ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ಅತ್ಯಾಚಾರಿಗಳ ದೇಶವಾಗ್ತಿದೆ: ಮೀರಾ ಸಕ್ಸೇನಾ ಆತಂಕ

|
Google Oneindia Kannada News

ಹುಬ್ಬಳ್ಳಿ,ಜುಲೈ, 20: ವಿಶ್ವಕ್ಕೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿಯೇ ಅತೀ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಆತಂಕ ವ್ಯಕ್ತಪಡಿಸಿದರು.

ಬುಧವಾರ ನ್ಯೂ ಕಾಟನ್ ಮಾರ್ಕೆಟ್ ನಲ್ಲಿನ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಕಾನೂನು ಅರಿವು ಮತ್ತು ನೆರವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.[ಕಳಸಾ ಬಂಡೂರಿ ಹೋರಾಟ ಎಲ್ಲಿಗೆ ಬಂತು]

India became rape country: Meera Saksena Anxiety

ನಮ್ಮ ಭಾರತ ದೇಶವು ಅತೀ ಹೆಚ್ಚಿನ ಸಂಸ್ಕಾರವನ್ನು ಹೊಂದಿದೆ ದೇಶವಾಗಿದೆ. ಆದರೆ ಇಂಥಹ ರಾಷ್ಟ್ರದಲ್ಲಿಯೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಕೆಲವೆಡೆ ತಂದೆಯೇ ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿರುವ ಘಟನೆಗಳು ನಡೆಯುತ್ತಿವೆ ಎಂದರು.[ಸಿಲಿಕಾನ್ ಸಿಟಿ ಬೆಂಗಳೂರು ಪುರುಷರಿಗೂ ಸೇಫ್ ಅಲ್ಲ]

ಇತ್ತೀಚೆಗೆ ರಾಜ್ಯದ ಪ್ರದೇಶವೊಂದರಲ್ಲಿ ತಂದೆಯೇ ತನ್ನ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು ಎಂದರು. ತಂದೆ-ತಾಯಿಯಂದಿರು ತಮ್ಮ ಮಕ್ಕಳನ್ನು ಕಳಿಸುವುದನ್ನು ನಿಷೇಧಿಸುವ ಕಾನೂನು ರಚನೆ ಮಾಡಲು ಆಯೋಗ ಯತ್ನಿಸಿದೆ. ಆದರೆ ಕೆಲವೊಂದು ಜನನಾಯಕರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

India became rape country: Meera Saksena Anxiety

ಭಾರತ ಮಾನವ ಹಕ್ಕುಗಳ ಮತ್ತು ಗ್ರಾಹಕರ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಲ್. ಬಾಬು, ಕಾನೂನು ತಜ್ಞ ಮತ್ತು ಸಲಹೆಗಾರ ಸಿ.ಆರ್.ವಿಜಯಕುಮಾರ ಮತ್ತಿತರರು ಹಾಜರಿದ್ದರು.

English summary
India has witnessing more number of rapes compare to all over the world, Karnataka State Human Rights Commission (KSHRC) chairperson Meera C. Saksena said. Meera Saksena participated a legal awareness event in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X