ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿಗೆ ನೀರು: ಹಾಸನದಲ್ಲಿ ಕರವೇಯಿಂದ ಪ್ರತಿಭಟನೆ

By Mahesh
|
Google Oneindia Kannada News

ಹಾಸನ, ಸೆ. 06: ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬೇಕೆನ್ನುವ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಕಾವೇರಿ ಕಣಿವೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಾಸನದಲ್ಲಿ ಬೀದಿಗಿಳಿದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‍ಕುಮಾರ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಯಲಲಿತರ ಭಾವಚಿತ್ರವನ್ನು ದಹಿಸುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಕಾವೇರಿ ವಿವಾದ : ಹೊಸೂರು, ಮೈಸೂರು ರಸ್ತೆಗೆ ಕಾಲಿಡಬೇಡಿ!]

Hassan: Karnataka Rakshana Vedike Protest against SC Verdict on Cauvery Dispute

ನಗರದ ಹೇಮಾವತಿ ಪ್ರತಿಮೆ ಬಳಿ ಕರವೇ ಕಾರ್ಯಕರ್ತರು ತಮಿಳುನಾಡಿನ ಸಿಎಂ ಜಯಲಲಿತಾ ವಿರುದ್ಧ ಘೋಷಣೆ ಕೂಗಿದ ಅವರು, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರಿಂಕೋರ್ಟ್ ನೀಡಿದ ಆದೇಶ ರಾಜ್ಯದ ಜನತೆ ಕೆರಳುವಂತೆ ಮಾಡಿದೆ. ಪ್ರತಿನಿತ್ಯ 15 ಕ್ಯೂಸೆಕ್ ನೀರನ್ನು 10 ದಿನಗಳವರೆಗೆ ಬಿಡಬೇಕೆನ್ನುವ ಆದೇಶ ಕೊಟ್ಟಿದೆ.[ರಕ್ಷಣಾ ವೇದಿಕೆಯಿಂದ ಪಂಜಿನ ಮೆರವಣಿಗೆ]

ಈಗಾಗಲೇ ಕರ್ನಾಟಕದ ಜನತೆ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಮೈಸೂರು ಪ್ರಾಂತ್ಯಕ್ಕೆ ಈಗ ಮತ್ತೊಂದು ಸಿಡಿಲು ಬಡಿದಂತೆ ಆಗಿದೆ. ಮುಂಗಾರು ಕೂಡ ಮುನಿಸಿಕೊಂಡು ಅಣೆಕಟ್ಟೆಗಳೆಲ್ಲ ಬಣಗುಡುತ್ತಿದೆ. ಇಂತಹ ವೇಳೆ ತಮಿಳುನಾಡಿಗೆ ನೀರು ಬಿಟ್ಟರೆ ಇಲ್ಲಿನ ಜನತೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.[ಮಂಡ್ಯದಲ್ಲಿ ತೀವ್ರಗೊಂಡ ಕಾವೇರಿ ಹೋರಾಟ]

ಹಾಸನದ ಜೀವನಾಡಿ ಹೇಮಾವತಿಯಲ್ಲಿ ಒಟ್ಟು ನೀರಿನ ಜಲಾಶಯದ ಗರಿಷ್ಠ ಮಟ್ಟ 37.103 ಇದ್ದು, ನೀರಿನ ಮಟ್ಟ 17.289 ಮಾತ್ರ ಇದೆ ಹೀಗಿರುವಾಗ ಕರ್ನಾಟಕ ರಾಜ್ಯಕ್ಕೆ ತಮಿಳುನಾಡಿನಿಂದ ಅನ್ಯಾಯವಾಗುತ್ತಿದ್ದರೂ ರಾಜ್ಯ ಸರ್ಕಾರ ಕೈಕಟ್ಟಿಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]

English summary
Karnataka Rakshana Vedike held protest rallies on Tuesday against the Supreme Court verdict on Cauvery river dispute. Karnataka Rakshana Vedike(Pravinkumar Shetty) activists led by Satish Patel were arrested by city police at Hemavathi Circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X