ಹಾಸನದಲ್ಲಿ ಮಾರುತಿ ವ್ಯಾನ್ ಗೆ ಆಕಸ್ಮಿಕ ಬೆಂಕಿ: ಭಸ್ಮ

By: ಹಾಸನ ಪ್ರತಿನಿಧಿ
Subscribe to Oneindia Kannada

ಹಾಸನ, ಸೆಪ್ಟೆಂಬರ್ 2: ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದಿದ್ದರಿಂದ ಮಾರುತಿ ಓಮ್ನಿ ಸುಟ್ಟು ಕರಕಲಾದ ಘಟನೆ ನಗರದ ಎನ್.ಆರ್. ವೃತ್ತ ಬಳಿ ಶುಕ್ರವಾರ ನಡೆದಿದೆ. ಈ ಘಟನೆಯಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಬೆಂಕಿ ಹಚ್ಚಿದರೇ ಎಂಬ ಸಂಶಯವೂ ವ್ಯಕ್ತವಾಗಿ, ಭಯದ ವಾತಾವರಣವೂ ನಿರ್ಮಾಣವಾಗಿತ್ತು. ಆದರೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕ ಶಾರ್ಟ್ ಸರ್ಕೀಟ್ ನಿಂದ ಬೆಂಕಿಗೆ ಆಹುತಿಯಾಗಿರುವುದು ದೃಢಪಟ್ಟಿತು.[ನರೇಂದ್ರ ಮೋದಿ ಹೃಷಿಕೇಶದ ಆಶ್ರಮದಲ್ಲಿ 2 ವರ್ಷ ಸನ್ಯಾಸಿಯಾಗಿದ್ರು]

ಮಾರುತಿ ಓಮ್ನಿ ಕಾರೊಂದು ಚಲಿಸುತ್ತಿದ್ದ ವೇಳೆ ಶಾರ್ಟ್ ಸರ್ಕೀಟ್ ಆಗಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಚಾಲಕ ಕೆಳಕ್ಕಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅಷ್ಟರಲ್ಲೇ ವ್ಯಾನ್ ಸಂಪೂರ್ಣ ಕರಕಲಾಗಿದೆ.

English summary
Maruti van bunt due to short circuit in N.R.Circle, Hassan. Who were travelling in maruti van all are safe.
Please Wait while comments are loading...