ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಗೆ ಸೇರಿದ ಎರಡೂವರೆ ಸಾವಿರ ಕೋಟಿ ರು ಜಪ್ತಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 30: ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರಿಗೆ ಸೇರಿದ ಇನ್ನಷ್ಟು ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಹಾಗೂ ಅವರ ಪುತ್ರ ಜಗನ್ ಗೆ ಸೇರಿದ ಆಸ್ತಿಗಳನ್ನು ಎರಡನೇ ಬಾರಿಗೆ ಜಪ್ತಿ ಮಾಡಲಾಗಿದ್ದು, ಒಟ್ಟಾರೆ ಮೊತ್ತ ಎರಡೂವರೆ ಸಾವಿರ ಕೋಟಿ ರು ದಾಟುತ್ತದೆ.

ಜಾರಿ ನಿರ್ದೇಶಾನಲಯ ಈ ಮುಂಚೆ ನಡೆಸಿದ ದಾಳಿ ಹಾಗೂ ಜಪ್ತಿ ಮಾಡಿದ ಆಸ್ತಿ ಮೊತ್ತ 1,775 ಕೋಟಿ ರು ನಷ್ಟಿತ್ತು. ಬುಧವಾರ (ಜೂನ್ 29) ರಂದು ನಡೆಸಿದ ದಾಳಿಯಲ್ಲಿ 749 ಕೋಟಿ ರು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಒಟ್ಟಾರೆ 2,524 ಕೋಟಿ ರು ಗೂ ಅಧಿಕ ಮೊತ್ತ ಈಗ ಜಾರಿ ನಿರ್ದೇಶನಾಲಯದ ಪಾಲಾಗಿದೆ.[ಜಗನ್ ಆಸ್ತಿ ಕೇವಲ 343 ಕೋಟಿ, ವಾಹನವೇ ಇಲ್ಲ]

Jagan Mohan Reddy's properties attached so far- Rs 2,524 crore and counting

ಆಸ್ತಿ ಜಪ್ತಿ ಪ್ರಕ್ರಿಯೆ ಇಲ್ಲಿಗೆ ನಿಲ್ಲಿಸುವುದಿಲ್ಲ, ತನಿಖೆ ಮುಂದುವರೆದಿದ್ದು, ಇನ್ನಷ್ಟು ದಾಳಿ ನಡೆಸಲಾಗುವುದು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.[ಜಗನ್ ರೆಡ್ಡಿ ವಿರುದ್ಧ 11ನೇ ಚಾರ್ಜ್ ಶೀಟ್ ಸಲ್ಲಿಕೆ]

ಮನಿ ಲಾಂಡ್ರಿಂಗ್ ಕಾಯ್ದೆ(ಪಿಎಎಲ್ಎ) ಅಡಿಯಲ್ಲಿ ಮತ್ತೊಮ್ಮೆ ಜಗನ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಬಿಐ ಈಗಾಗಲೇ ಈ ಕುರಿತಂತೆ ಚಾರ್ಜ್ ಶೀಟ್ ಸಲ್ಲಿಸಿದೆ. ಬೇನಾಮಿ ಕಂಪನಿಗಳನ್ನು ಸ್ಥಾಪಿಸಲು ಲಂಚ ಪಡೆದ ಆರೋಪ ಜಗನ್ ಮೇಲಿದೆ. ರಾಜಶೇಖರ್ ರೆಡ್ಡಿ ಅವರು ಸಿಎಂ ಆಗಿದ್ದ ಕಾಲದಲ್ಲಿ ಎಲ್ಲಾ ಅವ್ಯವಹಾರ ನಡೆದಿದೆ.[ಜಗನ್ ಗೆ ಶಾಕ್: ನೂರಾರು ಕೋಟಿ ಆಸ್ತಿ ಮತ್ತೆ ಜಪ್ತಿ]

Jagan Mohan Reddy's properties attached so far- Rs 2,524 crore and counting

ಇಲ್ಲಿ ತನಕ ಜಪ್ತಿ ಮಾಡಲಾದ ಆಸ್ತಿ: ಜಗನ್ ಒಡೆತನದ ಭಾರತಿ ಸಿಮೆಂಟ್ ಕಾರ್ಪೊರೇಷನ್ ಪ್ರೈ ಲಿಮಿಟೆಡ್ ಕಂಪನಿಗೆ 2007ರ ತನಕ ಯಾವುದೇ ಬಂಡವಾಳ ಹರಿದು ಬಂದಿರಲಿಲ್ಲ. ಆದರೆ, ನಂತರ ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಹಾಗೂ ವ್ಯಾನ್ ಪಿಕ್ ಸಮೂಹದ ಮೂಲಕ ಅಪಾರ ಹಣ ತೊಡಗಿಸಲಾಯಿತು.[ಜಗನ್ ರೆಡ್ಡಿ ಬಿಡುಗಡೆ, ಉದ್ಯಮಿಗಳಿಗೆ ನಿರಾಳ]

ಭಾರತಿ ಸಿಮೆಂಟ್ಸ್, ಸಂಡೂರ್ ಪವರ್ ಪ್ರಾಜೆಕ್ಟ್, ಗುಂಟೂರಿನಲ್ಲಿ 903 ಎಕರೆ ಭೂಮಿ, ಜಗನ್ ಅವರ ಜುಬಿಲಿ ಹಿಲ್ಸ್ ನಲ್ಲಿರುವ ಲೋಟಸ್ ಪಾಂಡ್ ಬಂಗಲೆ, ಬಂಜಾರ ಹಿಲ್ಸ್ ನಲ್ಲಿರುವ ಸಾಕ್ಷಿ ಟವರ್ಸ್, ಹಕೀಂ ಪೇಟ್ ನಲ್ಲಿರುವ ನಿವೇಶನ ಅಲ್ಲದೆ ಹಲವು ಕಂಪನಿಗಳ ಷೇರುಗಳು, ದಾಖಲೆಗಳನ್ನು ಜಾರಿ ನಿರ್ದೇಶನಾಲಾಯ ತನ್ನ ವಶಕ್ಕೆ ಪಡೆದುಕೊಂಡಿದೆ. (ಒನ್ಇಂಡಿಯಾ ಸುದ್ದಿ)

English summary
The Enforcement Directorate (ED) attached more property belonging to Jagan Mohan Reddy, the Chief of the YSR Congress party and son of former Chief Minister of Andhra Pradesh, Y S Rajashekara Reddy on Wednesday. This is the second such exercise that the ED has carried out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X