ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

104 ಸಹಾಯವಾಣಿಗೆ ಗುಪ್ತ, ಲೈಂಗಿಕ ಸಮಸ್ಯೆಗಳ ಕರೆಗಳೇ ಹೆಚ್ಚು

By Basavaraj Maralihalli
|
Google Oneindia Kannada News

ಹುಬ್ಬಳ್ಳಿ, ಜೂನ್ 24 : ರಾಜ್ಯ ಸರ್ಕಾರ ಪರಿಚಯಿಸಿರುವ ಆರೋಗ್ಯವಾಣಿ 104ಕ್ಕೆ ಬರುವ ಶೇ.100ಕ್ಕೆ ನೂರರಷ್ಟು ಯುವಕರ ಕರೆಗಳು ಲೈಂಗಿಕ ಹಾಗೂ ಗುಪ್ತ ಸಮಸ್ಯೆಗಳಿಗೆ ಸಂಬಂಧಿಸಿದ್ದವುಗಳು ಎಂಬ ಕುತೂಹಲದ ಸಂಗತಿ ಹೊರ ಬಿದ್ದಿದೆ.

ಹೌದು, ರಾಜ್ಯ ಸರ್ಕಾರದ ಈ ಸಹಾಯವಾಣಿಗೆ ಬರುವ ಕರೆಗಳ ವಿವರಗಳನ್ನು ಬಹಿರಂಗ ಪಡಿಸದ ಕಾರಣ ಇಲ್ಲಿಗೆ ಬರುವ ಬಹುತೇಕ ಕರೆಗಳು ಮತ್ತೊಬ್ಬರಿಗೆ ಹೇಳಿಕೊಳ್ಳಲಾಗದ ಸಮಸ್ಯೆಗಳಿಗೆ ಸಂಬಂಧಿಸಿದ್ದವುಗಳು ಎಂದು ಅಂಕಿ-ಅಂಶಗಳು ತಿಳಿಸುತ್ತವೆ. ಇದನ್ನು ಹೊರತುಪಡಿಸಿದರೆ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಜನರು ಕರೆ ಮಾಡುತ್ತಾರೆ.

'ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಸಹಾಯವಾಣಿ ಮೂಲಕ ಉಚಿತವಾಗಿ ನೀಡಲಾಗುತ್ತಿದೆ. ಆದರೆ, ವೈದ್ಯರ ಬಳಿ ಹೋಗಲು ಹಿಂಜರಿಯುವ ಹಲವರು ಗುಪ್ತಾಂಗ, ಸೌಂದರ್ಯ, ಲೈಂಗಿಕ ಸಂಬಂಧಿಸಿದ ಸಮಸ್ಯೆಗಳಿಗೆ ಆರೋಗ್ಯವಾಣಿ ಮೂಲಕ ಪರಿಹಾರ ಪಡೆಯುತ್ತಿದ್ದಾರೆ. ಅಸಂಬದ್ಧ ಪ್ರಶ್ನೆ ಕೇಳುವವರ ಕರೆಗಳ ಸಂಖ್ಯೆ ಈಗ ಕಡಿಮೆ ಆಗಿದೆ' ಎನ್ನುತ್ತಾರೆ ಆರೋಗ್ಯ ಸಹಾವಾಣಿಯ ವ್ಯವಸ್ಥಾಪಕ ರಾಘವೇಂದ್ರ ಆಡೂರ.

ಗುಪ್ತ ಹಾಗೂ ಲೈಂಗಿಕ ಸಮಸ್ಯೆಗೆ ಹೆಚ್ಚು ಕರೆಗಳು

ಗುಪ್ತ ಹಾಗೂ ಲೈಂಗಿಕ ಸಮಸ್ಯೆಗೆ ಹೆಚ್ಚು ಕರೆಗಳು

ಇದೇ ಜೂನ್ 19ಕ್ಕೆ ಸಹಾಯವಾಣಿ ಆರಂಭವಾಗಿ ನಾಲ್ಕು ವರ್ಷ ಪೂರೈಸಿದ್ದು, ಸಹಾಯವಾಣಿ ಮೂಲಕ 700 ಸಮಸ್ಯೆಗಳಿಗೆ ಸಲಹೆ ನೀಡಲಾಗುತ್ತಿದೆ. ಈವರೆಗೆ 1.57 ಕೋಟಿ ಕರೆಗಳು ಬಂದಿದ್ದು, ಇದರಲ್ಲಿ ಶೇ 45ರಷ್ಟು ಜನರು ಗುಪ್ತ ರೋಗಗಳ ಬಗ್ಗೆ ಸವಿವರವಾಗಿ ಚರ್ಚಿಸಿದ್ದಾರಲ್ಲದೆ ಪೋನಿನಲ್ಲಿಯೇ ಆಪ್ತ ಸಮಾಲೋಚನೆ ಮೂಲಕ ಸಲಹೆ ಪಡೆದಿದ್ದಾರೆ.

