ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ನವರನ್ನೇ ಯಾಮಾರಿಸಲು ಯತ್ನಿಸಿದ ವ್ಯಕ್ತಿಯ ಬಂಧನ

ಎರಡು ಸಾವಿರ ಮತ್ತು ಐನೂರು ಮುಖಬೆಲೆಯ ನಕಲಿ ನೋಟುಗಳನ್ನು ಬ್ಯಾಂಕಿಗೆ ಜಮಾ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.

|
Google Oneindia Kannada News

ಹೈದರಾಬಾದ್‌, ಮಾರ್ಚ್. 14 : ಎರಡು ಸಾವಿರ ಮತ್ತು ಐನೂರು ಮುಖಬೆಲೆಯ ನಕಲಿ ನೋಟುಗಳನ್ನು ಬ್ಯಾಂಕಿಗೆ ಜಮಾ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಹೈದರಾಬಾದ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಯೂಸೂಫ್ ಶೇಖ್ ಎಂಬ ವ್ಯಕ್ತಿ ಮಲ್ಕಾಜಗಿರಿಯದ ಅಲಹಾಬಾದ್‌ ಬ್ಯಾಂಕಿನಲ್ಲಿ ನಕಲಿ ನೋಟುಗಳನ್ನು ಜಮಾ ಮಾಡಲು ಬ್ಯಾಂಕಿಗೆ ಬಂದಿದ್ದಾನೆ.[ಹೈದರಾಬಾದ್: 1.2 ಕೋಟಿ ಹಳೆ ನೋಟು ವಿನಿಮಯ, 16 ಜನರ ಬಂಧನ]

A man arrested for trying to deposit fake new Rs 500 and 2000 notes in Hyderabad

ಸಂದೇಹಗೊಂಡ ಬ್ಯಾಂಕ್‌ ಸಿಬ್ಬಂದಿ ನೋಟಿನ ಪರಿಶೀಲನೆ ನಡೆಸಿದ ವೇಳೆ 2000 ಮತ್ತು 500 ರ ಮುಖಬೆಲೆಯ 9.9 ಲಕ್ಷ ರು ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿವೆ.

ಹಣ ಎಣಿಕೆ ಮಾಡುತ್ತಿದ್ದ ಕ್ಯಾಶಿಯರ್ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಚಿಲ್ರ್ಡನ್ಸ್ ಬ್ಯಾಂಕ್‌ ಆಫ್‌ ಇಂಡಿಯಾ ಎಂದು ನೋಟಿನ ಮೇಲೆ ನಮೂದಾಗಿರುವುದು ಕಾಣಿಸಿದೆ. ಕೂಡಲೇ ಬ್ಯಾಂಕ್‌ ಮ್ಯಾನೇಜರ್‌ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಶೇಖ್ ಗೆ ಅನುಮಾನ ಬಾರದಂತೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬ್ಯಾಂಕಿಗೆ ಆಗಮಿಸಿದ ಕುಶೈಗುಡಾ ಪೊಲೀಸರು ಶೇಖ್ ನನ್ನು ವಶಕ್ಕೆ ಪಡೆದಿದ್ದಾರೆ.

English summary
Hyderabad: A man arrested for trying to deposit Rs 9.90 lakhs of fake new Rs 500 & Rs 2000 notes in a bank in Malkajgiri area on March 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X