ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಗರೇ ನಿಮ್ಮನೆ ಬೀಗ ಗಟ್ಟಿ ಇದೆಯಾ ನೋಡ್ಕಳಿ!

By ಶಂಭು ಹುಬ್ಬಳ್ಳಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್, 23: ಹುಬ್ಬಳ್ಳಿ ಜನರು ಮನೆಗೆ ಬೀಗ ಹಾಕಿ ಹೊರಕ್ಕೆ ಹೋಗಲು ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮನೆಗೆ ಬೀಗ ಹಾಕಿದರೂ ಎರಡೆರಡು ಸಾರಿ ಪರಿಶೀಲನೆ ಮಾಡಿ ತೆರಳಬೇಕು!

ಇದಕ್ಕೆಲ್ಲ ಕಾರಣ ಹೆಚ್ಚಿಕೊಂಡಿರುವ ಮನೆಗಳ್ಳರ ಹಾವಳಿ. ಕಳೆದ ಒಂದು ವಾರದ ಅವಧಿಯಲ್ಲಿ ಹುಬ್ಬಳ್ಳಿ ನಗರದಲ್ಲಿ ಮೂರು ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಸರಣಿ ಕಳ್ಳತನ ದಿನಬಿಟ್ಟು ದಿನ ನಡೆಯುತ್ತಲೇ ಇದೆ.

ಹಳೇ ಹುಬ್ಬಳ್ಳಿ: ನಗರದ ಅಧ್ಯಾಪಕ ನಗರದ ಕಿರಣ ಮೇಲಗಿರಿ ತೇರದಾಳ ಎಂಬುವರ ಮನೆಗ ನುಗ್ಗಿದ ಕಳ್ಳರು 231 ಗ್ರಾಂ. ಚಿನ್ನ, 230 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 1.39 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

Hubballi turning out house robbers capital

ಕೇಶ್ವಾಪುರ: ಪ್ರತಿಷ್ಠಿತ ಬಡಾವಣೆ ಎಂದೇ ಹೆಸರಾಗಿರುವ ಕೇಶ್ವಾಪುರ ಭಾಗದ ಮಧುರಾ ಕಾಲೋನಿಯ ಅಬ್ದುಲ ರಹೀಮ ಲಕ್ಕುಂಡಿ ಎಂಬುವರ ಮನೆ ಕೀಲಿ ಮುರಿದು ಮನೆಯಲ್ಲಿದ್ದ 3 ಸಾವಿರ ರೂ.ಗಳನ್ನು ಆಗಸ್ಟ್ 20 ರಂದು ದೋಚಲಾಗಿತ್ತು.

ನವನಗರ: ನವನಗರ ಪ್ರದೇಶದ ಶಿವಾನಂದ ನಗರದ ಭೀಮರಾವ್ ಗೋಪಾಲರಾವ್ ಕುಲಕರ್ಣಿ ಎಂಬುವರ ಮನೆಯ ಬೀಗ ಮುರಿದ ಕಳ್ಳರು, ಮನೆಯಲ್ಲಿದ್ದ 18 ಸಾವಿರ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಹೆಚ್ಚಿದ ಆತಂಕ:
ಹುಬ್ಬಳ್ಳಿ ನಗರದಲ್ಲಿ ಹೆಚ್ಚುತ್ತಿರುವ ಮನೆಗಳ್ಳತನ ಮತ್ತು ಸರಗಳ್ಳತನವನ್ನು ಹು-ಧಾ ಪೊಲೀಸರು ಹಗುರವಾಗಿ ಪರಿಣಮಿಸಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಓಡಾಡಲು ಹೆದರಬೇಕಾಗಿದೆ, ಇನ್ನು ಮನೆ ಕೀಲಿ ಹಾಕಿಕೊಂಡು ನಿರುಮ್ಮಳವಾಗಿ ಊರಿಗೆ ಹೋಗುವುದು ಅಸಾಧ್ಯವಾಗಿದೆ ಎಂದು ನಾಗರಿಕರು ಪೊಲೀಸರ ವಿರುದ್ಧ ಗುಡುಗಿದ್ದಾರೆ.

