ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: 10 ರು. ನಾಣ್ಯ ಆಯ್ತು, ಈಗ 5 ರು ನೋಟು ರದ್ದು ವದಂತಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ, 14 : ಇತ್ತೀಚೆಗಷ್ಟೇ 10 ರೂ. ಮೌಲ್ಯದ ನಾಣ್ಯವನ್ನು ಚಲಾವಣೆಯಾಗುವುದಿಲ್ಲ ಎಂಬ ವದಂತಿ ನಗರದಾದ್ಯಂತ ಹಬ್ಬಿದ ಸುದ್ದಿ ತಣ್ಣಗಾಗುವ ಹೊತ್ತಿಗೆ ಈಗ ಐದು ರೂಪಾಯಿಯ ನೋಟು ಚಲಾವಣೆ ಇಲ್ಲ ಎಂಬ ವದಂತಿ ಹಬ್ಬಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈ ವರೆಗೆ 5 ರು. ನೋಟು ರದ್ದತಿ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ. ಆದರೂ ಹುಬ್ಬಳ್ಳಿಯ ಹಲವು ಅಂಗಡಿಗಳಲ್ಲಿ ಈ ಐದು ರುಪಾಯಿ ನೋಟುಗಳನ್ನು ಸ್ವೀರಿಸುತ್ತಿಲ್ಲ.

ಹೌದು. ಹಲವು ಕಿರಾಣಿ ಅಂಗಡಿಗಳಲ್ಲಿ,ಚಿಕ್ಕಪುಟ್ಟ ರಸ್ತೆ ಪಕ್ಕದ ಡಬ್ಬಾ ಅಂಗಡಿಗಳಲ್ಲಿ ಮತ್ತು ಕೆಲವೊಂದು ಹೊಟೇಲ್ ಗಳಲ್ಲಿ ಐದು ರು. ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ. [ಹುಬ್ಬಳ್ಳಿಯಲ್ಲಿ 10 ರೂ. ನಾಣ್ಯ ವದಂತಿ ಬಗ್ಗೆ ಬ್ಯಾಂಕ್ ಸ್ಪಷ್ಟನೆ]

Rumours Of Ban On Rs.5 notes Trigger Panic In Hubballi

ಕಾರಣ ಕೇಳಿದರೆ ಇಲ್ಲಾರೀ ನೋಟು ನಡೆಯೋಲ್ಲ ಬೇಕಿದ್ದರೆ ಐದು ರು. ನಾಣ್ಯ ಕೊಡಿ ತೆಗೆದುಕೊಳ್ಳುತ್ತೇವೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಈ 5 ರು. ನೋಟಿನ ವದಂತಿಯಿಂದಾಗಿ ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಜೇವನ ಮಾಡುವವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಬಗ್ಗೆ ಮಾಹಿತಿ ನೀಡುವ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ರಾಜಾರಾಮ, ಇಂಥಹ ಸುದ್ದಿಗಳನ್ನು ಯಾರೋ ಕಿಡಿಗೇಡಿಗಳು ಹಬ್ಬಿಸುತ್ತಿದ್ದಾರೆ. ಜನರು ಈ ಬಗ್ಗೆ ಗಮನ ಕೊಡದೇ ಧೈರ್ಯವಾಗಿ ಐದು ರೂ. ನೋಟು ಬಳಸಬಹುದು ಎಂದಿದ್ದಾರೆ.

English summary
At a time when the Centre is trying to curb fake currency notes by demonetising Rs. 500 and Rs. 1,000 denomination notes, a rumour has spread across Hubballi that Rs.5 notes had been declared invalid by the Reserve Bank of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X