ಡ್ರಗ್ಸ್ ಕೇಸ್: ವಿಚಾರಣೆಗೆ ಹಾಜರಾದ ನಟಿ ಚಾರ್ಮಿ ಕೌರ್

Posted By:
Subscribe to Oneindia Kannada

ಹೈದರಾಬಾದ್, ಜುಲೈ 26: ತೆಲಂಗಾಣ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡದ(SIT) ಎದುರು ಬಹುಭಾಷಾ ನಟಿ ಚಾರ್ಮಿ ಕೌರ್ ಅವರು ಬುಧವಾರದಂದು ವಿಚಾರಣೆಗೆ ಹಾಜರಾಗಿದ್ದಾರೆ.

ಮ್ಯಾನೇಜರ್ ಬಂಧನ ಆಘಾತಕಾರಿ, ತನಿಖೆಗೆ ಸಹಕರಿಸುವೆ: ಕಾಜಲ್

ಚಾರ್ಮಿ ಅವರು, ವಿಶೇಷ ತನಿಖಾ ತಂಡದ ವಿಚಾರಣೆಗೆ ಹಾಜರಾಗಿರುವ ತೆಲುಗು ಚಿತ್ರರಂಗದ ಏಳನೆ ವ್ಯಕ್ತಿಯಾಗಿದ್ದಾರೆ. ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ಚಿತ್ರರಂಗದ ನಿರ್ದೇಶಕರು ಹಾಗೂ ನಟಿಯರು ಸೇರಿದಂತೆ ಒಟ್ಟು 12 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದೆ.

Drug Racket case: SIT quiz Actress Charmi Kaur


ಚಾರ್ಮಿಗೆ ರಿಯಾಯಿತಿ:
ತನ್ನ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಸುವಂತೆ ಕೋರಿ ಚಾರ್ಮಿ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಹೈದರಾಬಾದ್ ಹೈಕೋರ್ಟ್ ಮಂಗಳವಾರ ನಿರಾಕರಿಸಿತ್ತು.

ಆದರೆ, ಇತರೆ ಬೇಡಿಕೆಗಳಾದ ಬೆಳಗ್ಗೆ 10ರಿಂದ ಸಂಜೆ 5ರ ಅವಧಿಯಲ್ಲಿ ವಿಚಾರಣೆ, ಮಹಿಳಾ ಅಧಿಕಾರಿಯ ಸಮ್ಮುಖದಲ್ಲಿ ವಿಚಾರಣೆಗೆ ಹೈಕೋರ್ಟ್ ಸಮ್ಮತಿಸಿದೆ. ಜತೆಗೆ ಕೌರ್ ಸಮ್ಮತಿಯಿಲ್ಲದೆ ಆಕೆಯ ರಕ್ತ, ಕೂದಲು ಹಾಗೂ ಉಗುರಿನ ಸ್ಯಾಂಪಲ್‌ನ್ನು ಸಂಗ್ರಹಿಸಬಾರದು ಎಂದು ಹೈಕೋರ್ಟ್ ಸೂಚಿಸಿದೆ.

ಈ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಲ್ವಿನ್ ಮ್ಯಾಸ್ಕರೆನ್ಹಸ್ ನೀಡಿರುವ ಮಾಹಿತಿಯಂತೆ ಚಿತ್ರರಂಗದ ಅನೇಕ ಮಂದಿ ಈತನ ಗ್ರಾಹಕರಾಗಿದ್ದಾರೆ.

Drug Racket case: SIT quiz Actress Charmi Kaur

ಈತನ ಬಳಿ ಹಲವಾರು ಸಿಮ್ ಕಾರ್ಡ್ ಗಳಿದ್ದು, 1,500ಕ್ಕೂ ಅಧಿಕ ನಂಬರ್ ಗಳಿವೆ. ಇವುಗಳಲ್ಲಿ ಹಲವಾರು ಸೆಲೆಬ್ರಿಟಿಗಳ ಸಂಪರ್ಕ ಸಂಖ್ಯೆಗಳಿವೆ. ತೆಲುಗು ನಟ ಪಲ್ಲಪೊಲ್ಲು ನವದೀಪ್, ತರುಣ್ ಕುಮಾರ್, ಪಿ ಸುಬ್ಬರಾಜು, ನಟಿ ಚಾರ್ಮಿ ಕೌರ್ ಹಾಗೂ ಮುಮೈತ್ ಖಾನ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿಯಾಗಿದೆ.

ಈತನಕ ನಿರ್ದೇಶಕ ಧರ್ಮರಾವ್, ಚಿತ್ರ ನಿರ್ಮಾಪಕ ಪುರಿ ಜಗನ್ನಾಥ್, ಸಿನೆಮಾಟೊಗ್ರಾಫರ್ ಶ್ಯಾಮ್ ಕೆ. ನಾಯ್ಡು ಹಾಗೂ ನಟರಾದ ಸುಬ್ಬಾ ರಾಜು, ತರುಣ್‌ಕುಮಾರ್ ಹಾಗೂ ಪಿ.ನವ್‌ದೀಪ್‌ರನ್ನು ವಿಚಾರಣೆ ನಡೆಸಲಾಗಿದೆ. 2002ರಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿರುವ ಚಾರ್ಮಿ ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.

IPL 2017: Hyderabad Posts 191/4 | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Drug Racket case: Actress Charmi Kaur appears before Special Investigation Team today (July 6). She approached the High Court and filed a petition against SIT investigation in the drug racket case
Please Wait while comments are loading...