ದೆಹಲಿಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ!

Posted By:
Subscribe to Oneindia Kannada

ಗುರ್ ಗಾವ್, ಮೇ 15: ಹರ್ಯಾಣದಲ್ಲಿ ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಆಕೆಯನ್ನು ದುಷ್ಕರ್ಮಿಗಳು ಕ್ರೂರವಾಗಿ ಕೊಂದ ಘಟನೆಯಿಂದ ತಲ್ಲಣಗೊಂಡಿರುವ ದೇಶದ ಪ್ರಜ್ಞಾವಂತ ಜನತೆಯು ಆ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಅಂಥದ್ದೇ ಪ್ರಕರಣ ಗುರ್ ಗಾಂವ್ ನಿಂದ ವರದಿಯಾಗಿದೆ.

ಇಲ್ಲಿ, 22 ವರ್ಷದ ಯುವತಿಯೊಬ್ಬಳನ್ನು ಆಕೆಯ ಮನೆಯ ಬಳಿಯಿಂದಲೇ ಕಾರೊಂದರಲ್ಲಿ ಅಪಹರಿಸಿ, ಚಲಿಸುತ್ತಿದ್ದ ಆ ಕಾರಿನಲ್ಲೇ ಆಕೆಯ ಮೇಲೆ ಸರದಿ ಪ್ರಕಾರ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯನ್ನು ದೆಹಲಿಯ ನಡು ರಸ್ತೆ ಮೇಲೆ ಬಿಸಾಕಿ ಪರಾರಿಯಾಗಿದ್ದಾರೆ. ಈ ಘಟನೆ, ಇಡೀ ಜಗತ್ತು ವಿಶ್ವ ಅಮ್ಮಂದಿರ ದಿನಾಚರಣೆಯಲ್ಲಿ ಮುಳುಗಿದ್ದಾಗಲೇ (ಮೇ 14) ನಡೆದಿದೆ.[ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಅತ್ಯಾಚಾರ ಬರ್ಬರ ಕೊಲೆ]

22-Year-Old Woman Gang-Raped In Moving Car In Gurgaon, Thrown On Road In Delhi

ದೆಹಲಿಯ ಕನ್ನಾಟ್ ಪ್ಲೇಸ್ ನಿಂದ ಹೊರಟಿದ್ದ ಈ ಯುವತಿ, ಗುರ್ ಗಾಂವ್ ನ ಸೆಕ್ಟರ್ 17ರಲ್ಲಿರುವ ತನ್ನ ನಿವಾಸಕ್ಕೆ ತೆರಳುವಾಗ ಸರಿಸುಮಾರು ಮಧ್ಯರಾತ್ರಿ 2 ಗಂಟೆಯಾಗಿದೆ. ತನ್ನ ಮನೆಯಿರುವ ಪ್ರದೇಶ ತಲುಪಿದ ಆಕೆ ನಡೆದುಕೊಂಡು ತನ್ನ ಮನೆಯ ಬಳಿಗೆ ಬರುತ್ತಿದ್ದಂತೆ ಆಕೆಯನ್ನು ದೂರದಲ್ಲೇ ಗಮನಿಸಿದ 3 ಯುವಕರುಳ್ಳ ದುಷ್ಟರ ಗುಂಪೊಂದು ಆಕೆಯನ್ನು ಸ್ವಿಫ್ಟ್ ಕಾರಿನಲ್ಲಿ ಅಪಹರಣ ಮಾಡಿದೆ.

ಅಪಹರಣ ಆದ ಜಾಗದಿಂದ ದೆಹಲಿ ಕಡೆಗೆ ಸುಮಾರು 20 ಕಿ.ಮೀ. ದೂರದಲ್ಲಿರುವ ನಜಾಫ್ ಗಢದ ಕಡೆಗೆ ಕಾರು ಓಡಿದ್ದು, ಹಾಗೆ ಚಲಿಸುತ್ತಿರುವ ಕಾರಿನಲ್ಲೇ ಆ ಕಾಮುಕರು ಒಬ್ಬರ ನಂತರ ಒಬ್ಬರಂತೆ ಆ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅವರ ಕಾಮ ದಾಹ ತೀರುವಷ್ಟರಲ್ಲಿ ಕಾರು ದೆಹಲಿ ಗಡಿ ಪ್ರವೇಶಿಸಿದೆ.[ಆ ದುಷ್ಟರನ್ನು ಜೀವಂತವಾಗಿ ಸುಡಬೇಕು: ನಿರ್ಭಯಾಳ ಕೊನೆ ಹೇಳಿಕೆ]

ಅಷ್ಟರಲ್ಲಿ ತಮ್ಮ ಕೆಲಸ ಮುಗಿದಿದ್ದರಿಂದ, ಆ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ಕಾರಿನಿಂದ ಹೊರನೂಕಿ ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ.

ಆ ಅರೆ ಪ್ರಜ್ಞಾವಸ್ಥೆಯಲ್ಲೇ ಕೊಂಚ ಎದ್ದು ಕುಳಿತು ಆಕೆ ಹೋಗಿ ಬರುವ ವಾಹನಗಳಿಗೆ ಕೈ ತೋರಿಸಿ ಸಹಾಯ ಕೋರಿದ್ದು, ಹಿಂದೆ ಬರುತ್ತಿದ್ದ ವಾಹನಗಳ ಹತ್ತಾರು ಜನರು ಆಕೆಯನ್ನು ತಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

English summary
A 22-year-old woman was allegedly kidnapped and gang-raped in a moving car by three men in Gurgaon and then thrown on a road in neighbouring Delhi early on Sunday.
Please Wait while comments are loading...