ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ ಜೆ ಸಂಧ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

ಹೈದರಾಬಾದಿನ ರೇಡಿಯೋ ಚಾರ್ಮಿನಾರ್ ನಲ್ಲಿ ಆರ್ ಜೆ ಆಗಿದ್ದ ಸಂಧ್ಯಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವುದ್ ಸಿಕ್ಕಿದ್ದು, ಸಂಧ್ಯಾ ಅವರ ಪತಿ ಆರ್ಮಿ ಆಫೀಸರ್ ವೈಭವ್ ಅವರ ವಿರುದ್ಧ ಕಿರುಕುಳ ಪ್ರಕರಣ ದಾಖಲಾಗಿದೆ.

By Mahesh
|
Google Oneindia Kannada News

ಹೈದರಾಬಾದ್, ಏಪ್ರಿಲ್ 26: ಕಳೆದ ವಾರಾಂತ್ಯದಲ್ಲಿ ಸೂಫಿ ಸಂಗೀತ ಕಾರ್ಯಕ್ರಮವ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ರೇಡಿಯೋ ಚಾರ್ಮಿನಾರ್ ಕೇಂದ್ರದ ರೇಡಿಯೋ ಜಾಕಿ ಸಂಧ್ಯಾ ಸಿಂಗ್ ಅವರು ಸೋಮವಾರದಂದು ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಸಂಧ್ಯಾ ಅವರ ಸಾವಿಗೆ ಮಾನಸಿಕ ಒತ್ತಡವಷ್ಟೇ ಕಾರಣವಲ್ಲ, ವರದಕ್ಷಿಣೆ ಕಿರುಕುಳವೇ ಮುಖ್ಯ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರದಂದು ಕಚೇರಿ ತೊರೆಯುವುದಕ್ಕೂ ಮುನ್ನ ಸಂಧ್ಯಾ ಅವರು ತಮ್ಮ ಸಹದ್ಯೋಗಿ ಅಬ್ದುಲ್ ಸಮದ್ ಅವರೊಂದಿಗೆ ಮಾತನಾಡುತ್ತಾ, 'ಯಾಕೋ ಜೀವನ ಸಾಕಾಗಿ ಹೋಗಿದೆ' ಎಂದಿದ್ದಾರೆ. ಮಂಗಳವಾರ(ಏಪ್ರಿಲ್ 25)ದಂದು ಕೆಲಸಕ್ಕೆ ಹಾಜರಾಗಿರಲಿಲ್ಲ.

ಸಂಧ್ಯಾ ಅವರ ಸೋದರಿ ರಮ್ಯಾ ಅವರು ಸಂಧ್ಯಾ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಂಧ್ಯಾ ಅವರ ಪತಿ ಮೇಜರ್ ವಿಶಾಲ್ ವೈಭವ್ ಅವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ ಮೇಲೆ ಕಚೇರಿ ಸಿಬ್ಬಂದಿಗೆ ಸಂಧ್ಯಾ ಅವರ ಆತ್ಮಹತ್ಯೆ ಸುದ್ದಿ ಮುಟ್ಟಿದೆ.

Hyderabad RJ Sandhya Commits Suicide Army Major Husband booked
54ನೇ ಇನ್ಫ್ರಾಂಟ್ರಿಯ ಮೇಜರ್ ವಿಶಾಲ್ ವೈಭವ್ ವಿರುದ್ದ ಐಪಿಸಿ ಸೆಕ್ಷನ್ 304ಬಿ ಅನ್ವಯ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉತ್ತರಪ್ರದೇಶ ಮೂಲದ ಸಂಧ್ಯಾ ಹಾಗು ವಿಶಾಲ್ ಅವರು 2015ರಲ್ಲಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ವಿಶಾಲ್ ಅವರು ವರದಕ್ಷಿಣೆಗೆ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಹೈದರಾಬಾದಿನ ದಂಡು ಪ್ರದೇಶದಲ್ಲಿ ನೆಲೆಸಿದ ಮೇಲೆ ಸಂಧ್ಯಾ ಅವರಿಗ್ ಕಿರುಕುಳ ಆರಂಭವಾಗಿದೆ.

ಆರೋಪಿ ವಿಶಾಲ್ ಅವರು ಎದೆನೋವು ಎಂದು ಹೇಳಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿಶಾಲ್ ಅವರ ತನಿಖೆಗೆ ಸಹಕರಿಸುವುದಾಗಿ ಆರ್ಮಿ ಭರವಸೆ ನೀಡಿದೆ ಎಂದು ಹೈದರಾಬಾದ್ ಉತ್ತರವಲಯದ ಡಿಸಿಪಿ ಸುಮತಿ ಹೇಳಿದ್ದಾರೆ.

English summary
A Radio Jockey in Hyderabad who was married to an army major killed herself because he harassed her for dowry, according to the police. Sandhya Singh was found hanging last week at the accommodation provided by the army to her husband, Major Vaibhav Vishal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X