ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಮನೂರಿನಲ್ಲಿ ಪೊಲೀಸ್ ದೌರ್ಜನ್ಯ: ಎಡಿಜಿಪಿ ಪಂತ್ ರಿಂದ ತನಿಖೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜುಲೈ 31- ನವಲಗುಂದ ಬಳಿಯ ಯಮನೂರಿನಲ್ಲಿ ಗುರುವಾರ ರಾತ್ರಿ ನಡೆಸಿದ ಪೊಲೀಸರ ದೌರ್ಜನ್ಯದ ಹಿನ್ನೆಲೆಯಲ್ಲಿ ಡಿವೈಎಸ್ಪಿಯೊಬ್ಬರಿಗೆ ವರ್ಗಾವಣೆ ಹಾಗೂ ಪಿಐ ಒಬ್ಬರಿಗೆ ಅಮಾನತು ಶಿಕ್ಷೆ ಸಿಕ್ಕಿದೆ.

ಸಚಿವರ ಕ್ಷಮೆಯಾಚನೆ: ಮಹಿಳೆಯರು ಹಾಗೂ ಅಮಾಯಕರ ಮೇಲೆ ಹಲ್ಲೆಯಾಗಿರುವುದಕ್ಕೆ ಕ್ಷಮೆಯಾಚಿಸುತ್ತೇನೆ. ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋ ತಿರುಚಿರಬಹುದು. ಈಗಾಗಲೇ ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಪರಮೇಶ್ವರ್ ಅವರು ಹೇಳಿದರು. [ಪೊಲೀಸರ ದೌರ್ಜನ್ಯ ಖಂಡಿಸಿ ಜೆಡಿಎಸ್ ನಿಂದ ಪ್ರತಿಭಟನೆ]

ಈ ನಡುವೆ ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ವಿನಯ್ ಕುಲಕರ್ಣಿ ಅವರು ಶಾಂತಿ ಸಭೆ ನಡೆಸಿ, ಜನರ ಸಂಕಷ್ಟಗಳನ್ನು ಆಲಿಸಿದ್ದಲ್ಲದೆ, ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು.

ಕಮಲಪಂತ್ ನೇತೃತ್ವದಲ್ಲಿ ತನಿಖೆ: ಗೃಹ ಸಚಿವ ಪಿ.ಪರಮೇಶ್ವರ ಅವರು ಡಿವೈಎಸ್ಪಿ ನೆಹರು ಓಲೇಕಾರ ಅವರನ್ನು ವರ್ಗಾಯಿಸಿ, ಪೊಲೀಸ್ ಇನ್ಸಪೆಕ್ಟರ್ ಶಿವಯೋಗಿ ಲೋಹಾರ ಅವರಿಗೆ ಅಮಾನತು ಶಿಕ್ಷೆ ನೀಡಿದ್ದಾರೆ. [ಇದೇನು ಸದ್ದಾಂ ಹುಸೇನ್ ರಾಜ್ಯವೇ? : ಎಚ್ಡಿಕೆ ಪ್ರಶ್ನೆ]

Kamal Panth

ಎಡಿಜಿಪಿ ಕಮಲಪಂತ್ ನೇತೃತ್ವದಲ್ಲಿ ತನಿಖೆ ನಡೆಸಲು ಗೃಹ ಸಚಿವರು ಆದೇಶಿಸಿ ಒಂದು ವಾರದಲ್ಲಿ ವರದಿ ನೀಡಲು ತಿಳಿಸಿದ್ದಾರೆ.

ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಮತ್ತು ಉತ್ತರ ಕರ್ನಾಟಕ ಬಂದ್ ಸಂದರ್ಭದಲ್ಲಿ ನವಲಗುಂದ ಪಟ್ಟಣದ ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಜೊತೆಗೆ ಒಂದು ಸರಕಾರಿ ಬಸ್ ಸುಡಲಾಗಿತ್ತು.

ಪೊಲೀಸರ ಜೀಪ್ ಗೂ ಬೆಂಕಿ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರೋ ರಾತ್ರಿ ಪೊಲೀಸರು ಯಮನೂರ ಮತ್ತು ಅಳಗವಾಡಿ ಗ್ರಾಮಕ್ಕೆ ಧಾವಿಸಿ ಜನರಲ್ಲಿ ಬಂಧಿಸಿ ಕರೆದೊಯ್ದಿದ್ದರು.

ಮನೆ ಬಾಗಿಲು ಮುರಿದು ಒಳಗಡೆ ಬಂದ ಪೊಲೀಸರು ಮೊದಲು ಮಾಡುವ ಕೆಲಸವೇ ಟಿವಿ ಒಡೆಯುವುದು, ನಂತರ ಸಿಕ್ಕ ಸಿಕ್ಕವರಿಗೆ ಲಾಠಿಯಿಂದ ಬಡಿಯುತ್ತಿದ್ದರು ಎಂದು ಹೊಡೆತ ಮಲ್ಲಮ್ಮ ಹೇಳುತ್ತಾರೆ. ಹೆಣ್ಣು ಮಕ್ಕಳ ತೊಡೆಗೆ, ಎದೆಗೆ, ಬೆನ್ನಿಗೆ ಬಾಲಕಿಯರು, ಗರ್ಭಿಣಿಯರು ವೃದ್ಧರೆಂಬುದನ್ನು ನೋಡದೇ ಎಲ್ಲರನ್ನೂ ಥಳಿಸಿದ್ದರು.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಯಮನೂರು ಜನತೆ ಪೊಲೀಸ್ ದೌರ್ಜನ್ಯ ಖಂಡಿಸಿ ರಸ್ತೆ ತಡೆ ನಡೆಸಿದ್ದರು. ಇಂದು ರವಿವಾರ ಪೊಲೀಸರ ಅಮಾನತು ಆದೇಶ ಹಿನ್ನೆಲೆಯಲ್ಲಿ ಯಮನೂರು ಗ್ರಾಮದಲ್ಲಿ ಮತ್ತೇ ನಾಲ್ಕು ಬಸ್ ಗಳಲ್ಲಿ ಪೊಲೀಸರು ಬಂದಿಳಿದಿದ್ದಾರೆ. ಇದರಿಂದ ಗ್ರಾಮಸ್ಥರು ಮತ್ತೆ ಭಯಭೀತಗೊಂಡು ಊರು ಬಿಟ್ಟಿದ್ದಾರೆ. ಕೆಲವರು ಪೊಲೀಸ್ ವಾಹನವನ್ನು ಅಟ್ಟಿಸಿಕೊಂಡು ಹೋಗಿದ್ದಾರೆ.

English summary
Yamanur Police Atrocity: DYSP Nehru olekar transffered and Police inspector Shivamoggi Lohara suspended, ADGP Kaml Panth to probe the case said Home minister G Parameshwara today (July 31)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X