ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕಾಗಿರುವುದು ದುರಂತ'

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್ 09 : 'ಕಳೆದ 30 ವರ್ಷಗಳಿಂದ ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕಾದ ದುಸ್ಥಿತಿ ಬಂದಿರುವುದು ದುರಂತ. ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಮೂರು ರಾಜಕೀಯ ಪಕ್ಷಗಳು ಜನತೆಯನ್ನು ಮರಳು ಮಾಡಿ ವಂಚಿಸುತ್ತಿವೆ' ಎಂದು ಅಗ್ನಿಶ್ರೀಧರ್ ಆರೋಪಿಸಿದರು.

ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಮತ್ತು ಪೊಲೀಸರ ದೌರ್ಜನ್ಯ ಖಂಡಿಸಿ ರಾಜಧಾನಿ ಬೆಂಗಳೂರಿನಿಂದ ನವಲಗುಂದ ವರೆಗೆ ಜಾಥಾ ಹಮ್ಮಿಕೊಂಡಿರುವ ಕರುನಾಡ ಸೇನೆಯ ಸದಸ್ಯರು ಸೋಮವಾರ ಹುಬ್ಬಳ್ಳಿ ತಲುಪಿದರು.[ಮಹದಾಯಿ: ಸರ್ವಪಕ್ಷಗಳ ಸಭೆ ತೆಗೆದುಕೊಂಡ ನಿರ್ಧಾರವೇನು?]

Karunada Sene

ನಗರದ ಕಿತ್ತೂರು ಚೆನ್ನಮ್ಮ ಮೈದಾನಕ್ಕೆ ಜಾಥಾದೊಂದಿಗೆ ಸೋಮವಾರ ಸಂಜೆ ಆಗಮಿಸಿದ ಪತ್ರಕರ್ತ ಮತ್ತು ಕರುನಾಡ ಸೇನೆಯ ಧುರೀಣ ಅಗ್ನಿಶ್ರೀಧರ್ ಅವರು, 'ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪ ಮತ್ತು ದೇವೇಗೌಡರು ಒಂದಾಗಿ ಪ್ರಯತ್ನಿಸಿದರೆ ಕಳಸಾ-ಬಂಡೂರಿ ಯೋಜನೆ ಸಮಸ್ಯೆ ಪರಿಹಾರವಾಗುತ್ತದೆ. ಸೋನಿಯಾಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತ ನಡೆಸಿ ವಿವಾದ ಬಗೆಹರಿಸಬೇಕು' ಎಂದರು.[ಮಾತುಕತೆ ಮೂಲಕ ಮಹದಾಯಿ ವಿವಾದಕ್ಕೆ ತೆರೆ?]

'ಪ್ರಧಾನಿ ಮೋದಿಯವರು ಮಧ್ಯಸ್ಥಿಕೆ ವಹಿಸುವುದಿಲ್ಲ' ಎಂಬ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರ ಹೇಳಿಕೆಯನ್ನು ಖಂಡಿಸಿದ ಶ್ರೀಧರ್ ಅವರು, 'ಜೋಶಿಯವರ ತಿಥಿ ಮಾಡಬೇಕಾಗುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.[ಮಹದಾಯಿ ವಿವಾದ, ಮೋದಿಗೆ ಸಿದ್ದರಾಮಯ್ಯ ಪತ್ರ]

Agni Shridhar

'ಆಗಸ್ಟ್ 18 ರವರೆಗೆ ಸಮಸ್ಯೆ ಬಗೆಹರಿಸಲು ಗಡುವು ನೀಡುತ್ತೇವೆ. ಇಲ್ಲವಾದರೆ ರಾಜ್ಯದಲ್ಲಿನ ಎಲ್ಲ ಸಂಸತ್ ಸದಸ್ಯರಿಗೆ ಘೇರಾವ್ ಹಾಕುತ್ತೇವೆ. ಮಂಗಳವಾರ ಧಾರವಾಡದಿಂದ ನರಗುಂದಕ್ಕೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿ ಚನ್ನವೀರ ಕಣವಿ, ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು' ಎಂದು ಅಗ್ನಿಶ್ರೀಧರ್ ಹೇಳಿದರು.

English summary
Writer Agni Shridhar lead Karunada Sene organized jatha from Bengaluru to Dharwad demanding for implement of Kalasa-Banduri project. Jatha reached Hubballi on August 8, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X