ಛೋಟಾ ಬಾಂಬೆ ಎಂದೇ ಖ್ಯಾತಿಯಾಗಿರುವ ಹುಬ್ಬಳ್ಳಿಯಲ್ಲಿ ಪೊಲೀಸರು ಬರೀ ಸಂಚಾರ ನಿಯಂತ್ರಣ ಮಾಡುವುದೊಂದೇ ದೊಡ್ಡ ಕೆಲಸವೆಂದುಕೊಂಡಿದ್ದಾರೆ. ಸಂಚಾರ ನಿಯಂತ್ರಣಕ್ಕೆ ಲಕ್ಷಗಟ್ಟಲೇ ಸರಕಾರದಿಂದ ಅನುದಾನ ಬರುತ್ತಿರುವುದಕ್ಕಾಗಿ ಹೀಗೆ ಸಂಚಾರ ವಿಭಾಗಕ್ಕೆ ಮಾತ್ರ ಗಮನ ಹರಿಸಲಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಅಪರಾಧ ವಿಭಾಗವನ್ನು ಇನ್ನಷ್ಟು ಗಟ್ಟಿಗೊಳಿಸಿ ರಾತ್ರಿ ಪೊಲೀಸರ ಗಸ್ತು ಹೆಚ್ಚಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಆಸ್ಪತ್ರೆಯಲ್ಲಿ ಫೈಟಿಂಗ್:
ಗಾಳಿಪಟ ಹಾರಿಸುವ ಸಲುವಾಗಿ ನಡೆದ ಜಗಳದಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಮತ್ತೆ ಜಗಳ ಮಾಡಿಕೊಂಡು ಕಿತ್ತಾಡಿದ ಘಟನೆ ನಗರದಲ್ಲಿ ಮಂಗಳವಾರ ಜರುಗಿದೆ.

ಇಲ್ಲಿಯ ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಗೌಸಿಯಾಟೌನ್ ನ ಬಶೀರ್ ಎಂಬುವನು ಗಾಳಿಪಟ ಹಾರಿಸುತ್ತಿದ್ದಾಗ ಜಾಹೀರ್ ಎಂಬ ಮತ್ತೊಬ್ಬನ ಗಾಳಿಪಟಕ್ಕೆ ತಾಗಿದೆ. ಇದರಿಂದ ಸಿಟ್ಟಿಗೆದ್ದ ಜಾಹೀರ್ ಬಶೀರ್ ನೊಂದಿಗೆ ಜಗಳಕ್ಕಿಳಿದಿದ್ದಾನೆ. ಠಾಣೆಯ ಮೆಟ್ಟಿಲು ಹತ್ತಿದ ಜಗಳವನ್ನು ಪೊಲೀಸರು ಇಬ್ಬರನ್ನು ಸಮಾಧಾನಪಡಿಸಿ ಕಳಿಸಿದ್ದರು. ಜಗಳದಲ್ಲಿ ಇಬ್ಬರೂ ಗಾಯಗೊಂಡಿದ್ದರಿಂದ ಕಿಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಬ್ಬರೂ ಮತ್ತೆ ಜಗಳಕ್ಕಿಳಿದಿದ್ದಾರೆ. ಆಸ್ಪತ್ರೆಯಲ್ಲಿ ಒಬ್ಬರಿಗೊಬ್ಬರು ಮೇಲೆ ಬಿದ್ದು ಹೊಡೆದಾಟ ಮಾಡುತ್ತಿರುವಾಗ ಸ್ಥಳಕ್ಕಾಗಮಿಸಿ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

English summary
Hubballi: Hubballi witnessed total 3 house robbery incident in a week. Hale Hubballi, Keshavapira and Navanaga targeted by robbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X