ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೇಮಾವತಿ ನದಿಯ ಉಪನದಿ ಯಗಚಿ ಜಲಾಶಯ ಸಂಪೂರ್ಣ ಖಾಲಿ

By Mahesh
|
Google Oneindia Kannada News

ಹಾಸನ, ಸೆ. 26: ಆಲೂರು, ಬೇಲೂರು ಹಾಗೂ ಹಾಸನ ತಾಲ್ಲೂಕುಗಳಲ್ಲಿನ 37,000 ಎಕರೆ ಪ್ರದೇಶಕ್ಕೆ ನೀರಾವರಿಗೆ ನೀರು ಒದಗಿಸಲು ಬೇಲೂರಿನ ಬಂಟೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕ ಬ್ಯಾಡಗೆರೆ ಗ್ರಾಮದಲ್ಲಿ 2003 ರಲ್ಲಿ ನಿರ್ಮಿಸಿದ ಯಗಚಿ ಜಲಾಶಯವು ಈ ಬಾರಿ ನೀರಿಲ್ಲದೆ ಒಣಗಿದೆ.

ಅಂಕಿ-ಅಂಶಗಳನ್ನು ಪ್ರಕಾರ ಯಗಚಿ ಜಲಾಶಯದಲ್ಲಿನ ಗರಿಷ್ಠ ಒಳ ಹರಿವು 400 ಕ್ಯೂಸೆಕ್ಸ್. ಆದರೆ, ಈ ಸಾಲಿನಲ್ಲಿ ಶೇ. 5 ರಷ್ಟು ಅತ್ಯಂತ ಕಡಿಮೆ ಒಳ ಹರಿವು ಅಂದರೆ ಕೇವಲ 20 ಕ್ಯೂಸೆಕ್ಸ್ ದಾಖಲಾಗಿರುವುದು ನಿಜವಾಗಲೂ ದುರದೃಷ್ಟಕರ ದಾಖಲೆಯಾಗಿದೆ.[ಹೇಮಾವತಿ ಭಾಗದ ರೈತರಿಗೆ ಎಕರೆಗೆ 50 ಸಾವಿರ ರು ನೀಡಿ : ರೇವಣ್ಣ]

ಹೇಮಾವತಿ ಅಚ್ಚಕಟ್ಟು ಪ್ರದೇಶದ ಎಲ್ಲೆಡೆ ನೀರು ಬತ್ತಿ ಹೋಗಿದೆ. ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟದ ವಾಸ್ತವಾಂಶಗಳನ್ನು ಕಣ್ಣಾರೆ ಕಂಡು ಹಾಗೂ ಅಚ್ಚಕಟ್ಟು ಪ್ರದೇಶಗಳಲ್ಲಿನ ಪರಿಸ್ಥಿತಿಯ ನಿಜ ಸ್ಥಿತಿಯನ್ನು ಅಧ್ಯಯಿನಿಸಲು ಬೆಂಗಳೂರಿನಿಂದ ಆಗಮಿಸಿದ ಮಾಧ್ಯಮ ತಂಡ ವಾಸ್ತವದ ಚಿತ್ರಣವನ್ನು ಕಂಡು ಮರುಗಿದ್ದಾರೆ. ರೈತರ ಕಣ್ಣೀರನ್ನು ನೋಡಿ ಬಂದಿದ್ದಾರೆ.

ತುಮಕೂರು ಜಿಲ್ಲೆಗೆ ನೀರಿಲ್ಲ

ತುಮಕೂರು ಜಿಲ್ಲೆಗೆ ನೀರಿಲ್ಲ

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿ ಪಟ್ಟಣದ ಕೆರೆಗೆ ನೀರು ಹರಿಸಿ ಎರಡು ವರ್ಷಗಳೇ ಕಳೆದಿವೆ. ಮಳೆ ಇಲ್ಲದೆ ಒಣಗಿ ಹೋಗಿರುವ ಕೆರೆ ಬರಡು ಭೂಮಿಯಂತಾಗಿದೆ.

