ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ತಜ್ಞ ಉಗ್ರ ಖಾಲಿದ್ ಎನ್ಐಎ ಬಲೆಗೆ

By Mahesh
|
Google Oneindia Kannada News

ಹೈದರಾಬಾದ್, ನ.18: ಪಶ್ಚಿಮ ಬಂಗಾಳದ ಬುರ್ದ್ವಾನ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಕಂಡುಬಂದಿದೆ. ರಾಷ್ಟ್ರೀಯ ತನಿಖಾ ದಳ (ಎನ್‍ಐಎ)ದ ಅಧಿಕಾರಿಗಳು ಶಂಕಿತ ಉಗ್ರನನ್ನು ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ.

ಮ್ಯಾನ್ಮಾರ್-ಬಾಂಗ್ಲಾ ಗಡಿಯಲ್ಲಿ ಉಗ್ರರ ಶಿಬಿರಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಬರ್ಮಾ ದೇಶದ ಖಲೀದ್ ಎಂಬಾತನನ್ನು ಶಂಕೆಯ ಮೇರೆಗೆ ಎನ್‍ಐಎ ಅಧಿಕಾರಿಗಳು ಹೈದರಾಬಾದಿನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತ ಖಲೀದ್ ಭಾರತದಲ್ಲಿ ದುಷ್ಕೃತ್ಯ ನಡೆಸಲು ಮ್ಯಾನ್‍ಮಾರ್-ಬಾಂಗ್ಲಾ ಗಡಿಯಲ್ಲಿ ಉಗ್ರರ ಶಿಬಿರಗಳನ್ನು ತೆರೆದಿದ್ದ. ಅಲ್ಲದೆ ಈತ ಉಗ್ರರಿಗೆ ಅಗತ್ಯ ಬಾಂಬ್, ಸುಧಾರಿತ ಬಂದೂಕುಗಳನ್ನು ತಯಾರಿಸುವುದರಲ್ಲಿ ನಿಪುಣನಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Fresh arrest in Hyderabad exposes Myanmar link with Burdwan blasts

ಪಾಕಿಸ್ತಾನ ಮೂಲದ ತೆಹ್ರಿಕ್-ಇ-ತಾಲಿಬಾನ್ ಮೂಲದ ಉಗ್ರಗಾಮಿ ಸಂಘಟನೆ ಜೊತೆ ಈತ ಸಂಪರ್ಕ ಹೊಂದಿದ್ದ ಖಾಲಿದ್ ಇರಾಕಿನ ಐಎಸ್‍ಐಎಸ್ ಉಗ್ರಗಾಮಿ ಸಂಘಟನೆಗಳಿಗೆ ಉಗ್ರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಎಂದು ತಿಳಿದು ಬಂದಿದೆ. ಖಾಲಿದ್ ಮೂಲತಃ ರೊಹಿಂಗಿಯಾ ಸಂಘಟನೆಯ ಸದಸ್ಯನಾಗಿದ್ದಾನೆ.

ಭಯೋತ್ಪಾದನೆ ಬಗ್ಗೆ ಒಲವು ಹೊಂದಿರುವ ಯುವಕರನ್ನು ಸೇರ್ಪಡೆ ಮಾಡಿಕೊಳ್ಳಲು ಈತ ಕಾರ್ಯೋನ್ಮುಖವಾಗಿದ್ದ. ಕೆಲವು ಮುಸ್ಲಿಂ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿದ್ದ. ಯುವರಿಗೆ ವಿಶೇಷ ಉಪನ್ಯಾಸ ನೀಡಲು ಶಿಬಿರಗಳನ್ನು ಆಯೋಜಿಸುತ್ತಿದ್ದ. ಈತನ ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಎನ್‍ಐಎ ಅಧಿಕಾರಿಗಳು ಹೈದರಾಬಾದಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರ ಕೊಲ್ಕತ್ತಾದ ಸಿಆರ್ ಪಿಎಫ್ ಕಚೇರಿ ಬಳಿ ಉಗ್ರರು ಕಚ್ಚಾ ಬಾಂಬ್ ಸ್ಫೋಟಿಸಲು ವಿಫಲ ಪ್ರಯತ್ನ ನಡೆಸಿದ್ದರು. ಅಧಿಕಾರಿಗಳು ಮತ್ತು ಜನರಲ್ಲಿ ಭಯಭೀತಿ ವಾತಾವರಣ ನಿರ್ಮಿಸುವುದು ಇದರ ಉದ್ದೇಶವಾಗಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರು ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖಾಲಿದ್ ಬಳಿ ಇದ್ದ ನಕಲಿ ಪಾಸ್ ಪೋರ್ಟ್ ಹಾಗೂ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.

English summary
A crucial arrest was made by the National Investigation Agency (NIA) in connection to the October 2 Burdhwan blasts on Tuesday. The arrested person is named Khalid Mohammad and is 28 year-old. He is a resident of Myanmar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X