ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ತೂರಿನ ಮೇಯರ್ ಅನುರಾಧಾ ಗುಂಡಿನ ದಾಳಿಗೆ ಬಲಿ

By ವಿಕಾಸ್ ನಂಜಪ್ಪ
|
Google Oneindia Kannada News

ಹೈದರಾಬಾದ್, ನ.17: ಚಿತ್ತೂರು ನಗರದ ಮೇಯರ್ ಅನುರಾಧಾ ಅವರನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಅನುರಾಧಾ ಅವರ ಪತಿ ಮೋಹನ್ ಅವರು ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕ ಮೂಲದ ಸುಪಾರಿ ಕಿಲ್ಲರ್ಸ್ ಗಳು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೇಯರ್ ಅನುರಾಧಾ ಹಾಗೂ ಅವರ ಪತಿ ಮೋಹನ್ ಅವರ ಮೇಲೆ ಗುಂಡಿನ ದಾಳಿ ನಡೆಸಿ, ಕತ್ತಿಯಿಂದ ಹಲ್ಲೆ ಮಾಡಲಾಗಿದೆ. ಅನುರಾಧಾ ಅವರು ದಾಳಿಯಿಂದ ಮೃತ ಪಟ್ಟಿದ್ದು, ಮೋಹನ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಂಧ್ರಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್ ಪಿ ಠಾಕೂರು ಹೇಳಿದ್ದಾರೆ.

Chittoor Mayor Anuradha shot dead; her husband critical

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ತವರು ನಗರ ಚಿತ್ತೂರಿನ ಮುನ್ಸಿಪಾಲ್ ಕಾರ್ಪೊರೇಷನ್ ಕಚೇರಿಯಲ್ಲೇ ಈ ಕೃತ್ಯ ನಡೆದಿರುವುದು ಜನತೆಯನ್ನು ಆಂತಕಕ್ಕೀಡು ಮಾಡಿದೆ.

ಚಿತ್ತೂರು ಮೇಯರ್ ಹತ್ಯೆಗೆ ಕಾರಣವೇನು?: ಚಿತ್ತೂರು ಮೇಯರ್ ಕಠಾರಿ ಅನುರಾಧಾ ಮೋಹನ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಐವರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ಈಗಾಗಲೇ ಶರಣಾಗಿದ್ದಾರೆ.

ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗೆ ಆಗಮಿಸಿದ ಐವರು ಆರೋಪಿಗಳು ಅನುರಾಧಾ ಹಾಗೂ ಅವರ ಪತಿ ಮೋಹನ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅನುರಾಧಾ ಅವರು ಆಡಳಿತಾರೂಢ ತೆಲುಗು ದೇಶಂ ಪಕ್ಷದವರಾಗಿದ್ದು, ರಾಜಕೀಯ ವೈರತ್ವ ಇರಬಹುದೇ ಎಂಬ ಪ್ರಶ್ನೆಯೂ ಎದ್ದಿದೆ.

ಪ್ರಾಥಮಿಕ ಹಂತದ ತನಿಖೆಯಿಂದ ಶೂಟರ್ ಗಳು ಕರ್ನಾಟಕ ಮೂಲದವರಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಕೌಟುಂಬಿಕ ಕಲಹ, ರಾಜಕೀಯ ದ್ವೇಷ ಹೀಗೆ ನಾನಾ ಕೋನಗಳಿಂದ ತನಿಖೆ ಮುಂದುವರೆದಿದೆ. (ಒನ್ ಇಂಡಿಯಾ ಸುದ್ದಿ)

English summary
In a shocking incident, Anuradha the Mayor of Chittoor, Andhra Pradesh was shot dead on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X