ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಧಾ ಮೇಯರ್ ಮನೆಯಲ್ಲಿಯೇ ಮೂವರಿಗೆ ಡೆಂಗ್ಯೂ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮಹಾಮಾರಿ ಡೆಂಗೆ ಭೀತಿ ಎಲ್ಲೆಡೆ ಆವರಿಸಿದ್ದು, ಮಹಾನಗರದ ಪ್ರಥಮ ಪ್ರಜೆ ಮೇಯರ್ ಡಿ.ಕೆ.ಚವ್ಹಾಣ್ ಅವರ ಮೂವರು ಮೊಮ್ಮಕ್ಕಳು ಶಂಕಿತ ಡೆಂಗೆ ಜ್ವರದಿಂದ ಬಳಲುತ್ತಿದ್ದಾರೆ. ಮೊಮ್ಮಕ್ಕಳನ್ನು ಚವ್ಹಾಣ್ ನಗರದ ಚಿಟಗುಪ್

By Basavaraj
|
Google Oneindia Kannada News

ಹುಬ್ಬಳ್ಳಿ, ಜುಲೈ 22 : ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮಹಾಮಾರಿ ಡೆಂಗ್ಯೂ ಭೀತಿ ಎಲ್ಲೆಡೆ ಆವರಿಸಿದ್ದು, ರೋಗಿಗಳು ಪರದಾಡುತ್ತಿದ್ದಾರೆ. ಈ ನಡುವೆ, ಶುಕ್ರವಾರ ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಡೆಂಗ್ಯೂಗೆ ಬಲಿಯಾಗಿದ್ದಾಳೆ.

ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!

ಮಹಾನಗರದ ಪ್ರಥಮ ಪ್ರಜೆ ಮೇಯರ್ ಡಿ.ಕೆ.ಚವ್ಹಾಣ್ ಅವರ ಮೂವರು ಮೊಮ್ಮಕ್ಕಳು ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಮೊಮ್ಮಕ್ಕಳನ್ನು ಚವ್ಹಾಣ್ ನಗರದ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಂಡಿರುವ ಒಂದು ಮಗು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದೆ.

Dengue fever grips Hubballi Dharwad : Mayor's family too suffer

ಮೇಯರ್ ಅವರ ಮೊಮ್ಮಕ್ಕಳಾದ ಶೀತಲ್, ಪ್ರಿಯಾಂಕಾ ಹಾಗೂ ಅರ್ಪಿತಾ ಎಂಬುವರು ಸೋಂಕಿನಿಂದ ಬಳಲುತ್ತಿದ್ದಾರೆ. ಅವರಲ್ಲಿ ಪ್ರಿಯಾಂಕಾ ಚೇತರಿಸಿಕೊಂಡಿದ್ದು, ಮನೆಗೆ ತೆರಳಿದ್ದಾರೆ. ಶೀತಲ್ ಮತ್ತು ಅರ್ಪಿತಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರ್ಪಿತಾ ದೇಹದಲ್ಲಿ ಬಿಳಿ ರಕ್ತಕಣಗಳು ಕುಂಠಿತಗೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಡೆಂಗ್ಯೂ ರೋಗಿ ಮನೆಗೆ ಶೆಟ್ಟರ್ ಭೇಟಿ

ಡೆಂಗ್ಯೂಯಿಂದ ಬಳಲುತ್ತಿದ್ದ ನಗರದ ಬ್ಯಾಂಕರ್ಸ್ ಕಾಲೋನಿಯ ನಿವಾಸಿ ಗಣೇಶ್ ಪೆನಗೊಂಡ ಅವರ ಮನೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಶುಕ್ರವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಗಣೇಶ್ ಅವರು ಗೋಕುಲ ರಸ್ತೆಯ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ವಾಪಸ್ ಆಗಿದ್ದಾರೆ.

ಡೆಂಗ್ಯೂ: ಬೆಂಗಳೂರು ನಗರ ಜಿಲ್ಲೆಯ ಡಿಎಚ್ ಒ ರಮೇಶ್ ಬಾಬು ಸಂದರ್ಶನಡೆಂಗ್ಯೂ: ಬೆಂಗಳೂರು ನಗರ ಜಿಲ್ಲೆಯ ಡಿಎಚ್ ಒ ರಮೇಶ್ ಬಾಬು ಸಂದರ್ಶನ

ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ?

ಹುಬ್ಬಳ್ಳಿಯ ವಿದ್ಯಾನಗರದ ಐದು ವರ್ಷದ ಬಾಲಕಿ ಸಮನ್ವಿ ಗಡ್ಡಿ ಮಾರಕ ಡೆಂಗ್ಯೂಗೆ ಬಲಿಯಾಗಿದ್ದಾಳೆ. ಐದು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳುತ್ತಿದ್ದ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾಳೆ.

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವೆಡೆ ಡೆಂಗ್ಯೂ ಉಲ್ಬಣಗೊಂಡಿದ್ದು, ಚಿಕಿತ್ಸೆಗೆ ರೋಗಿಗಳು ಪರದಾಡುವಂತಾಗಿದೆ. ಈ ಕುರಿತು ಮಾತನಾಡಿದ ಪಾಲಿಕೆ ವೈದ್ಯಾಧಿಕಾರಿ ಡಾ.ಪ್ರಭು ಬಿರಾದಾರ, ಜ್ವರದಿಂದ ಮೆದುಳು ನಿಷ್ಕ್ರೀಯಗೊಂಡು ಬಾಲಕಿ ಮೃತಪಟ್ಟಿದ್ದು, ೧೦ ದಿನಗಳ ನಂತರ ಡೆಂಗ್ಯೂ ದೃಢಪಡಿಸಬೇಕಾಗುತ್ತದೆ. ಆದರೆ ಆಸ್ಪತ್ರೆಗೆ ದಾಖಲಾಗಿ ಮೂರು ದಿನದಲ್ಲಿ ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದರು.

English summary
Dengue fever has gripped entire Hubballi Dharwad. One girl in Hubballi died of dengue on Friday. The deadly fever has affected Hubballi Dharwad mayor DK Chavan's family too. Jagadish Shettar visited a person who was suffering from dengue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X