ಭತ್ತ ಬೆಳೆಯುತ್ತಿದ್ದ ರೈತರು ಕಂಗಾಲು

ಭತ್ತ ಬೆಳೆಯುತ್ತಿದ್ದ ರೈತರು ಕಂಗಾಲು

ಈ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ರೈತರು ಜೋಳ, ರಾಗಿಯಂತಹ ಅರೆ-ಮಿಶ್ರಿತ ಬೆಳೆ ಬೆಳೆಯಲೂ ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಮಳೆ ಇಲ್ಲದೆ ಇಡೀ ಅಚ್ಚಕಟ್ಟು ಪ್ರದೇಶವೇ ಒಣಗಿರುವಾಗ ನೀರಾವರಿಗೆ ನೀರು ಹಾಯಿಸುವ ಮಾತೆಲ್ಲಿ ? ಎನ್ನುತ್ತಾರೆ. ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು.

ಹೇಮಾವತಿ ವಿಭಾಗದಲ್ಲಿ ಈ ಬಾರಿ ಮಳೆ ಪ್ರಮಾಣ ಶೂನ್ಯ

ಹೇಮಾವತಿ ವಿಭಾಗದಲ್ಲಿ ಈ ಬಾರಿ ಮಳೆ ಪ್ರಮಾಣ ಶೂನ್ಯ

ಹೇಮಾವತಿ ವಿಭಾಗದಲ್ಲಿ ಈ ಬಾರಿ ಮಳೆ ಪ್ರಮಾಣ ಶೂನ್ಯ. ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯಾಪ್ತಿಯ 176 ಕೆರೆಗಳ ಪೈಕಿ 155 ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ.

ಕೆರೆಗಳಲ್ಲಿ ನೀರಿನ ಮಟ್ಟ ಶೇ. 50 ಕ್ಕೂ ಕಡಿಮೆ ಪ್ರಮಾಣ

ಕೆರೆಗಳಲ್ಲಿ ನೀರಿನ ಮಟ್ಟ ಶೇ. 50 ಕ್ಕೂ ಕಡಿಮೆ ಪ್ರಮಾಣ

ಅಲ್ಲದೆ, 21 ಕೆರೆಗಳಲ್ಲಿ ನೀರಿನ ಮಟ್ಟ ಶೇ. 50 ಕ್ಕೂ ಕಡಿಮೆ ಪ್ರಮಾಣದಲ್ಲಿದೆ. ಇಲ್ಲಿ ಲಭ್ಯವಿರುವ ನೀರನ್ನು ಬಹುಗ್ರಾಮ ಕುಡಿಯುವ ನೀರು ಪೂರೈಕೆಗೆ ಮೀಸಲಿರಿಸಲಾಗಿದೆ ಎಂದು ನಿಗಮದ ಮುಖ್ಯ ಅಭಿಯಂತರ ಕೆ. ಬಾಲಕೃಷ್ಣ ಹೇಳುತ್ತಾರೆ.

ಹೇಮಾವತಿ ನದಿ ನೀರು ಆಧರಿಸಿ ಬೆಳೆ ಬೆಳೆಯದಿರಿ

ಹೇಮಾವತಿ ನದಿ ನೀರು ಆಧರಿಸಿ ಬೆಳೆ ಬೆಳೆಯದಿರಿ

ಪ್ರಸಕ್ತ ಸಾಲಿನಲ್ಲಿ ಹೇಮಾವತಿ ನದಿ ನೀರು ಆಧರಿಸಿ ಬೆಳೆ ಬೆಳೆಯದಿರಿ ಎಂದು ರೈತರಿಗೆ ಸಲಹೆ ನೀಡಲಾಗಿದೆ. ಸ್ವಂತ ಭೂಮಿ ಇರುವ ಸಣ್ಣ ಹಿಡುವಳಿದಾರರೂ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗದೆ ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದು ಕಟು ವಾಸ್ತವ!

English summary
The situation is worst in the Hemavathy River Basin, one of the major feeder to River Cauvery. The water level in the dam has reached its minimum levels in decades and the rock bottom is visible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X