ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಏಕೈಕ ಕಾನೂನು ವಿವಿಗೆ ಹುಬ್ಬಳ್ಳಿಯಲ್ಲಿ ಕಟ್ಟಡ ಭಾಗ್ಯ

By ಬಸವರಾಜ ಮರಳಿಹಳ್ಳಿ
|
Google Oneindia Kannada News

ಹುಬ್ಬಳ್ಳಿ, ಜೂನ್ 17: ರಾಜ್ಯದ ಏಕೈಕ ಕಾನೂನು ವಿಶ್ವವಿದ್ಯಾಲಯಕ್ಕೆ ಈಗ ದಶಕ ಪೂರೈಸಿದ ಸಂಭ್ರಮ. ಆದರೆ, ಈವರೆಗೂ ವಿವಿಗೆ ಸ್ವಂತ ಕಟ್ಟಡವೇ ಇರಲಿಲ್ಲ. ದಶಕದ ಬಳಿಕ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ನವನಗರದಲ್ಲಿ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ಹೊಂದಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಜುಲೈನಲ್ಲಿ ಹಾರಾಟ ಶುರುಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಜುಲೈನಲ್ಲಿ ಹಾರಾಟ ಶುರು

ಹೌದು, 20 ಎಕರೆಯ ಒಂದು ಭಾಗದ ಎತ್ತರ ಪ್ರದೇಶದಲ್ಲಿ ತಲೆ ಎತ್ತಿರುವ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಕಟ್ಟಡದ ವಿನ್ಯಾಸ ಮೇಲ್ನೋಟಕ್ಕೆ ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರಪತಿ ಭವನದ ಮಾದರಿಯಂತೆ ಕಾಣುತ್ತಿದೆ. ಇತ್ತೀಚೆಗೆ ವಿವಿಗೆ ಭೇಟಿ ನೀಡಿದ್ದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ದ ನ್ಯಾಕ್ ಕಮಿಟಿ ಸದಸ್ಯರು ಸಹ ಕಟ್ಟಡದ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ಈ ಕಟ್ಟಡ ಆಕರ್ಷಿಸುತ್ತಿದ್ದು, ಕಟ್ಟಡದ ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಜುಲೈನಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.

Karnataka's first law university will get an own building in Hubballi soon

ನ್ಯಾಯಾಲಯಗಳ ಕಟ್ಟಡಕ್ಕೆ ಬಳಸುವ ಕೆಂಪು ಮತ್ತು ಬಿಳಿ ಬಣ್ಣವನ್ನು ಬಳಿಯಲಾಗಿದೆ. ಮಧ್ಯೆ ಭಾಗದಲ್ಲಿ ವೃತ್ತಾಕಾರದ ಗೋಪುರ ಹಾಗೂ ಕಟ್ಟಡದ ಎರಡೂ ಬದಿಯಲ್ಲಿ ಗೋಪುರದಂತೆ ಕಾಣಿಸುವ ಸಣ್ಣ ಕಟ್ಟಡ ನಿರ್ಮಿಸಲಾಗಿದೆ. ಕಾನೂನು ವಿವಿಯ ಸುಮಾರು 56 ಎಕರೆಯಲ್ಲಿ 20 ಎಕರೆ ಪ್ರದೇಶದ ಒಂದು ಭಾಗದಲ್ಲಿ ಕಾನೂನು ಶಾಲೆ ನಿರ್ಮಿಸಲಾಗಿದೆ.

ಜನೌಷಧ ಕೇಂದ್ರ ಘಟಕ ಸ್ಥಾಪಿಸಲು ಹುಬ್ಬಳ್ಳಿಯನ್ನು ಗುರುತಿಸಿದ ಕೇಂದ್ರಜನೌಷಧ ಕೇಂದ್ರ ಘಟಕ ಸ್ಥಾಪಿಸಲು ಹುಬ್ಬಳ್ಳಿಯನ್ನು ಗುರುತಿಸಿದ ಕೇಂದ್ರ

ಒಟ್ಟು 7,103 ಚದುರ ಮೀಟರ್ ವಿಸ್ತಾರದಲ್ಲಿ ಮೂರು ಅಂತಸ್ತಿನ 20 ತರಗತಿ ಕೋಣೆ, ಎರಡು ಉಪನ್ಯಾಸಕರ ಕೊಠಡಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಅಣಕು ನ್ಯಾಯಾಲಯ (ಮೂಟ್ ಕೋರ್ಟ್) ಸಭಾಂಗಣ, ವಿವಿ ಡೀನ್, ಕಾಲೇಜು ನಿರ್ದೇಶಕರ ಕಚೇರಿ ಹಾಗೂ ರಿಜಿಸ್ಟ್ರಾರ್ ಕಚೇರಿಗಳನ್ನು ನಿರ್ಮಿಸಲಾಗಿದೆ. ಇದರ ಜತೆಗೆ 200 ಆಸನಗಳ ಆಡಿಟೋರಿಯಂ ಮತ್ತು ಸಭಾಂಗಣ ಒಳಗೊಂಡಿದೆ. 500 ಆಸನಗಳನ್ನೊಳಗೊಂಡ ಹೊರಾಂಗಣ ಸಭಾಂಗಣ ಕೂಡ ಪ್ರಮುಖವಾಗಿದೆ.

Karnataka's first law university will get an own building in Hubballi soon

ಇತ್ತೀಚೆಗೆ ವಿವಿ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಾಚಾರ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕಟ್ಟಡದ ವಿನ್ಯಾಸವನ್ನು ಮೆಚ್ಚಿಕೊಂಡಿದ್ದಾರೆ. ದೇಶದ ಅತ್ಯುನ್ನತ ನ್ಯಾಯಾಲಯದ ಮಾದರಿಯಲ್ಲಿರುವ ಈ ಕಟ್ಟಡ ಕಾನೂನು ವಿದ್ಯಾರ್ಥಿಗಳಿಗೆ ಕಲಿಕೆಯ ಹಾಗೂ ನ್ಯಾಯಾಲಯದ ವಾತಾವರಣ ಸೃಷ್ಟಿಸಲು ಸಹಾಯಕವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಜುಲೈನಲ್ಲಿ ಹೊಸ ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸುವುದಾಗಿ ಸಚಿವರು ಹೇಳಿದ್ದಾರೆ. ಈ ಕಾರಣದಿಂದ ಉಳಿದಿರುವ ಕೆಲಸಗಳನ್ನು ಆದಷ್ಟು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಉದ್ಘಾಟನೆ ನಂತರ ಯಾವುದೇ ಕೆಲಸಗಳು ಇರದಂತೆ ನೋಡಿಕೊಳ್ಳಲು ತಿರ್ಮಾನಿಸಲಾಗಿದೆ ಎಂದು ವಿವಿಯ ಪ್ರಭಾರ ಕುಲ ಸಚಿವ ಡಾ. ರತ್ನಾ ಭೀಮನಗೌಡ.

English summary
Karnataka's first law university will get an own building in Navanagar, Hubballi soon. It will be really helpfil for the law students. The building looks like Rashtrapathi Bavan and supreme court in Delhi!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X