ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಹಕರೆ ಎಚ್ಚರ, ಬ್ಯಾಂಕಿನಲ್ಲಿ ನೋಟು ಎಣಿಸಲೂ ಶುಲ್ಕವಿದೆ!

By Basavaraj
|
Google Oneindia Kannada News

ಹುಬ್ಬಳ್ಳಿ, ಜುಲೈ 15: ತಮ್ಮ ಖಾತೆಗಳಿಗೆ ಜಮಾ ಮಾಡಲು ಗ್ರಾಹಕರು ತರುವ ಕರೆನ್ಸಿ ನೋಟುಗಳನ್ನು ಏಣಿಕೆ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶುಲ್ಕ ವಿಧಿಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಇಲ್ಲದಿದ್ದರೆ ಮುಂದಿನ ಸಾಲುಗಳನ್ನು ಓದಿ.

ನೆಟ್ ಬ್ಯಾಂಕಿಂಗ್ ಫಂಡ್ ಟ್ರಾನ್ಸ್ ಫರ್ ಮೇಲಿನ ಶುಲ್ಕ ಇಳಿಕೆ ನೆಟ್ ಬ್ಯಾಂಕಿಂಗ್ ಫಂಡ್ ಟ್ರಾನ್ಸ್ ಫರ್ ಮೇಲಿನ ಶುಲ್ಕ ಇಳಿಕೆ

ಹೌದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 8, 2016 ರ ಮಧ್ಯೆ ರಾತ್ರಿಯಿಂದ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತರ ಬ್ಯಾಂಕುಗಳ ಅವಲಂಬನೆ ಹೆಚ್ಚಾಗಿದೆ. ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲ ಬ್ಯಾಂಕುಗಳು ಗ್ರಾಹಕರು ತಮ್ಮ ಖಾತೆಗಳಿಗೆ ಹಣ ಜಮಾ ಮಾಡಲು ತರುವ ಕರೆನ್ಸಿ ನೋಟುಗಳನ್ನು ಏಣಿಕೆ ಮಾಡಲು ಈಗ ಶುಲ್ಕ ವಿಧಿಸುತ್ತಿದ್ದಾರೆ ಎಂಬ ದೂರು ಹುಬ್ಬಳ್ಳಿಯಲ್ಲಿ ಕೇಳಿಬರುತ್ತಿದೆ.

Do the banks impose fees for counting currency notes?

ಯಾವುದೇ ಮುಖ ಬೆಲೆಯ ಕರೆನ್ಸಿ ನೋಟುಗಳಿರಲಿ ಒಂದು ಬಾರಿ 1000 ನೋಟುಗಳನ್ನು ಬ್ಯಾಂಕಿನಲ್ಲಿ ಜಮಾ ಮಾಡಲು ಬ್ಯಾಂಕಿಗೆ ಬಂದರೆ, ಇದಕ್ಕೆ 100 ಶುಲ್ಕ ತೆರಲೇ ಬೇಕು. ಉದಾಹರಣಗೆ 10 ರೂಪಾಯಿ ಮುಖ ಬೆಲೆಯ 1000 ನೋಟುಗಳ ಮೌಲ್ಯ 10000 ಆಗಲಿದೆ. ಈ 10000 ಹಣವನ್ನು ತಮ್ಮ ಖಾತೆಗೆ ಜಮಾ ಮಾಡುವ ಸಂದರ್ಭದಲ್ಲಿ ಈ ಕರೆನ್ಸಿ ನೋಟುಗಳನ್ನು ಏಣಿಕೆ ಮಾಡಲು ಬ್ಯಾಂಕಿಗೆ 1000 ರೂಪಾಯಿ ಶುಲ್ಕ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬ್ಯಾಂಕಿನಲ್ಲಿ ನೋಟುಗಳ ಏಣಿಕೆಗೆ ಅತ್ಯಾಧುನಿಕ ಮಶೀನ್ ಗಳಿದ್ದರೂ ಅದಕ್ಕೆ ಶುಲ್ಕ ವಿಧಿಸುವ ಮೂಲಕ ಗ್ರಾಹಕರಿಗೆ ಬರೆ ಎಳೆಯುತ್ತಿರುವ ಬ್ಯಾಂಕುಗಳ ವಿರುದ್ಧ ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ.

English summary
After demonetization people are depending on banks. But bankers are misusing this opportunity by imposing fees for counting currency notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X