ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲೊಂದು ತೆಂಗಿನ ಮರ ಹೋಲುವ ಮೊಬೈಲ್ ಟವರ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜೂನ್ 24: ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಒಂದು ತೆಂಗಿನ ಮರ ಇದೆ. ಇಲ್ಲ, ಹಾಗೆ ಕಾಣುವ ಮೊಬೈಲ್ ಟವರ್ ಇದೆ. ಅದರ ಕೆಳಗೆ ಆಶ್ರಯ ಪಡೆಯಲು ಹೋದಿರಿ, ಎಚ್ಚರಿಕೆ! ತೆಂಗಿನ ಮರ ಎಂದು ಹೋದರೆ ಶಾಕ್ ಹೊಡೆಯುವುದು ನಿಶ್ಚಿತ. ಯಾಕೆಂದರೆ ಅದು ತೆಂಗಿನಮರದ ಆಕಾರದಲ್ಲಿರುವ ಮೊಬೈಲ್ ವೈ ಫೈ ಟವರ್.

104 ಸಹಾಯವಾಣಿಗೆ ಗುಪ್ತ, ಲೈಂಗಿಕ ಸಮಸ್ಯೆಗಳ ಕರೆಗಳೇ ಹೆಚ್ಚು104 ಸಹಾಯವಾಣಿಗೆ ಗುಪ್ತ, ಲೈಂಗಿಕ ಸಮಸ್ಯೆಗಳ ಕರೆಗಳೇ ಹೆಚ್ಚು

ಸಾಮಾನ್ಯವಾಗಿ ಮೊಬೈಲ್ ಟವರ್‌ ಗಳೆಂದರೆ ಕಬ್ಬಿಣದ ಸರಳುಗಳಿಂದ ನಿರ್ಮಿಸಿದ ಬೃಹದಾಕಾರದ ಕಂಬಗಳನ್ನು ಅಳವಡಿಸಲಾಗಿರುತ್ತದೆ. ಅಲ್ಲದೆ ಮೈಕ್ರೋವೆವ್ ಡಿಶ್, ಗ್ರೌಂಡ್ ಸ್ಪೇಸ್, ಬೇಸ್ ಟ್ರಾನ್ಸಿಸ್ಟರ್ ಸ್ಪೇಷನ್, ಜನರೇಟರ್ ಹೊಂದಿರುತ್ತದೆ.

It's a mobile tower, not coconut tree

ಆದರೆ, ಇಲ್ಲಿ ಮುನ್ನೂರು ಅಡಿ ಎತ್ತರದ ಕಬ್ಬಿಣದ ಕಂಬವನ್ನು ನೆಡಲಾಗಿದ್ದರೂ ಈಚಲು ಅಥವಾ ತೆಂಗಿನ ಮರದ ರೂಪದಲ್ಲಿ ಟವರ್ ನಿರ್ಮಾಣ ಮಾಡಲಾಗಿದೆ. ಈ ಕಾರಣದಿಂದಲೇ ಈ ವಿಶೇಷ ಮೊಬೈಲ್ ಟವರ್ ಜನರನ್ನು ಆಕರ್ಷಿಸುತ್ತಿದೆ.

It's a mobile tower, not coconut tree

ತುದಿಯಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ತೆಂಗಿನ ಗರಿಗಳು, ತೆಂಗಿನ ಕಾಯಿಗಳನ್ನು ಅಳವಡಿಸಲಾಗಿದ್ದು, ದೂರದಿಂದ ನೋಡುವವರು ಇದೊಂದು ಬೃಹದಾಕಾರದ ತೆಂಗಿನ ಮರವೇ ಎಂದು ನಂಬುವುದರಲ್ಲಿ ಎರಡು ಮಾತಿಲ್ಲ. ಇದರ ಹತ್ತಿರ ಹೋಗಿ ನೋಡಿದಾಗಲೇ ಇದರ ಅಸಲಿ ಬಣ್ಣ ತಿಳಿಯುವುದು.

English summary
Mobile tower installed just like coconut tree Hubballi. It is attracting people. It has artificial leaves and coconuts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X