗಳಿಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಸಿಬಿಐ ಕೂಡಾ ಚಾರ್ಚ್ ಶೀಟ್ ನಲ್ಲಿ ಕಂಪನಿಗಳ ಹೆಸರು ಉಲ್ಲೇಖಿಸಿರಲಿಲ್ಲ. ಹೀಗಾಗಿ ಅನೇಕ ಉದ್ಯಮಿಗಳು ಹರ್ಷ ವ್ಯಕ್ತಪಡಿಸಿದ್ದರು.

ರಾಜಶೇಖರ್ ರೆಡ್ಡಿ ಆರಂಭಿಸಿದ 'ಇಂದು ಕೈಗಾರಿಕಾ ಕಾರಿಡಾರ್' ಯೋಜನೆ ಒಂದು ಬಿಟ್ಟು ಉಳಿದಂತೆ ಜಗನ್ ಕಂಪನಿಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಯಾವುದೇ ತನಿಖೆ ನಡೆಸುವ ಸಾಧ್ಯತೆ ಕಮ್ಮಿಯಾಗಿದೆ. ಈಗ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಮಾತ್ರ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ ಆದರೆ, ಸಿಬಿಐ ಮತ್ತೊಮ್ಮೆ ಚಾರ್ಜ್ ಶೀಟ್ ಹಾಕುವ ಮೂಲಕ ಬಿಸಿ ಮುಟ್ಟಿಸಿದೆ.

English summary
CBI on Tuesday filed 11th chargesheet in YS Jaganmohan Reddy assets case. A special CBI court here today posted to September 23 the cases of alleged quid pro quo investments involving the firms of YSR Congress chief Y S Jaganmohan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X