ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟಿಗೆ ಉಂಡೆನಾಮ ತಿಕ್ಕಿದ ಐನಾತಿ ಗ್ರಾಹಕ

By Mahesh
|
Google Oneindia Kannada News

ಹೈದರಾಬಾದ್, ಅಕ್ಟೋಬರ್ 01: ಇ ಕಾರ್ಮಸ್ ಕ್ಷೇತ್ರದ ಜನಪ್ರಿಯ ಆನ್ ಲೈನ್ ಶಾಪಿಂಗ್ ಮಳಿಗೆ ಫ್ಲಿಪ್ ಕಾರ್ಟಿನಲ್ಲಿ ಐಫೋನ್ ಬುಕ್ ಮಾಡಿದರೆ ಕಲ್ಲು, ಮರದ ತುಂಡು ಕಳಿಸಿದರು ಎಂದು ಗ್ರಾಹಕರು ಈ ಹಿಂದೆ ದೂರಿದ್ದನ್ನು ಓದಿರಬಹುದು. ಈಗ ಇಲ್ಲೊಬ್ಬ ಐನಾತಿ ಗ್ರಾಹಕ ಫ್ಲಿಪ್ ಕಾರ್ಟ್ ಸಂಸ್ಥೆಗೆ ಉಂಡೆನಾಮ ತಿಕ್ಕಿರುವ ಘಟನೆ ನಡೆದಿದೆ.

ಫ್ಲಿಪ್ ಕಾರ್ಟ್ ನಿಂದ ಅನೇಕ ಗ್ಯಾಡ್ಜೆಟ್ ಗಳನ್ನು ಖರೀದಿಸಿದ ವ್ಯಕ್ತಿಯೊಬ್ಬ ಅವರನ್ನು ರಿಜೆಕ್ಟ್ ಮಾಡಿ ಹಿಂತಿರುಗಿಸುವಾಗ ತನ್ನ ಕೈಚಳಕ ತೋರಿದ್ದಾನೆ. ಅಸಲಿ ಮಾಲ್ ಬದಲು ನಕಲಿ ಸಾಧನಗಳನ್ನು ಡಬ್ಬಿಯಲ್ಲಿ ತುಂಬಿ ಕಳಿಸಿದ್ದಾನೆ. ಕಚೇರಿಗೆ ಬಂದ ಪಾರ್ಸೆಲ್ ತೆರೆದ ಫ್ಲಿಪ್ ಕಾರ್ಟ್ ಸಿಬ್ಬಂದಿ ಹೌಹಾರಿದ್ದಾರೆ. ಪ್ರಕರಣ ಈಗ ವನಸ್ಥಲಿಪುರಂ ಪೊಲೀಸ್ ಠಾಣೆ ಮೆಟ್ಟಿಲೇರಿದೆ.['ಬಿಗ್ ಬಿಲಿಯನ್‌ ಡೇ' ನಂತರ ಬಿಗ್ ಬಿಲಿಯನ್ ಸೇಲ್]

A Customer Dupes Flipkart
ಫ್ಲಿಫ್ ಕಾರ್ಟ್ ನೀಡಿರುವ ದೂರಿನ ಪ್ರಕಾರ ವೀರ ರೆಡ್ಡಿ ಎಂಬ ವನಸ್ಥಲಿಪುರಂನ ನಿವಾಸಿ ಇತ್ತೀಚಿಗೆ ಅನೇಕ ಎಲೆಕ್ಟ್ರಾನಿಕ್ ಸಾಧನಗಳನ್ನು ಆನ್ ಲೈನ್ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಬುಕ್ ಮಾಡಿದ್ದರು.

ಆದರೆ, ಎಲ್ಲಾ ಉತ್ಪನ್ನಗಳು ಕೈ ಸೇರಿದ ಮೇಲೆ ಸುಳ್ಳು ಆರೋಪ ಹೊರೆಸಿ, ಉತ್ಪನ್ನಗಳನ್ನು ರಿಟರ್ನ್ ಮಾಡಿ ನನಗೆ ಬದಲಿ ಉತ್ಪನ್ನ ಕಳಿಸಿ ಎಂದಿದ್ದಾರೆ. ಇದಕ್ಕೆ ನಮ್ಮ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಅದರೆ, ರಿಟರ್ನ್ ಮಾಡಿದ ವಸ್ತುಗಳಲ್ಲಿ ಯಾವುದೂ ನಾವು ಕಳಿಸಿದ ಅಸಲಿ ಮಾಲ್ ಇರಲಿಲ್ಲ ಎಂದು ದೂರಿನಲ್ಲಿ ಹೇಳಿದೆ. [ಟೆಕ್ಕಿಗಳ ಅಕೌಂಟಿಗೆ ಕನ್ನ ಹಾಕಿದ ಹ್ಯಾಕರ್!]

ಫ್ಲಿಪ್ ಕಾರ್ಟ್ ನೀಡಿದ ದೂರಿನ ಪ್ರಕಾರ ಸುಮಾರು 250ಕ್ಕೂ ಅಧಿಕ ಉತ್ಪನ್ನಗಳನ್ನು ಆತ ಖರೀದಿಸಿದ್ದಾನೆ. ಎಲ್ಲವನ್ನು ತನ್ನ ತಾಯಿ, ಪತ್ನಿ ಹಾಗೂ ಸೋದರನ ಹೆಸರಿನಲ್ಲಿ ಬುಕ್ ಮಾಡಿದ್ದಾನೆ. ಎಲ್ಲವೂ ಹೊಸದಾಗಿ ಹುಟ್ಟುಹಾಕಿದ ಇ ಮೇಲ್ ಐಡಿ ಗಳಾಗಿವೆ. ಒಟ್ಟಾರೆ 30 ಲಕ್ಷ ರು ಸಂಸ್ಥೆಗೆ ನಷ್ಟವಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ಉತ್ಪನ್ನ ರವಾನೆ ಮಾಡುವ ಕೊರಿಯರ್ ಸಂಸ್ಥೆಯನ್ನು ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗ್ರಾಹಕನ ಹುಡುಕಾಟದಲ್ಲಿದ್ದಾರೆ.

English summary
A resident of Vanasthalipuram named Veera Reddy alleged e-commerce firm Flipkart. Veera Reddy received various gadgets and file false complaints against the products, while returning the parcel he replace original with duplicate products said Flipkart in its complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X