ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿ ಬಿಡುಗಡೆ, ಉದ್ಯಮಿಗಳಿಗೆ ನಿರಾಳ

By Mahesh
|
Google Oneindia Kannada News

ಹೈದರಾಬಾದ್, ಸೆ.24 : ಅಕ್ರಮ ಆಸ್ತಿ ಪ್ರಕರಣ ಆರೋಪ ಹೊತ್ತು ಜೈಲು ಸೇರಿದ್ದ ಜಗನ್ ಮೋಹನ್ ರೆಡ್ಡಿಗೆ ಜಾಮೀನು ಸಿಗುತ್ತಿದ್ದಂತೆ ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಂಗಳವಾರ(ಸೆ.24) ಚಂಚಲಗುಡ ಜೈಲಿನಿಂದ ಜಗನ್ ಹೊರನಡೆದಿದ್ದಾರೆ

ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಸುಮಾರು ಒಂದು ವರ್ಷದ ನಂತರ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸೆ.23ರಂದು ಜಾಮೀನು ಮಂಜೂರು ಮಾಡಿದೆ.

ಇದರ ಜತೆಗೆ ಏಳು ಸಂಸ್ಥೆಗಳಿಗೂ ಕ್ಲೀನ್ ಚಿಟ್ ಸಿಕ್ಕಿದೆ. ಅಂತಿಮ ವರದಿಯಲ್ಲಿ ಕಂಪನಿಗಳ ಹೆಸರು ಕಾಣಿಸಿಕೊಂಡರೂ ಮತ್ತೆ ಸಿಬಿಐ ಚಾರ್ಚ್ ಶೀಟ್ ಭೀತಿಯಿಂದ ಬಚಾವಾಗಿವೆ.

ಇಂದು ಯೋಜನೆ ಒಂದು ಬಿಟ್ಟು ಉಳಿದಂತೆ ಜಗನ್ ಕಂಪನಿಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಯಾವುದೇ ತನಿಖೆ ನಡೆಸುವ ಸಾಧ್ಯತೆ ಕಮ್ಮಿಯಾಗಿದೆ. ಈಗ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಮಾತ್ರ ತನಿಖೆ ನಡೆಸುವ ಸಾಧ್ಯತೆ ಇದೆ.

Jagan case: CBI clears 8 firms, says no sign of undue favours

ಜಗನ್ ಮೋಹನ್ ರೆಡ್ಡಿ ಹೂಡಿಕೆ ಮಾಡಿದ್ದ 10 ಕಂಪನಿಗಳ ವಿರುದ್ಧ 10 ದೋಷಾರೋಪ ಪಟ್ಟಿಯನ್ನು ಸಿಬಿಐ ತಂಡ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದೆಲ್ಲವೂ ಜಗನ್ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ವ್ಯವಹಾರಗಳಾಗಿತ್ತು.ಈ ಬಗ್ಗೆ ತನಿಖೆ ಪೂರ್ಣಗೊಳಿಸಲಾಗಿದೆ ಎಂದು ಸಿಬಿಐ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಈಗ 10 ಕಂಪನಿಗಳ ಪೈಕಿ 8 ಕಂಪನಿಗಳು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ತನಿಖೆ ಭೀತಿ ಎದುರಿಸುತ್ತಿವೆ. ಸಂಡೂರು ಪವರ್ ಕಂಪನಿ, ಕಾರ್ಮೆಲ್ ಏಷ್ಯಾ ಹೋಲ್ಡಿಂಗ್ಸ್, ಪಿವಿಪಿ ಬಿಸಿನೆಸ್ ವೆಂಚರ್ಸ್, ಜುಬುಲಿ ಮೀಡಿಯಾ ಕಮ್ಯೂನಿಕೇಷನ್ಸ್, ಕ್ಲಾಸಿಕ್ ರಿಯಾಲ್ಟಿ, ಬ್ರಹ್ಮಣಿ ಇನ್ಫ್ರಾಟೆಕ್, ಆರ್ ಆರ್ ಗ್ಲೋಬಲ್ ಎಂಟರ್ ಪ್ರೈಸಸ್ ಹಾಗೂ ಸರಸ್ವತಿ ಪವರ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ ವಿರುದ್ಧ ಯಾವುದೇ ಸಾಕ್ಷಿ ಆಧಾರ ಸಿಗದ ಕಾರಣ ಸಿಬಿಐ ತನ್ನ ತನಿಖೆ ಮುಕ್ತಾಯಗೊಳಿಸಿದೆ.

English summary
The CBI on Monday informed the special court for CBI cases that it could not establish the quid pro quo allegations between Jagan Mohan Reddy and seven firms. This means there will be no further chargesheets in the case except for a final report regarding Indu Projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X