ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಪಾದಯಾತ್ರೆ ಪ್ರಚಾರದ ಗಿಮಿಕ್: ಮುನೇನಕೊಪ್ಪ

By Madhusoodhan
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್, 07: ಮಲಪ್ರಭಾ ನದಿಯ ಎಡದಂಡೆ ಮತ್ತು ಬಲದಂಡೆ ಕಾಲುವೆಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಜೆಡಿಎಸ್ ನಡೆಸಲುದ್ದೇಶಿಸಿರುವ ಪಾದಯಾತ್ರೆ ಕೇವಲ ಪ್ರಚಾರ ತಂತ್ರ ಎಂದು ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಕಾಲುವೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಹುನ್ನಾರ ಅಡಗಿದೆ ಎಂದು ಜೆಡಿಎಸ್ ಆರೋಪಿಸಿರುವುದು ಕೇವಲ ಪ್ರಚಾರಕ್ಕಾಗಿ ಎಂದು ದೂರಿದರು.['ಕನ್ನಡಿಗರ ಸಹನೆ ಪರೀಕ್ಷೆ ಮಾಡಬೇಡಿ', ಎಚ್ಚರಿಕೆ..]

hubballi

ಸರಕಾರವು ಕಾಲುವೆ ಅಭಿವೃದ್ಧಿ ಪಡಿಸುವ ಬದಲು ಯೋಜನೆಯ ಮೊತ್ತ ಹೆಚ್ಚಿಸಲು ಮುಂದಾಗಿದೆ. ಅನುದಾನ ಹೆಚ್ಚಿಸಿ ಯೋಜನಾ ವರದಿ ಸಿದ್ಧಪಡಿಸದ ಇಬ್ಬರು ಎಂಜಿನೀಯರಗಳನ್ನು ವರ್ಗಾವಣೆ ಮಾಡಿ ಬೇರೆಯವರಿಂದ ಸರಕಾರ ಯೋಜನಾ ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದು ದೂರಿದರು.[ಪ್ರೊ ಎಂಎಂ ಕಲಬುರಗಿ ಬೆಂಬಲಿಸಿ ಟ್ವಿಟ್ಟರ್ ಅಭಿಯಾನ]

ಮಲಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳನ್ನು 962 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ಕಾಲುವೆ ನಿರ್ಮಿಸುತ್ತಿರುವುದು ತಮ್ಮ ವಿರೋಧವಿಲ್ಲ ಆದರೆ ಯೋಜನಾ ವೆಚ್ಚವನ್ನು ಹೆಚ್ಚಿಸುವುದಕ್ಕೆ ವಿರೋಧವಿದೆ ಎಂದರು.

ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದರು. ಶೆಟ್ಟರ್ ಯೋಜನೆಯನ್ನು ವಿರೋಧಿಸಿಲ್ಲ ಒಮ್ಮೆ ಮಾಡಿದ ಕಾಮಗಾರಿಗೆ ಮತ್ತೊಮ್ಮೆ ಕಾಮಗಾರಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಶಿರೂರ, ವೀರೇಶ ಸಂಗಳದ, ವೀರಣ್ಣ ಜಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Hubballi: JDS Padayatra regarding Malaprabha Nala is a strategy of publicity, claimed former MLA Shankar Patil Munenakoppa on Sept 7, 2016. He Speaking in a press meet at Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X