ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರವಣಬೆಳಗೊಳದಲ್ಲಿ ಜೈನ ಧರ್ಮ ಹೊಗಳಿದ ರಾಜ್ಯಪಾಲ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜುಲೈ 7: 2018 ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಮಹಾ ಮಸ್ತಕಾಭಿಷೇಕ ಸಮಿತಿ ಮತ್ತು ರಾಷ್ಟ್ರೀಯ ದಿಗಂಬರ ಜೈನ್ ಸಮಿತಿಯು ಶ್ರವಣಬೆಳಗೊಳದ ಚಾವುಂಡರಾಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಾತುರ್ಮಾಸ ಮಂಗಳ ಕಳಶ ಸ್ಥಾಪನಾ ಮಹೋತ್ಸವದಲ್ಲಿ ಗುಜರಾತಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ರಾಜ್ಯಪಾಲ ವಜುಭಾಯಿ ವಾಲಾ ಗಮನ ಸೆಳೆದಿದ್ದಾರೆ.

ಮೆಟ್ರೋಗೆ ಶೇ ನೂರರಷ್ಟು ಹಣಕಾಸು ನೆರವು ಕೇಂದ್ರ ನೀಡಲಿ: ವಜೂಭಾಯಿ ವಾಲಾಮೆಟ್ರೋಗೆ ಶೇ ನೂರರಷ್ಟು ಹಣಕಾಸು ನೆರವು ಕೇಂದ್ರ ನೀಡಲಿ: ವಜೂಭಾಯಿ ವಾಲಾ

Karnataka governor dance to Gujarati song

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯಪಾಲರು ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯು ಶ್ರೀಮಂತವಾಗಲು ಜೈನ ಧರ್ಮದ ಕೊಡುಗೆಯೂ ಅಪಾರವಾಗಿದೆ. ಹಾಗಾಗಿ ತ್ಯಾಗ, ಅಹಿಂಸೆ ಸತ್ಯ-ಧರ್ಮವನ್ನು ಜಗತ್ತಿಗೆ ಸಾರಿ ಹೇಳುವ ಜೈನ ಧರ್ಮವನ್ನು ಉಳಿಸಿ- ಬೆಳೆಸುವ ಅಗತ್ಯವಿದೆ ಎಂದರು.

Karnataka governor dance to Gujarati song

ಅಹಿಂಸೆ, ಸತ್ಯ, ತ್ಯಾಗ ಏನಾದರೂ ಉಳಿದಿದ್ದರೆ ಅದು ಜೈನಧರ್ಮದಲ್ಲಿ ಮಾತ್ರ ಎಂದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಮಾಡುತ್ತಿದ್ದ ಕಲಾವಿದ ಗುಂಪಿನತ್ತ ತೆರಳಿದ ರಾಜ್ಯಪಾಲ ವಜುಭಾಯಿ ವಾಲಾ ಕಲಾವಿದರೊಂದಿಗೆ ಗುಜರಾತಿ ಭಾಷೆಯ ಹಾಡಿಗೆ ನೃತ್ಯ ಮಾಡಿದರು. ಈ ದೃಶ್ಯವನ್ನು ನೋಡಿ ನೆರೆದಿದ್ದ ಸಾರ್ವಜನಿಕರು ಆಶ್ಚರ್ಯಚಕಿತರಾದರು.

English summary
Karnataka governor Vajubhai vala dance to Gujarati song in Shravanabelegola, Hassan district on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X