ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ.2ರಿಂದ ಯಶವಂತಪುರದಿಂದ ಪಂಢರಪುರಕ್ಕೆ ವಿಶೇಷ ರೈಲು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ, 21 : ಬೇಸಿಗೆ ರಜೆಯಲ್ಲಿನ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈಋತ್ಯ ರೈಲ್ವೆ ಇಲಾಖೆಯು ಯಶವಂತಪುರ ಮತ್ತು ಮಹಾರಾಷ್ಟ್ರದ ಪಂಢರಪುರ ಮಧ್ಯೆ ವಿಶೇಷ ಸಾಪ್ತಾಹಿಕ ತತ್ಕಾಲ್ ರೈಲ್ ಓಡಿಸಲು ನಿರ್ಧರಿಸಿದೆ.

ಈ ಮಾರ್ಚ್ 2 ರಿಂದ ಜೂನ್ 20 ರವರೆಗೆ ಸಂಚರಿಸಲಿದ್ದು ಪ್ರತಿ ಗುರುವಾರ ಸಂಜೆ 6ಕ್ಕೆ ಯಶವಂತಪುರದಿಂದ ಹೊರಡುವ ಈ ರೈಲು (06541) ಶುಕ್ರವಾರ ಬೆಳಗ್ಗೆ 11-35ಕ್ಕೆ ಪಂಢರಪುರವನ್ನು ತಲುಪಲಿದೆ.

ಪಂಢರಪುರದಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 1.35 ಕ್ಕೆ ಹೊರಡುವ ರೈಲು (06542) ಶನಿವಾರ ಬೆಳಗ್ಗೆ 6.20ಕ್ಕೆ ಯಶವಂತಪುರಕ್ಕೆ ಬಂದು ತಲುಪಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Yeshwantpur to Pandharpur special train from March 2 to June 20

ಈ ರೈಲು ಯಶವಂತಪುರದಿಂದ ತುಮಕೂರು, ದಾವಣಗೆರೆ, ಹುಬ್ಬಳ್ಳಿಗೆ ಬೆಳಗಿನ 2 ಗಂಟೆ ಹೊತ್ತಿಗೆ ತಲುಪಲಿದೆ. ಅಲ್ಲಿಂದ ಬಾಗಲಕೋಟೆ ಮಾರ್ಗವಾಗಿ ಪಂಢರಪುರಕ್ಕೆ ತೆರಳಿಲಿದೆ.

ನಿಲುಗಡೆ ಮುಂದುವರಿಕೆ: ನಿಂಬಾಳ ರೈಲ್ವೆ ನಿಲ್ದಾಣದಲ್ಲಿ ಕಲ್ಪಿಸಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ಮುಂದಿನ ಆದೇಶದವರೆಗೂ ಮುಂದುವರೆಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಹುಬ್ಬಳ್ಳಿ-ಲೋಕಮಾನ್ಯ ಟಿಳಕ್ ಟರ್ಮಿನಲ್-ಹುಬ್ಬಳ್ಳಿ, ಮೈಸೂರು- ಸೊಲ್ಲಾಪುರ-ಸಾಯಿನಗರ ಶಿರಸಿ-ಮೈಸೂರು ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ.

ರೈಲು ಸೇವೆ ಮುಂದುವರಿಕೆ: ಯಶವಂತಪುರದಿಂದ ಸಂಬಲ್ ಪುರಕ್ಕೆ ತೆರಳುವ ಸಾಪ್ತಾಹಿಕ ವಿಶೇಷ ರೈಲನ್ನು (82831/82832) ಮುಂದಿನ ಆದೇಶದವರೆಗೆ ಮುಂದುವರಿಸಲಾಗಿದೆ.

ಪ್ರತಿ ಬುಧವಾರದಿಂದ ಸಂಬಲ್ ಪುರದಿಂದ ಹೊರಡುವ ರೈಲು ಗುರುವಾರ ಸಂಜೆ 4.30ಕ್ಕೆ ಯಶವಂತಪುರ ತಲುಪಲಿದ್ದು, ಈ ರೈಲು ಜೂನ್ 28 ವರೆಗೆ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

English summary
A one-way express special train will operate between Yeshwantpur to Maharashtra Pandharpur for clear the summer extra rush from March 02 to June20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X