ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

‘ಧರ್ಮದ ಹೆಸರಲ್ಲಿ ರಾಜಕೀಯ ಸರಿಯಲ್ಲ' : ಮೂರು ಸಾವಿರ ಮಠದ ಸ್ವಾಮೀಜಿ

By Basavaraj Maralihalli
|
Google Oneindia Kannada News

ಹುಬ್ಬಳ್ಳಿ, ಜುಲೈ 26: 'ಸಾಂವಿಧಾನಿಕವಾಗಿ ಧರ್ಮ ಘೋಷಣೆಗೆ ನಮ್ಮ ವಿರೋಧವಿಲ್ಲ. ಆದರೆ, ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ," ಎಂದು ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸ್ಪಷ್ಪಪಡಿಸಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವೀರಶೈವ ಅಥವಾ ಲಿಂಗಾಯತ ಧರ್ಮ ಎಂದು ಘೋಷಣೆ ಮಾಡಿದರೆ ಯಾವುದು ತಪ್ಪಿಲ್ಲ. ಲಿಂಗಾಯತ ಮತ್ತು ವೀರಶೈವ ಪದಗಳಲ್ಲಿ ಬೇದ-ಭಾವ ಬೇಡ. ಯಾಕೆಂದರೆ ಲಿಂಗಾಯತ ಹಾಗೂ ವೀರಶೈವ ತಾತ್ವಿಕವಾಗಿ ಎರಡೂ ಒಂದೆ," ಎಂದು ಸಮರ್ಥಿಸಿಕೊಂಡರು.

Independent religion is agreed if it is announces by constitution : Gurusiddha Swamiji

"ಧರ್ಮದ ಬಗ್ಗೆ ಚರ್ಚೆಯೇ ಅಪ್ರಸ್ತುತ. ಹೀಗಾಗಿ ಧರ್ಮದ ಹೆಸರಿನಲ್ಲಿ ಜಗಳ ಮಾಡುವುದು ಸರಿಯಲ್ಲ. ಧರ್ಮ ಮನುಷ್ಯನ ಭಾವನೆ ಜೊತೆ ಬೆರೆತಿದ್ದು, ಈ ವಿವಾದಗಳು ಇತ್ತೀಚಿಗೆ ಹುಟ್ಟಿಕೊಂಡಿವೆ. ಲಿಂಗಾಯತ ಬಸವಣ್ಣನಿಂದ ವೀರಶೈವ ಪರಮೇಶ್ವರನಿಂದ ಬಂದಿದ್ದು ಎಂಬ ಮಾತಿದೆ. ಲಿಂಗಾಯತ ಮತ್ತು ವೀರಶೈವ ಈ ಎರಡು ಧರ್ಮಗಳು ಅನಾದಿ ಕಾಲದಲ್ಲಿ ಧರ್ಮ ಎಂದು ಗುರುತಿಸಿ ಕೊಂಡಿದ್ದು, ಇದಕ್ಕೆ ಆಗಮನಗಳೇ ಸಾಕ್ಷಿಯಾಗಿವೆ," ಎಂದು ಸ್ವಾಮೀಜಿ ಹೇಳಿದರು.

English summary
Gurusiddha Rajayogendra Swamiji of Muru Savira Mutt clarified that we would be accepted independent religion if it is announces by constitutional. He asserted that Lingayath and Verashaiva both are same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X