ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೋನಿ ಸೈಕ್ಲಿಂಗ್ ಸಾಹಸಕ್ಕೆ ನಮ್ಮದೊಂದು ಸಲಾಂ!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಫೆಬ್ರವರಿ 27 : ಬೈಕ್‌ನಲ್ಲಿ ನಿರಂತರವಾಗಿ 100 ಕಿ.ಮೀ ಸುತ್ತಿದರೆ ಆಯಾಸ ಕಾಡುತ್ತದೆ. ಸೈಕಲ್ ಮೂಲಕ ಒಂದೇ ದಿನದಲ್ಲಿ 400 ಕಿ.ಮೀ ಪ್ರಯಾಣ ಮಾಡಲು ಸಾಧ್ಯವೇ?. ಮಂಗಳೂರಿನ ಸೈಕ್ಲಿಸ್ಟ್ ಡೋನಿ ಮಿನೇಜಸ್ ಇಂತಹ ಸಾಹಸ ಮಾಡಿ, ದಾಖಲೆ ಮಾಡಿದ್ದಾರೆ.

ಸೈಕ್ಲಿಸ್ಟ್ ಡೋನಿ ಮಿನೇಜಸ್ 17 ಗಂಟೆಯಲ್ಲಿ ಪ್ರತಿ ಗಂಟೆಗೆ ಸರಾಸರಿ 23 ಕಿ.ಮೀ ವೇಗವನ್ನು ಕಾಪಾಡಿಕೊಂಡು ಮಂಗಳೂರು- ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ಬಂದಿದ್ದಾರೆ. ಬೆಳಗ್ಗೆ 3.45ಕ್ಕೆ ಆರಂಭವಾದ ಅವರ ಪಯಣ ರಾತ್ರಿ 11.50ಕ್ಕೆ ಪೂರ್ಣಗೊಂಡಾಗ ಅವರು 405.9 ಕಿ.ಮೀ. ಸಂಚರಿಸಿದ್ದರು. [8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್]

2016ರ ನವೆಂಬರ್ 5 ರಂದು ಗೋವಾದಿಂದ ಪುಣೆಯವರೆಗೆ ಸೈಕ್ಲಿಂಗ್ ಸ್ಪರ್ಧೆ ನಡೆಯಲಿದ್ದು, ಅದರಲ್ಲಿ ಡೋನಿ ಭಾಗವಹಿಸಲಿದ್ದಾರೆ. 32 ಗಂಟೆಗಳಲ್ಲಿ ಸರಾಸರಿ 643 ಕಿ.ಮೀ ಸಂಚಾರ ನಡೆಸಿ, ಜಯಗಳಿಸಿದರೆ ಅಮೆರಿಕದಲ್ಲಿ ನಡೆಯುವ ಸೈಕ್ಲಿಂಗ್ ಸ್ಪರ್ಧೆಗೆ ಅವರು ಆಯ್ಕೆಯಾಗಲಿದ್ದಾರೆ, ಅದಕ್ಕಾಗಿ ತಯಾರಿ ಆರಂಭಿಸಿದ್ದಾರೆ Cycling king ಡೋನಿ. [ಭಾರತದ ಹೀರೋ ಸೈಕಲ್ ಉದ್ಯಮ ಪಿತಾಮಹ ಇನ್ನಿಲ್ಲ]

ದುಬೈನಲ್ಲಿ 21 ವರ್ಷಗಳ ಕಾಲವಿದ್ದ ಡೋನಿ ನಂತರ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಮಂಗಳೂರಿಗೆ ಬಂದಾಗ ಅವರು 98 ಕೆಜಿ ಇದ್ದರು. ಸೈಕ್ಲಿಂಗ್ ಹವ್ಯಾಸ ಮೈಗೂಡಿಸಿಕೊಂಡ ಬಳಿಕ ಅವರ ದೇಹದ ತೂಕ ಕಡಿಮೆಯಾಗಿದೆ. 'ಸೈಕ್ಲಿಂಗ್ ನಮ್ಮನ್ನು ಧನಾತ್ಮಕ ಕೆಲಸಗಾರ ಮತ್ತು ಧನಾತ್ಮಕ ಚಿಂತನಾಕಾರರನ್ನಾಗಿ ಮಾಡುತ್ತದೆ. ಇದು ನಮ್ಮನ್ನು ದುಷ್ಟ ಚಟಗಳಿಂದ ದೂರವಿಡಲು ಸಹಕಾರಿಯಾಗುತ್ತದೆ' ಎನ್ನುತ್ತಾರೆ ಅವರು, ಡೋನಿ ಸಹಾಸದ ಕೆಲವು ಮಾಹಿತಿಗಳು ಚಿತ್ರಗಳಲ್ಲಿವೆ....

ಒಂದು ದಿನದಲ್ಲಿ 405 ಕಿ.ಮೀ ಸಂಚಾರ

ಒಂದು ದಿನದಲ್ಲಿ 405 ಕಿ.ಮೀ ಸಂಚಾರ

ಮಂಗಳೂರಿನ ಸೈಕ್ಲಿಸ್ಟ್ ಡೋನಿ ಮಿನೇಜಸ್ ಅವರು 17 ಗಂಟೆಯಲ್ಲಿ ಪ್ರತಿ ಗಂಟೆಗೆ ಸರಾಸರಿ 23 ಕಿ.ಮೀ ವೇಗವನ್ನು ಕಾಪಾಡಿಕೊಂಡು 405.9 ಕಿ.ಮೀ. ಸಂಚಾರ ನಡೆಸಿದ್ದಾರೆ. ಮಂಗಳೂರಿನಲ್ಲಿ ಇಂತಹ ಸಾಧನೆ ಮಾಡಿರುವ ಏಕೈಕ ವ್ಯಕ್ತಿ ಡೋನಿ.

