ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡ್‌ಹುಡ್‌ ಚಂಡಮಾರುತ ಭೀತಿಯಲ್ಲಿ ವಿಶಾಖಪಟ್ಟಣ

|
Google Oneindia Kannada News

ಹೈದರಾಬಾದ್, ಅ. 11 : ಹುಡ್‌ಹುಡ್ ಚಂಡಮಾರುತ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಿಗೆ ಅಪ್ಪಳಿಸಲು ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಚಂಡಮಾರುತವನ್ನು ಎದುರಿಸಲು ಎರಡೂ ರಾಜ್ಯಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪರಿಹಾರ ಕಾರ್ಯ ಕೈಗೊಳ್ಳಲು ಪಡೆಗಳು ಸನ್ನದ್ಧವಾಗಿವೆ.

ಉತ್ತರ ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಹುಡ್‌ಹುಡ್‌ ಚಂಡಮಾರುತ ಬಿರುಸಿನ ಬಿರುಗಾಳಿಯಾಗಿ ಪರಿವರ್ತನೆಯಾಗಿದ್ದು, ಶನಿವಾರ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಉತ್ತರ ಆಂಧ್ರ ಮತ್ತು ಒಡಿಶಾ ಕರಾವಳಿ ತಲುಪುವ ವೇಳೆಗೆ ಇದು ಮತ್ತಷ್ಟು ಪ್ರಬಲವಾಗಲಿದ್ದು, ಅ.12ರಂದು ಗಂಟೆಗೆ 130 ರಿಂದ 140 ಕಿ.ಮೀಗೆ ವೇಗದಲ್ಲಿ ವಿಶಾಖಪಟ್ಟಣಕ್ಕೆ ಅಪ್ಪಲಿಸಳಿದೆ ಎಂಬ ಲೆಕ್ಕಾಚಾರವಿದೆ.[ಏನಿದು ಹುಡ್ ಹುಡ್ ಚಂಡಮಾರುತ]

ಹುಡ್‌ಹುಡ್‌ ಚಂಡಮಾರುತ ಆಂಧ್ರಪ್ರದೇಶ, ತೆಲಂಗಾಣ ಮತ್ತು ಒರಿಸ್ಸಾ ರಾಜ್ಯ­ಗಳಲ್ಲಿ ಹಾದು ಹೋಗಲಿದ್ದು, ಎಲ್ಲಾ ರಾಜ್ಯಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶನಿವಾರ ಸಂಜೆಯಿಂದಲೇ ಮಳೆ ಆರಂಭವಾಗಲಿದ್ದು, ಭಾನುವಾರ ಚಂಡಮಾರುತ ವಿಶಾಖಪಟ್ಟಣಕ್ಕೆ ಅಪ್ಪಳಿಸಲಿದೆ. ಕರಾವಳಿ ಜಿಲ್ಲೆಗಳಲ್ಲಿ 146 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ನೆರೆ ಪರಿಹಾರ ಕಾರ್ಯ ಕೈಗೊಳ್ಳಲು ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ. ವಿಶಾಖಪಟ್ಟಣ ಕರಾವಳಿ ಚಿತ್ರಗಳನ್ನು ನೋಡಿ

ಹುಡ್‌ಹುಡ್‌ ಆಗಮಿಸಲು ಕೆಲವು ಗಂಟೆಗಳು ಬಾಕಿ

ಹುಡ್‌ಹುಡ್‌ ಆಗಮಿಸಲು ಕೆಲವು ಗಂಟೆಗಳು ಬಾಕಿ

ವಿಶಾಖಪಟ್ಟಣ ಕರಾವಳಿಗೆ ಹುಡ್‌ಹುಡ್‌ ಚಂಡಮಾರುತ ಅಪ್ಪಳಿಸಲು ಕೆಲವು ಗಂಟೆಗಳು ಬಾಕಿ ಉಳಿದಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಭಾನುವಾರ ಮಧ್ಯಾಹ್ನ ವಿಶಾಖಪಟ್ಟಣಕ್ಕೆ ಹುಡ್‌ಹುಡ್‌ ಅಪ್ಪಳಿಸಲಿದೆ.

140 ಕಿ.ಮೀ.ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ

140 ಕಿ.ಮೀ.ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ

ಉತ್ತರ ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಹುಡ್‌ಹುಡ್‌ ಚಂಡಮಾರುತ ಅ.12ರಂದು ಗಂಟೆಗೆ 130 ರಿಂದ 140 ಕಿ.ಮೀಗೆ ವೇಗದಲ್ಲಿ ವಿಶಾಖಪಟ್ಟಣಕ್ಕೆ ಅಪ್ಪಲಿಸಳಿದೆ ಎಂಬ ಲೆಕ್ಕಾಚಾರವಿದೆ. ಆದ್ದರಿಂದ ಸಮುದ್ರದ ಬಳಿ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಸಾವಿರಾರು ಜನರ ಸ್ಥಳಾಂತರ

ಸಾವಿರಾರು ಜನರ ಸ್ಥಳಾಂತರ

ಹುಡ್‌ಹುಡ್‌ ಅಪ್ಪಳಿಸುವ ಹಿನ್ನಲೆಯಲ್ಲಿ ವಿಶಾಖಪಟ್ಟಣ ಜಿಲ್ಲೆಯಿಂದ 24 ಸಾವಿರ, ವಿಜಯನಗರಂನಿಂದ 15 ಸಾವಿರ, ಶ್ರೀಕಕುಲಂನಿಂದ 46 ಸಾವಿರ, ಪೂರ್ವ ಗೋದಾವರಿ ಭಾಗದಿಂದಲೂ ಹಲವು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ದಡ ಸೇರಿದ ದೋಣಿಗಳು

