ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಎಲ್ ಎಕ್ಸ್ ಕಾರು ಮಾರಾಟ: ವಂಚನೆಗೈದ ಮಹಿಳೆ

ಬೆಂಗಳೂರಿನ ರೇಬಾಕ ರಾ ಎಂಬಾಕೆ ತನ್ನ ನಾಲ್ವರು ಸಹಚರರೊಂದಿಗೆ ಸೇರಿಕೊಂಡು ಓಎಲ್ಎಕ್ಸ್ ನಲ್ಲಿ ಕಾರು ಮಾರುವುದಿದೆ ಎಂದು ಜಾಹೀರಾತು ನೀಡಿ ನಗರದ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ.

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್, 11: ಓಎಲ್ಎಕ್ಸ್ ನಲ್ಲಿ ಕಾರು ಮಾರುವುದಿದೆ ಎಂದು ಜಾಹೀರಾತು ನೀಡಿದ ಬೆಂಗಳೂರಿನ ಮಹಿಳೆಯೊಬ್ಬಳು ನಗರದ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಪ್ರಕರಣ ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬೆಂಗಳೂರಿನ ರೇಬಾಕ ರಾ ಎಂಬಾಕೆ ತನ್ನ ನಾಲ್ವರು ಸಹಚರರೊಂದಿಗೆ ಸೇರಿಕೊಂಡು ಟೆನ್ನಾರೋ ( ಕೆಎ01, ಎಂಎಲ್9403) ಕಾರು ಮಾರುವುದಿದೆ ಎಂದು ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿದ್ದಳು. ಜಾಹೀರಾತು ನೋಡಿದ್ದ ಸ್ಥಳೀಯ ಜಯನಗರ ನಿವಾಸಿ ಈಶ್ವರ ಶಿವಾಜಿ ಕಲ್ಯಾಣಿ ಎಂಬುವವರು ರೇಬಾಕಗೆ ಕರೆ ಮಾಡಿದ್ದಾರೆ. ನಾನು ಮೂಲತಃ ಬ್ಯಾಂಕಾಕಿನವಳು ಕಾರು ಮಾರಿ ನಾನು ಮರಳಿ ನನ್ನ ದೇಶಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. [ನ್ಯಾಯಾಂಗ ಬಂಧನದಲ್ಲಿ ಲೇಡಿ ನಟ್ವರ್ ಲಾಲ್]

crime

ಕಾರನ್ನು ನೋಡಲು ಬೆಂಗಳೂರು ವಿಮಾನ ನಿಲ್ದಾಣದ ಹತ್ತಿರ ವೇರ್ ಹೌಸ್ ನಲ್ಲಿದೆ ಅಲ್ಲಿ ಕೃಷ್ಣಾ ಎಂಬುವವರು ಇದ್ದಾರೆ ಅವರೊಂದಿಗೆ ಮಾತನಾಡಿ ಎಂದು ಮೊಬೈಲ್ ನಂಬರವೊಂದನ್ನು ನೀಡಿದ್ದಾಳೆ. ಕೂಡಲೇ ಆ ನಂಬರ್ ಗೆ ಕರೆ ಮಾಡಿದ ಈಶ್ವರ, ಕೃಷ್ಣಾ ಹೇಳಿದ ಹಾಗೆ 5,58 ಲಕ್ಷ ರು ಗಳನ್ನು ಅವರು ಹೇಳಿದ ಬ್ಯಾಂಕ್ ಖಾತೆಗೆ ತುಂಬಿದ್ದಾರೆ. ನಂತರ ಕಾರನ್ನು ಕೊಡದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲರೂ ಪರಾರಿಯಾಗಿದ್ದಾರೆ ಎಂದು ಈಶ್ವರ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಈಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಂಚಕಿಯ ಪತ್ತೆಗಾಗಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

English summary
women posting the car add in olx. another the person contact that women but that women cheating that person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X