ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುತಾತ್ಮ ಸೈನಿಕನ ಮಡದಿಗೆ ನೌಕರಿ

ಇಂದಿನಿಂದ ಹುಬ್ಬಳ್ಳಿಯ ಸಿಲ್ಕ್ ಬೋರ್ಡಿನಲ್ಲಿ ಅಧಿಕೃತ ಉದ್ಯೋಗಿಯಾಗಿ ಸೇರಿದ ಮಹಾದೇವಿಯವರ ಕುಟುಂಬಕ್ಕೆ ಜಮೀನು ಮತ್ತು ಉದ್ಯೋಗ ನೀಡುವಂತೆ ಒಂದು ತಿಂಗಳ ಅಭಿಯಾನವನ್ನು 'ಒನ್ ಇಂಡಿಯಾ' ನಡೆಸಿತ್ತು.

By ಅನುಶಾ ರವಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 27: ಹುತಾತ್ಮ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಅವರಿಗೆ ಇಂದು ಉದ್ಯೋಗದ ಮೊದಲ ದಿನ.

ಹೌದು, ಸಿಯಾಚಿನ್ ನ ಹಿಮದಡಿಯಲ್ಲಿ ಸಿಲುಕಿಯೂ ಪವಾಡಸದೃಶವಾಗಿ ಬದುಕುಳಿದು, ನಂತರ ಹುತಾತ್ಮರಾದ ಲಾನ್ಸ್ ನಾಯಕ್ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಅವರಿಗೆ ಕೇಂದ್ರ ರೇಷ್ಮೆ ಇಲಾಖೆ ಕೊಟ್ಟ ಮಾತನ್ನು ಈ ಮೂಲಕ ಉಳಿಸಿಕೊಂಡಿದೆ.[ಹನುಮಂತಪ್ಪನ ಸಾವಿಗೆ ವರ್ಷವಾದರೂ ಪತ್ನಿಗೆ ಕೆಲಸವಿಲ್ಲ!]

OneIndia impact: First day at work for Siachen braveheart Hanumanthappa's wife

ಇಂದಿನಿಂದ ಹುಬ್ಬಳ್ಳಿಯ ಸಿಲ್ಕ್ ಬೋರ್ಡಿನಲ್ಲಿ ಅಧಿಕೃತ ಉದ್ಯೋಗಿಯಾಗಿ ಸೇರಿದ ಮಹಾದೇವಿಯವರ ಕುಟುಂಬಕ್ಕೆ ಜಮೀನು ಮತ್ತು ಉದ್ಯೋಗ ನೀಡುವಂತೆ ಒಂದು ತಿಂಗಳ ಅಭಿಯಾನವನ್ನು 'ಒನ್ ಇಂಡಿಯಾ' ನಡೆಸಿತ್ತು.[ಒನ್ ಇಂಡಿಯಾ ಅಭಿಯಾನದ ಪರಿಣಾಮ: ಮಹಾದೇವಿಗೆ ಉದ್ಯೋಗ ಭಾಗ್ಯ]

ಅದರ ಫಲಶ್ರುತಿಯಾಗಿ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಮೂಲಕ ಮಹಾದೇವಿ ಅವರಿಗೆ ಹುಬ್ಬಳ್ಳಿಯ ಸಿಲ್ಕ್ ಬೋರ್ಡಿನಲ್ಲಿ ಉದ್ಯೋಗ ನೀಡಿತ್ತು.[ವೀರಯೋಧ ಹನುಮಂತಪ್ಪ ಪತ್ನಿಗೆ ಇನ್ನೂ ಸಿಕ್ಕಿಲ್ಲ ಉದ್ಯೋಗ]

ಇದೇ ಸಂದರ್ಭದಲ್ಲಿ ಉದ್ಯೋಗಕ್ಕೆ ಸೇರುವ ಸಂತಸವನ್ನು ಒನ್ ಇಂಡಿಯಾದೊಡನೆ ಹಂಚಿಕೊಂಡ ಮಹಾದೇವಿ, 'ನಾನು ಸೋಮವಾರದಿಂದ ಕೆಲಸಕ್ಕೆ ಹೋಗುತ್ತಿದ್ದೇನೆ, ರೇಷ್ಮೆ ಉತ್ಪನ್ನಗಳನ್ನು ತರುವ ರೈತರೊಂದಿಗೆ ಸಂವಹನ ನಡೆಸುವುದು ಇಲ್ಲಿ ನನ್ನ ಕೆಲಸ. ನಾನಿಲ್ಲಿ ಹೇಗೆ ಕೆಲಸ ಮಾಡ್ತೀನಿ ಅಂತ ಗೊತ್ತಿಲ್ಲ, ಆದರೆ ನನಗೆ ವಹಿಸಿದ ಕೆಲಸವನ್ನು, ಪ್ರಾಮಾಣಿಕವಾಗಿ ಮಾಡುತ್ತೇನೆಂಬ ಭರವಸೆ ನೀಡಬಲ್ಲೆ' ಎಂದಿದ್ದಾರೆ.

English summary
Mahadevi Koppad, wife of Siachen braveheart Hanumanthappa Koppad is all set to begin her first day at central silk board. A month after OneIndia ran a campaign in support of the martyr's family and reminded the government about the promises that were unfulfilled, Mahadevi received job offers from various private and government entities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X