ದಡ ಸೇರಿದ ದೋಣಿಗಳು

ಭಾನುವಾರ ಹುಡ್‌ಹುಡ್‌ ಚಂಡಮಾರುತ ಅಪ್ಪಳಿಸುವುದರಿಂದ ಮೀನುಗಾರಿಕೆ ನಡೆಸುವವರಿಗೆ ಮುನ್ಸೂಚನೆ ನೀಡಲಾಗಿದ್ದು, ಎಲ್ಲಾ ದೋಣಿಗಳನ್ನು ದಡಕ್ಕೆ ತಂದು ನಿಲ್ಲಿಸಲಾಗಿದೆ. ಮುಂದಿನ ಸೂಚನೆ ತನಕ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ನಿರ್ದೇಶನ ನೀಡಲಾಗಿದೆ.

ಯಾವ ರಾಜ್ಯಗಳಿಗೆ ಹೆಚ್ಚು ಅಪಾಯ

ಯಾವ ರಾಜ್ಯಗಳಿಗೆ ಹೆಚ್ಚು ಅಪಾಯ

ಹುಡ್‌ಹುಡ್‌ ಚಂಡಮಾರುತ ಆಂಧ್ರಪ್ರದೇಶ, ತೆಲಂಗಾಣ ಮತ್ತು ಒರಿಸ್ಸಾ ರಾಜ್ಯ­ಗಳಲ್ಲಿ ಹಾದು ಹೋಗಲಿದ್ದು, ಎಲ್ಲಾ ರಾಜ್ಯಗಳಲ್ಲಿ ಚಂಡಮಾರುತ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 146 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರ ಸಹ ರಾಜ್ಯಗಳಿಗೆ ಅಗತ್ಯ ಸಹಾಯ ನೀಡುವುದಾಗಿ ಹೇಳಿಕೆ ನೀಡಿದೆ.

ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಹುಡ್‌ಹುಡ್‌ ಚಂಡಮಾರುತದಿಂದ ಭಾರೀ ಮಳೆಯಾಗಲಿದ್ದು., ಸಂವಹನ ವ್ಯವಸ್ಥೆಗೆ ಧಕ್ಕೆಯಾಗಲಿದೆ. ವಿದ್ಯುತ್ ಸಂಪರ್ಕಕ್ಕೆ ತೊಂದರೆ ಉಂಟಾಗಲಿದೆ. ನೆರೆ ಭೀತಿಯೂ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಂಟ್ರೋಲ್ ರೂಂ ಆರಂಭ

ಕಂಟ್ರೋಲ್ ರೂಂ ಆರಂಭ

ಹುಡ್‌ಹುಡ್‌ ಚಂಡಮಾರುತದಿಂದ ತೊಂದರೆಗೆ ಸಿಲುಕುವ ಜನರ ಸಹಾಯಕ್ಕಾಗಿ ಕಂಟ್ರೋಲ್‌ ರೂಂಗಳನ್ನು ಆರಂಭಿಸಲಾಗಿದೆ. ಪೂರ್ವ ಗೋದಾವರಿ 088-42359173, ವಿಶಾಖಪಟ್ಟಣಂ 1800-42500002, ಶ್ರೀಕಾಕುಲಂ 1800-4256625, ವಿಜಯನಗರಂ 0892-2276888.

ರಕ್ಷಣಾ ಪಡೆಗಳು ಸಿದ್ಧವಾಗಿವೆ

ರಕ್ಷಣಾ ಪಡೆಗಳು ಸಿದ್ಧವಾಗಿವೆ

ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 11 ತಂಡಗಳು ಸಿದ್ಧವಾಗಿವೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚ­ರಣೆ­ಯಲ್ಲಿ ನೆರವಾಗು­ವು­ದಕ್ಕಾಗಿ ವಿಶಾಖ­ಪಟ್ಟಣದಲ್ಲಿ ಸೇನೆಯ 250 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

146 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ

146 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ

ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ 146 ಚಂಡಮಾರುತ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಪರಿಹಾರ ಕೇಂದ್ರಗಳಿಗೆ ಜನರನ್ನು ಕರೆದುಕೊಂಡು ಬರಲು ಅಗತ್ಯ ಸಾರಿಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಸರಣಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿಗಳು

ಸರಣಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿಗಳು

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮುಖ್ಯ ಕಾರ್ಯ­ದರ್ಶಿ­ಯವರೊಂದಿಗೆ ಮಾತುಕತೆ ನಡೆಸಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ರಕ್ಷಣಾ ಕಾರ್ಯಗಳ ಕುರಿತ ನಿರ್ದೇಶನ ಸೂಚನೆ ನೀಡುತ್ತಿದ್ದಾರೆ.

ಓರಿಸ್ಸಾದಲ್ಲಿ ಹುಡ್‌ಹುಡ್‌ ಎದುರಿಸಲು ಸಿದ್ಧ

ಒರಿಸ್ಸಾದಲ್ಲಿ ವಿಮಾನ ಮತ್ತು ರೈಲು ಸೇವೆಯನ್ನು ಸ್ಥಗಿತಗೊಳಿಸಳಾಗಿದೆ.

English summary
Hudhud Cyclone is expected to make landfall in Vishakhapatnam district of Andhra Pradesh on Sunday, October 12. 24,000 people evacuated from Visakhapatnam on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X