ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಣಜಿ: ಪ್ರಿಯಾಂಕ ಪಂಚಾಲ ಶತಕ, ಉತ್ತಮ ಸ್ಥಿತಿಯಲ್ಲಿ ಗುಜರಾತ್

By ಶಂಭು, ಹುಬ್ಬಳ್ಳಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್, 22 : ನಗರದ ರಾಜನಗರ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಮುಂಬಯಿ ತಂಡದ ವಿರುದ್ಧ ಗುಜರಾತ್ ಸೋಮವಾರ ಮೊದಲ ದಿನದಾಟದಲ್ಲಿ ಪ್ರಿಯಾಂಕ ಪಂಚಾಲರ ಭರ್ಜರಿ ಶತಕ ಬಾರಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್, ಸಮಿತ ದಹೋಲಕರ ಹಾಗೂ ಪ್ರಿಯಾಂಕ ಪಂಚಾಲ ಉತ್ತಮ ಜತೆಯಾಟ ಆಡಿದರು. ಪ್ರಿಯಾಂಕ ಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಗುಜರಾತ್ 90 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 246 ರನ್ ಗಳಿಸಿ ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ. [ರಣಜಿ ಟ್ರೋಫಿ: ಮುಂಬಯಿ-ಗುಜರಾತ್ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ]

Ranaji, Day 1: Priyank Panchal hit century as Gujarat reach 245/2 at stumps

ಸಮಿತ ಗೋಯಲ್ 207 ಎಸೆತಗಳನ್ನು ಎದುರಿಸಿ 87 (11 ಬೌಂಡರಿ, 2 ಸಿಕ್ಸರ್) 87 ರನ್ ಗಳಿಸಿದ್ದಾಗ ದಬೋಲ್ಕರ ಬೌಲಿಂಗ್ ನಲ್ಲಿ ಕ್ರೀನ್ ಬೌಲ್ಡ್ ಆಗುವ ಮೂಲಕ ಗುಜರಾತ್ ತಂಡದ ಮೊದಲನೇ ವಿಕೆಟ್ ಪತನಗೊಂಡಿತು.

ನಂತರ ಬಂದ ಭಾರ್ಗ ಮೆರೈ (0) ದಬೋಲ್ಕರ ಬೌಲಿಂಗನಲ್ಲಿಯೇ ಎಲ್ ಬಿಗೆ ಔಟಾದರು. ಖ್ಯಾತ ಟೆಸ್ಟ್ ಆಟಗಾರ ಪಾರ್ಥಿವ ಪಟೇಲ್ 38 ಎಸೆತಗಳಲ್ಲಿ ಕೇವಲ 12 ( 2 ಬೌಂಡರಿ) ರನ್ ಗಳಿಸಿ ಅದಿತ್ಯ ಧುಮಾಲರ ಬೌಲಿಂಗ್ ಗೆ ಎ ಹರ್ವಡೇಕರಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

ಪ್ರಿಯಾಂಕ ಜೊತೆ ಮನಪ್ರೀತ್ ಜುನೇಜಾ 39 ಬೌಲ್ ಗಳಲ್ಲಿ 22 (2 ಬೌಂಡರಿ) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. 17 ಬೌಂಡರಿ ಬಾರಿಸಿರು ಪ್ರಿಯಾಂಕ ಪಂಚಾಳ 256 ಎಸೆತಗಳಲ್ಲಿ 122 ರನ್ ಗಳಿಸಿ ಮಂಗಳವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 9 ಕ್ಕೆ ಮತ್ತೆ ಎರಡೂ ತಂಡಗಳ ಆಟ ಮುಂದುವರಿಯಲಿದೆ.

ಬೌಲಿಂಗ್ ವಿವರ: ಆದಿತ್ಯ ಧುಬಲ 22 ಓವರ್ ಗಳಲ್ಲಿ 1 ವಿಕೆಟ್ ಪಡೆದಿದ್ದಾರೆ. ವಿಶಾಲ ಧಾಬೋಲ್ಕರ 21 ಓವರ್ ಗಳಲ್ಲಿ 2 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಬೌಲಿಂಗ್ ಮಾಡಿದ ಧವಲ ಕುಲಕರ್ಣಿ, ಶಾರ್ದುಲ ಠಾಕೂರ, ಅಖಿಲ ಹರ್ವಡೇಕರ, ಅಭಿಷೇಕ ನಯ್ಯರ, ಶ್ರೇಯಸ ಅಯ್ಯರ್, ಸೂರ್ಯಕುಮಾರ ಯಾದವ ಯಾವುದೇ ವಿಕೆಟ್ ಪಡೆಯಲು ಸಫಲರಾಗಲಿಲ್ಲ.

ಪಾಯಿಂಟ್ ಪಟ್ಟಿ: ಇದುವರೆಗೂ 5 ಪಂದ್ಯಗಳನ್ನು ಆಡಿರುವ ಮುಂಬಯಿ ತಂಡವು ಮೂರರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡು 25 ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿದೆ. ಗುಜರಾತ್ ತಂಡವು ಆಡಿದ 4 ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳು ಡ್ರಾ ಆಗಿವೆ.

English summary
Gujarat sat in driver's seat against Mumbai at the end of 1st day play in the Ranaji Test match here on Monday November 21, KSCA stadium Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X