ಸೈಕಲ್‌ಗೆ ಲೈಟ್ ಕಟ್ಟಿ ಹೊರಟರು

ಸೈಕಲ್‌ಗೆ ಲೈಟ್ ಕಟ್ಟಿ ಹೊರಟರು

ಫೆ.21ರ ತಡರಾತ್ರಿ 12 ಗಂಟೆ ಮೂರು ನಿಮಿಷಕ್ಕೆ ಸೈಕಲ್ಲಿಗೆ ಲೈಟ್ ಕಟ್ಟಿಕೊಂಡು ರಸ್ತೆಗಿಳಿದ ಡೋನಿ ಅವರು ಸೈಕಲ್ ತುಳಿಯುತ್ತಾ ಕುಂದಾಪುರಕ್ಕೆ ಬೆಳಗ್ಗೆ 3.45 ಕ್ಕೆ ತಲುಪಿದ್ದಾರೆ. ಅಲ್ಲಿಂದ ಸಂತೆ ಕಟ್ಟೆಗೆ ಬಂದು ಮತ್ತೆ ಕುಂದಾಪುರಕ್ಕೆ ತೆರಳಿದ್ದಾರೆ.

ಯೋಜನೆ ತಯಾರು ಮಾಡಿದ್ದರು

ಯೋಜನೆ ತಯಾರು ಮಾಡಿದ್ದರು

ತಮ್ಮ 400 ಕಿ.ಮೀ ಪ್ರಯಾಣಕ್ಕೆ ಮೊದಲೇ ಅವರು ಯೋಜನೆ ಮಾಡಿಕೊಂಡಿದ್ದರು. ಡೋನಿ ಎರ್ಮಾಳ್ ವರೆಗೂ ಬಂದು ಅಲ್ಲಿಂದ ಕಾಪುವಿಗೆ ಹೋಗಿದ್ದಾರೆ. ಮತ್ತೆ ಕಾಪುವಿನಿಂದ ಹೊರಟು ಒಂದೇ ವೇಗದಲ್ಲಿ ಮಂಗಳೂರಿನ ಮೆರಿಹಿಲ್‌ನಲ್ಲಿರುವ ತಮ್ಮ ಮನೆಗೆ ಬಂದು ಊಟ ಮುಗಿಸಿ ತುಸು ವಿಶ್ರಾಂತಿ ಪಡೆದು, ಸಂಜೆ 4.10 ಕ್ಕೆ ಎರಡನೇ ಸವಾರಿ ಶುರು ಮಾಡಿದ್ದಾರೆ. ಕಟಪಾಡಿ ವರೆಗೆ ಹೋಗಿ ಮತ್ತೆ ಎರ್ಮಾಳಿಗೆ ಬಂದು, ರಾತ್ರಿ 9.20 ಕ್ಕೆ ತಮ್ಮ ಅಭಿಯಾನದ ಕೊನೆಯ ಚರಣ ಆರಂಭಿಸಿದರು. ಸುಮಾರು 11.50ಕ್ಕೆ ಅವರ ಸೈಕ್ಲಿಂಗ್ ಯಾನ ಪೂರ್ಣಗೊಂಡಾಗ 405.9 ಕೀ.ಮೀ ಪೂರ್ಣಗೊಂಡಿತ್ತು.

ಹೆದ್ದಾರಿಯಲ್ಲಿಯೇ ಪ್ರಯಾಣ

ಹೆದ್ದಾರಿಯಲ್ಲಿಯೇ ಪ್ರಯಾಣ

ಸುದೀರ್ಘ ಅವಧಿಯಲ್ಲಿ ಸೈಕಲ್ ತುಳಿಯುವ ಕಾರಣ ಹೆದ್ದಾರಿಯನ್ನೇ ಅವರು ಆಯ್ಕೆ ಮಾಡಿಕೊಂಡಿದ್ದರು. ಇಲ್ಲವಾದರೆ ವೇಗ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಅವರು ಹೀಗೆ ಮಾಡಿದ್ದರು. ಏಕಾಂಗಿಯಾಗಿ ಅದನ್ನು ಸಾಧಿಸಿದಕ್ಕೆ ಸಂತಸವಾಗುತ್ತಿದೆ ಎನ್ನುತ್ತಾರೆ ಡೋನಿ.

ಮತ್ತೊಂದು ಸಾಧನೆಗೆ ತಯಾರಿ

ಮತ್ತೊಂದು ಸಾಧನೆಗೆ ತಯಾರಿ

2016ರ ನವೆಂಬರ್ 5 ರಂದು ಗೋವಾದಿಂದ ಪುಣೆಯವರೆಗೆ ಸೈಕ್ಲಿಂಗ್ ಸ್ಪರ್ಧೆ ನಡೆಯಲಿದ್ದು, ಅದರಲ್ಲಿ ಡೋನಿ ಪಾಲ್ಗೊಳ್ಳಲಿದ್ದಾರೆ. 32 ಗಂಟೆಗಳಲ್ಲಿ ಸರಾಸರಿ 643 ಕಿ.ಮೀ ಸಂಚಾರ ನಡೆಸಿ, ಜಯಗಳಿಸಿದರೆ ಅಮೆರಿಕದಲ್ಲಿ ನಡೆಯುವ ಸೈಕ್ಲಿಂಗ್ ಸ್ಪರ್ಧೆಗೆ ಅವರು ಆಯ್ಕೆಯಾಗಲಿದ್ದಾರೆ, ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.

English summary
Mangaluru cyclist Doni Menezes completed the 400 km brevet in 17 hours. Doni Menezes journey began from Mangaluru. Doni Menezes preparing for 643 km race on November 2016, If he completes, he will automatically qualify for the cycling race in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X