ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಟಿವಿ ಕದ್ದೋನು ಮಾರ್ಕೆಟಿಂಗ್ ಮ್ಯಾನೇಜರ್!

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್ 15: ಬೇಲಿಯೇ ಎದ್ದು ಹೊಲ ಮೇಯ್ದರೆ ಎಂಬ ಗಾದೆ ಈ ವರದಿಗೆ ಸರಿಯಾಗಿ ಒಪ್ಪುತ್ತದೆ. ಗೋಕುಲ ರಸ್ತೆಯ ಸುರೇಶ್ ಎಂಟರ್ ಪ್ರೈಸಸ್ ಎಲೆಕ್ಟ್ರಾನಿಕ್ಸ್ ಗೋಡೌನ್ ನಿಂದ 92 ಟಿವಿ ಕಳವು ಮಾಡಿದ್ದ ಆರೋಪದಲ್ಲಿ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆ ಆರೋಪಿಗಳ ಪೈಕಿ ಅಂಗಡಿಯ ಮಾರ್ಕೆಟಿಂಗ್ ಮ್ಯಾನೇಜರ್ ಕೂಡ ಸೇರಿದ್ದಾನೆ.

ಅಂಗಡಿಯ ಮಾರ್ಕೆಟಿಂಗ್ ಮ್ಯಾನೇಜರ್ ತಬ್ರೇಜ್, ಅವನ ಸಹಚರರಾದ ನಿಂಗರಾಜ ಮುಗಳಿ ಹಾಗೂ ಮಂಜುನಾಥ ರಾಯ್ಕರ್ ಬಂಧಿತರು. ಇವರಿಂದ 22 ಟಿವಿ ವಶಪಡಿಸಿಕೊಳ್ಳಲಾಗಿದೆ. ಈ ಖತರ್ನಾಕ್ ಅರೋಪಿಗಳು ಉಳಿದ ಟಿವಿಗಳನ್ನು ಕಡಿಮೆ ಬೆಲೆಗೆ ಹಳ್ಳಿಗಳಲ್ಲಿ ಮಾರಿಕೊಂಡಿದ್ದಾರೆ. ಈ ಆರೋಪಿಗಳು ಡಿಸೆಂಬರ್ 2016 ಹಾಗೂ ಮಾರ್ಚ್ 2017ರ ಮಧ್ಯೆ ಟಿವಿಗಳ ಕಳವು ಮಾಡಿದ್ದಾರೆ.[ಹುಬ್ಬಳ್ಳಿಯ ಕಟುಗರ ಓಣಿಯಲ್ಲಿ 2 ಚೀಲದಲ್ಲಿ ಮನುಷ್ಯರ ತಲೆಬುರುಡೆ ಪತ್ತೆ]

Marketing manager arrest in Hubballi TV theft case

ಗೋಡನ್ ನಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಅದರಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳಿಂದ ಕಳವು ಮಾಡಿದ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಅಂದಹಾಗೆ, ಈ ಕೃತ್ಯದಲ್ಲಿ ಇನ್ನೂ ಇಬ್ಬರು ಭಾಗಿಯಾಗಿದ್ದು, ಸದ್ಯಕ್ಕೆ ತಲೆ ತಪ್ಪಿಸಿಕೊಂಡಿದ್ದಾರೆ. ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

English summary
Tabrez, Marketing manager of Hubballi Gokula road Suresh enterprise, arrested in TV theft case.
Please Wait while comments are loading...