ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನಾಂಬೆ ದರ್ಶನ ಪಡೆದ 10 ಲಕ್ಷ ಮಂದಿ, 2 ಕೋಟಿ ಆದಾಯ!

ವರ್ಷಕ್ಕೊಮ್ಮೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ನವೆಂಬರ್ 01ರ ಕಾರ್ತಿಕ ಮಾಸದ ಬಿದಿಗೆ ದಿನದಂದು ಮಧ್ಯಾಹ್ನ ಸುಮಾರು 2.41ರ ಸುಮಾರಿಗೆ ಮುಚ್ಚಲಾಗಿದೆ.

By Mahesh
|
Google Oneindia Kannada News

ಹಾಸನ, ನವೆಂಬರ್ 01: ವರ್ಷಕ್ಕೊಮ್ಮೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ನವೆಂಬರ್ 01ರ ಕಾರ್ತಿಕ ಮಾಸದ ಬಿದಿಗೆ ದಿನದಂದು ಮಧ್ಯಾಹ್ನ ಸುಮಾರು 2.41ರ ಸುಮಾರಿಗೆ ಮುಚ್ಚಲಾಗಿದೆ.

ಕರ್ನಾಟಕದ ವೈಷ್ಣೋದೇವಿ ಎಂದೇ ಕರೆಸಿಕೊಳ್ಳುವ ಹಾಸನಾಂಬೆಯ ದರ್ಶನಕ್ಕೆ ಈ ಬಾರಿ ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ಸುಮಾರ್ 10 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಕಳೆದ ವರ್ಷ 9 ದಿನ ಮಾತ್ರ ದರ್ಶನ ಭಾಗ್ಯ ದೊರೆತರೆ ಈ ಬಾರಿ 13 ದಿನ ಅವಕಾಶ ಮಾಡಿಕೊಡಲಾಗಿತ್ತು. [ಹಾಸನಾಂಬೆ ಸ್ಥಳ ಪುರಾಣ ಓದಿ]

Hasanamba Temple Tourist Visit Hundi collection

13 ದಿನದಲ್ಲಿ ಸುಮಾರು 2 ಕೋಟಿ ರೂ.ಗಳಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಶೀಘ್ರ ದರ್ಶನಕ್ಕೆ ವ್ಯಕ್ತಿಯೊಬ್ಬರಿಗೆ 300 ರೂ. ನಿಗದಿ ಮಾಡಲಾಗಿತ್ತು.

ಪ್ರತಿ ವರ್ಷ ಆಶ್ವೀಜ ಮಾಸದ ಹುಣ್ಣಿಮೆ ನಂತರ ಬರುವ ಗುರುವಾರದಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.ಈ ಸಲ ಗುರುವಾರ(ಅಕ್ಟೋಬರ್ 20)ದಿಂದ ನವೆಂಬರ್ 1ರವರೆಗೆ ಹಾಸನಾಂಬೆ ದರ್ಶನ ಭಾಗ್ಯ ಭಕ್ತರಿಗೆ ಲಭಿಸಿತ್ತು.

Hasanamba Temple Tourist Visit Hundi collection

ಹಾಸನಾಂಬೆಯ ದರ್ಶನ ಪಡೆದ ಗಣ್ಯರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಗೃಹ ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಕರಂದ್ಲಾಜೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಸಿ.ಟಿ.ರವಿ, ನಟ ಶಿರಾಜ್‍ಕುಮಾರ್ ಮತ್ತು ಅವರ ಪತ್ನಿ ಗೀತಾ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮತ್ತು ಕುಟುಂಬದವರು ಪ್ರಮುಖರು.

English summary
People from different parts of the State have visited the Hasanamba temple, which is opened only during Deepavali festival.Reports says over 10 lakh devotees visited the temple and Rs 2 Cr amount collected from Hundi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X