ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ನಿಲ್ದಾಣಗಳಲ್ಲಿ ಅಕ್ಬರ್ ಚಿತ್ರಚರಿತ್ರೆ: ಪ್ರತಿಭಟನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 22: ಆಧುನೀಕರಣ ನೆಪದಲ್ಲಿ ಕೇಂದ್ರ ಸರಕಾರ ರೈಲ್ವೆ ನಿಲ್ದಾಣಗಳ ಗೋಡೆಗಳ ಮೇಲೆ ಅಕ್ಬರ್ ಜೀವನ ಚರಿತ್ರೆಯ ಚಿತ್ರ ಬಿಡಿಸುವುದನ್ನು ಖಂಡಿಸಿ ನಗರದಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟಿಸಿದವು.

ರಾಷ್ಟ್ರೀಯ ಹಿಂದೂ ಆಂದೋಲನದ ಕಾರ್ಯಕರ್ತರು ಕೇಂದ್ರ ಸರಕಾರ ಆಧುನಿಕ ಯೋಜನೆಯಡಿ ದೇಶದ ಎಲ್ಲ ರೈಲು ನಿಲ್ದಾಣಗಳ ಗೋಡೆಯ ಮೇಲೆ ಅಕ್ಬರ್ ನ ಪರಾಕ್ರಮದ ಕುರಿತು ಚಿತ್ರ ಬಿಡಿಸುವ ನಿರ್ಧಾರ ತೆಗೆದುಕೊಂಡಿರುವನ್ನು ಖಂಡಿಸಿದ್ದಾರೆ.

Akbar film history at railway stations wall, protest in hubballi

ಸ್ಥಳೀಯ ಮಿನಿ ವಿಧಾನಸೌಧದಲ್ಲಿ ಈ ಕುರಿತು ಪ್ರತಿಭಟಿಸಿದ ಪ್ರತಿಭಟನಾಕಾರರು ಹಿಂದೆ ಅನೇಕ ರಾಜರು ತಮ್ಮ ಕಾಲದಲ್ಲಿ ಎದುರಾದ ಶತೃಗಳ ವಿರುದ್ಧ ಸಾಕಷ್ಟು ಹೋರಾಡಿದ್ದಾರೆ. ಸಾಮ್ರಾಟ ಚಂದ್ರಗುಪ್ತ, ಮೌರ್ಯ, ರಾಣಾ ಮಹಾರಾಜ ಪ್ರತಾಪ, ಛತ್ರಪತಿ ಶಿವಾಜಿ, ಝಾನ್ಸಿರಾಣಿ ಲಕ್ಷ್ಮೀಬಾಯಿ ಸೇರಿದಂತೆ ಸಾಕಷ್ಟು ಹಿಂದೂ ರಾಜರುಗಳು ಪರಾಕ್ರಮ ಮೆರೆದಿದ್ದಾರೆ.[ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹೊಸ ಸ್ವೈಪಿಂಗ್ ಉಪಕರಣ]

Akbar film history at railway stations wall, protest in hubballi

ಪರಾಕ್ರಮಿಗಳ ಚಿತ್ರ ಬಿಡಿಸದೇ ಕೇಂದ್ರ ಸರಕಾರ ಮತಾಂಧ ಅಕ್ಬರ್ ಚಿತ್ರಗಳನ್ನು ಬಿಡಿಸುತ್ತಿರುವುದು ಹಿಂದೂಗಳಿಗೆ ಅವಮಾನ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಇದರಿಂದ ಮಾನಸಿಕವಾಗಿ ಹಿಂದೂಗಳು ಕುಗ್ಗುತ್ತಾರೆ. ಹಿಂದೂಗಳ ವಿರೋಧದ ನಡುವೆ ನಿಲ್ದಾಣಗಳಲ್ಲಿ ಅಕ್ಬರ್ ಚಿತ್ರ ಬಿಡಿಸಿದರೆ ಇಡೀ ದೇಶಾದ್ಯಂತ ಜನಾಕ್ರೋಶವಾಗುತ್ತಿದೆ .[ಸರಕಾರದ ಹೊಸ ಶುಲ್ಕ ನೀತಿ ವಿರೋಧಿಸಿ ಎಸ್ ಎಫ್ ಐ ಪ್ರತಿಭಟನೆ]

Akbar film history at railway stations wall, protest in hubballi

ಕಾರಣ ಕೂಡಲೇ ಕೇಂದ್ರ ಸರಕಾರ ಚಿತ್ರ ಬಿಡಿಸುವ ನಿರ್ಧಾರ ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಇಲ್ಲವಾದಲ್ಲಿ ಇಡೀ ದೇಶಾದ್ಯಂತ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

English summary
Akbar film history at railway stations wall, Hindu organizations proteste in hubballi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X