ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮ ಹುಬ್ಬಳ್ಳಿಯ ಶೆರೆವಾಡ!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜನವರಿ 5: ಉತ್ತರ ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮ ಎಂಬ ಶ್ರೇಯಕ್ಕೆ ಹುಬ್ಬಳ್ಳಿಯ ಶೆರೆವಾಡ ಪಾತ್ರವಾಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಧಾರವಾಡ ಜಿಲ್ಲೆಯಲ್ಲಿ ಒಂಬತ್ತು ಹಳ್ಳಿಗಳನ್ನು ಡಿಜಿಟಲ್ ಆಗಿ ಮಾರ್ಪಡಿಸುವ ಉದ್ದೇಶ ಹೊಂದಿದೆ. ಅದರ ಭಾಗವಾಗಿ ಹಳ್ಳಿಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.

ಅಂದಹಾಗೆ, ಶೆರೆವಾಡ ಗ್ರಾಮದಲ್ಲಿ 4415 ಜನಸಂಖ್ಯೆ ಇದ್ದರೆ, 4003 ಮಂದಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಖಾತೆ ಹೊಂದಿದ್ದಾರೆ. ಈ ಪೈಕಿ 3964 ಖಾತೆಗಳನ್ನು ಆಧಾರ್ ಜೊತೆಗೆ ಜೋಡಣೆ ಸಹ ಮಾಡಲಾಗಿದೆ. ಇನ್ನು 3803 ರುಪೇ ಕಾರ್ಡ್ ಹಾಗೂ 25 ಕಿಸಾನ್ ಕಾರ್ಡ್ ಸಹ ವಿತರಿಸಲಾಗಿದೆ.[ಜ.1ರಿಂದ ಎಟಿಎಂನಲ್ಲಿ ದಿನಕ್ಕೆ 4,500 ರು. ಸಿಗುತ್ತೆ!]

Sherewada first digital village of Uttara Karanataka

ಶೆರೆವಾಡ ಗ್ರಾಮಸ್ಥರು ತಮ್ಮ ಮೊಬೈಲ್ ಮೂಲಕವೇ ಬ್ಯಾಂಕ್ ಖಾತೆಯ ವ್ಯವಹಾರಗಳನ್ನು ಮಾಡಬಹುದಾಗಿದೆ. ಇ ಪಾಸ್ ಬುಕ್ ಸೇವೆ ಪಡೆಯವಹುದಾಗಿದೆ. ಇನ್ನು ಗ್ರಾಮದ ಆಯ್ದ ಮಳಿಗೆಗಳಿಗೆ ಶೀಘ್ರದಲ್ಲಿಯೇ ಪಿಒಎಸ್ ಮಷೀನ್ ಕೂಡ ವಿತರಿಸಲಾಗುವುದು. ಡಿಜಿಟಲ್ ಗ್ರಾಮ ಎಂದು ಘೋಷಣೆ ಮಾಡುವ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ರೀವಾಸ್ತವ ಮಾತನಾಡಿದರು.[ಇನ್ಮುಂದೆ ಮಂಡ್ಯದ ಹೊಸಹೊಳಲು ಕ್ಯಾಷ್ ಲೆಸ್ ಗ್ರಾಮ!]

ಹುಬ್ಬಳ್ಳಿಯ ಶೆರೆವಾಡ ಗ್ರಾಮ ಸಂಪೂರ್ಣ ನಗದುರಹಿತ ವ್ಯವಹಾರ ಅಳವಡಿಸಿಕೊಳ್ಳುವ ಮೂಲಕ ದೇಶದ ನಕ್ಷೆಯಲ್ಲಿ ಹೊಸದಾಗಿ ಗುರುತಿಸಿಕೊಂಡಂತೆ ಆಗಿದೆ. ಸ್ಮಾರ್ಟ್ ಫೋನ್ ಗಳು, ಆಧಾರ್ ಜೋಡಣೆ ಬ್ಯಾಂಕ್ ಖಾತೆಗಳು, ಮೊಬೈಲ್ ಬ್ಯಾಂಕಿಂಗ್ ಸೇವೆಗಳು, ಮೈಕ್ರೋ ಎಟಿಎಂಗಳು ಗ್ರಾಹಕರಿಗೆ ಉಪಯುಕ್ತವಾಗಿ, ಬ್ಯಾಂಕಿಂಗ್ ವ್ಯವಹಾರಗಳನ್ನು ನಗದು ರಹಿತವಾಗಿ ಮಾಡುವಲ್ಲಿ ಸಹಾಯಕವಾಗಿವೆ ಎಂದು ತಿಳಿಸಿದರು.

English summary
Sherewada village in Hubballi taluk, Dharwad district is the first digital village of Uttara Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X