ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಜಾನ್ ಗೆ ದಮುಲ್‌ನಿಂದ 50 ಸಾವಿರ ಲೀಟರ್ ಹಾಲು

By Basavaraj
|
Google Oneindia Kannada News

ಹುಬ್ಬಳ್ಳಿ, ಜೂನ್ 26: ಮುಸಲ್ಮಾನರ ಪವಿತ್ರ ಹಬ್ಬ ಈದ್-ಉಲ್-ಫಿತ್ರ್ ಆಚರಣೆಗಾಗಿ ಸಿಹಿ ಖಾದ್ಯ 'ಸುರಕುಂಬಾ' ತಯಾರಿಕೆಗೆ ಧಾರವಾಡ, ಗದಗ, ಹಾವೇರಿ ಹಾಗೂ ಕಾರವಾರ ಜಿಲ್ಲೆಗಳಿಂದ ೫೦ ಸಾವಿರ ಹಾಲಿನ ಬೇಡಿಕೆ ಬಂದಿದ್ದು, ಧಾರವಾಡ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ (ದಮುಲ್) ಬೇಡಿಕೆ ಪೂರೈಸಿದೆ.

ನಿತೀಶ್ ಗೆ ಟೋಪಿ ಹಾಕಿದ ಲಾಲೂ, ಮಜವಾದ ಫೋಟೋ ನೋಡಿ...ನಿತೀಶ್ ಗೆ ಟೋಪಿ ಹಾಕಿದ ಲಾಲೂ, ಮಜವಾದ ಫೋಟೋ ನೋಡಿ...

ಈದ್-ಉಲ್-ಫಿತ್ರ್ ಸಂದರ್ಭದಲ್ಲಿ ಮುಸಲ್ಮಾನ ಬಾಂಧವರು ಕೇವಲ ಶಾಖಾಹಾರಿ ಖಾದ್ಯಗಳನ್ನಷ್ಟೇ ಅಲ್ಲದೆ, ಸಿಹಿ ಖಾದ್ಯಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ.

 DAMUL supplies 50 litres milk for Ramzan in Hubballi

ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ತುಪ್ಪ ಹಾಗೂ ಶಾವಿಗೆಯಿಂದ ರುಚಿ ಭರಿತವಾದ ಸಿಹಿ ಖಾದ್ಯ 'ಸುರಕುಂಬಾ' ತಯಾರಿಸಲು ಹಾಲು ಬೇಕೆ ಬೇಕು. ಸಾಮಾನ್ಯವಾಗಿ ಪ್ರತಿದಿನ ೫ ರಿಂದ ೧೦ ಸಾವಿರ ಹಾಲು ಪೂರೈಕೆ ಮಾಡುವ ಒಕ್ಕೂಟ, ಈ ಹಬ್ಬದ ನಿಮಿತ್ತವಾಗಿ ಇಷ್ಟೊಂದು ಬೇಡಿಕೆ ಪೂರೈಸುವುದು ಅನಿವಾರ್ಯವಾಗಿದೆ.

ಈದ್-ಉಲ್-ಫಿತ್ರ್ ಅಂಗವಾಗಿ ಬೆಳಗಿನ ಪ್ರಾರ್ಥನೆ ಮುಗಿಸಿ ಬಂಧು-ಸ್ನೇಹಿತರೊಂದಿಗೆ ಸುರಕುಂಬಾ ಕುಡಿಯುವುದು ಈ ಹಬ್ಬದಲ್ಲಿ ಮುಸಲ್ಮಾನ ಬಾಂಧವರು ನಡೆಸಿಕೊಂಡು ಬಂದಿರುವ ರೂಢಿ.

ಮನ್ ಕೀ ಬಾತ್: 1975ರ ಜೂನ್ 25 ಇತಿಹಾಸದ ಕರಾಳ ದಿನ, ತುರ್ತು ಪರಿಸ್ಥಿತಿ ನೆನೆದ ಮೋದಿಮನ್ ಕೀ ಬಾತ್: 1975ರ ಜೂನ್ 25 ಇತಿಹಾಸದ ಕರಾಳ ದಿನ, ತುರ್ತು ಪರಿಸ್ಥಿತಿ ನೆನೆದ ಮೋದಿ

ಹಾಲಿನೊಂದಿಗೆ ಅಂದಾಜು 200 ಕ್ವಿಂಟಲ್‌ನಷ್ಟು ಹಾಲಿನ ಉತ್ಪನ್ನಗಳಿಗೂ ಬೇಡಿಕೆ ಸಲ್ಲಿಕೆಯಾಗಿದ್ದು, ಧಾರವಾಡ ಹಾಲು ಒಕ್ಕೂಟ ಗ್ರಾಹಕರ ಬೇಡಿಕೆಗೆ ಈಡೇರಿಸಲು ಸಿದ್ಧವಾಗಿದೆ ಅಲ್ಲದೆ ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಪ್ರತಿ ದಿನ ಧಾರವಾಡ ಹಾಲು ಉತ್ಪಾದಕರ ಒಕ್ಕೂಟದಲ್ಲಿ 2 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಗ್ರಾಹಕರ ಬೇಡಿಕೆ ಪೂರೈಸಲು ಸಮಸ್ಯೆಯಿಲ್ಲ. ಆದರೆ, ಸಮಯಕ್ಕೆ ಸರಿಯಾಗಿ ತಲುಪಿಸಲು ಬೇಕಾಗಿರುವ ವಾಹನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಹೆಗಡೆ ಹೇಳುತ್ತಾರೆ.

English summary
DAMUL has supplied over 50 thousand liters milk to its consumer for making delicious solid ‘Surakumba’ by Muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X