ಲೈಂಗಿಕ ಸಮಸ್ಯೆಗೆ ಶೇ 21.3 ಕರೆಗಳು

ಲೈಂಗಿಕ ಸಮಸ್ಯೆಗೆ ಶೇ 21.3 ಕರೆಗಳು

ಇನ್ನು ಶೇ 21.3 ಕರೆಗಳು ಲೈಂಗಿಕ ಸಮಸ್ಯೆಗೆ ಸಂಬಂಧಿಸಿದ್ದವಾಗಿದ್ದು, ಸ್ವಪ್ನಸ್ಕಲನದ ಸಮಸ್ಯೆಗೆ 8.2%, ಪೇನ್ ವಿತ್ ಸೆಕ್ಸೂಲ್ ಇಂಟರ್ ಕೋರ್ಸ್ ಗೆ 8% ಹಾಗೂ ಹಸ್ತ ಮೈಥುನಕ್ಕೆ ಸಂಬಂಧಿಸಿದಂತೆ 5.1% ರಷ್ಟು ಕರೆಗಳು ಬಂದಿವೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಉಳಿದಂತೆ ಹೃದಯ ಸಂಬಂಧಿ ಹಾಗೂ ಇನ್ನಿತರೆ ಕಾಯಿಲೆಗಳ ಸಲಹೆಗೂ ಕರೆ ಮಾಡಿ ಸಲಹೆ ಪಡೆದಿದ್ದಾರೆ.

ವಿಜಯಪುರ ನಂ.1

ವಿಜಯಪುರ ನಂ.1

ಆರೋಗ್ಯ ಸಹಾಯವಾಣಿಗೆ Pರೆ ಮಾಡಿದವರ ಪೈಕಿ ವಿಜಯಪುರ ಜಿಲ್ಲೆಯಿಂದಲೇ ಹೆಚ್ಚು ಕರೆಗಳು ಬಂದಿದ್ದು, ಚಾಮರಾಜನಗರ ಕೊನೆ ಸ್ಥಾನದಲ್ಲಿದೆ. ಮೈಸೂರ ಭಾಗದ ಜಿಲ್ಲೆಗಳ ಪೈಕಿ ಬೆಂಗಳೂರು, ತುಮಕೂರ ಬಿಟ್ಟು ಉಳಿದೆಡೆಯಿಂದ ಸರಾಸರಿ ಶೇ. 1ರಷ್ಟು ಕರೆಗಳು ಕೂಡ ಬಂದಿಲ್ಲ. ಇಲ್ಲಿ ವೈದ್ಯಕೀಯ ಸಲಹೆ ಜತೆಗೆ ವೈದ್ಯರು ಎಸ್‌ಎಂಎಸ್ ಮೂಲಕ ಔಷಧಿಯನ್ನು ಸೂಚಿಸುತ್ತಿರುವುದು ರೋಗಿಗಳಿಗೆ ಅನುಕೂಲವಾಗಿದೆ.

ಅಸಂಬದ್ಧ ಪ್ರಶ್ನೆಗಳು

ಅಸಂಬದ್ಧ ಪ್ರಶ್ನೆಗಳು

014-15ರಲ್ಲಿ ಕರೆ ಮಾಡುವವರ ಅಸಂಬದ್ಧ ಪ್ರಶ್ನೆಗಳಿಗೆ ಇಲ್ಲಿನ ಸಿಬ್ಬಂದಿ ರೋಸಿ ಹೋಗಿದ್ದರು. ಇದೇ ಕಾರಣಕ್ಕೆ ಕೆಲವರು ಕೆಲಸ ಬಿಟ್ಟು ಕೂಡ ಹೋಗಿದ್ದರು. ಆದರೆ, ಇತ್ತೀಚಿಗೆ ಅಂತಹ ಪ್ರಶ್ನೆಗಳಿಗೆ ಕಡಿವಾಣ ಬಿದ್ದಿದೆ ಎಂಬುದ ಸಂತಸದ ಸಂಗತಿ.

English summary
State government’s Health Helpline-104 has received 1.56 crores calls since four years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X