ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕರ್ನಾಟಕಕ್ಕೆ ಬಂದ ಪ್ರಧಾನಿಗೆ ಬರ ಪರಿಸ್ಥಿತಿ ಕಾಣಲಿಲ್ಲವೇ'?

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ.31: ದಾವಣಗೆರೆ ಪ್ರಧಾನಿ ಮೋದಿ ಬಂದಿದ್ದಾಗ ಕಳಸಾ-ಬಂಡೂರಿ ಸಮಸ್ಯೆ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡಲಿಲ್ಲ. ಜನರ ಆಶೀರ್ವಾದ ಕೇಳಲು ದಾವಣಗೆರೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಯಾಕೆ ಭೇಟಿ ನೀಡಲಿಲ್ಲ ಎಂದು ಉಗ್ರಪ್ಪ ಪ್ರಶ್ನೆ ಮಾಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳಸಾ-ಬಂಡೂರಿ ಸಮಸ್ಯೆಯನ್ನು ಯಡಿಯೂರಪ್ಪ ಮುಖ್ಯಮಂತ್ರಿಯಿದ್ದಾಗ ಕೇವಲ 24 ತಾಸುಗಳಲ್ಲಿ ಬಗೆಹರಿಸುವುದಾಗಿ ಹೇಳಿದ್ದರು. ಆದರೆ ಅದನ್ನು ಸಂಪೂರ್ಣವಾಗಿ ಮರೆತರು. ಈಗ ಮತ್ತೆ ಜನರ ಬಳಿ ಮತ ಕೇಳಲು ಬಂದಿದ್ದಾರೆ ಎಂದು ವಾಗ್ದಾಳಿ ಮಾಡಿದರು.[ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ ಬಸವರಾಜ ಹೊರಟ್ಟಿ]

hubballi

ಮುಖ್ಯಮಂತ್ರಿ ಸಿದ್ಧರಾಮಯ್ಯ ಜನಪರ ಕಾರ್ಯಗಳಿಂದ ಶಿಕ್ಷಕರು ಸಂತೃಪ್ತಗೊಂಡಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಟಿ. ಈಶ್ವರ ಪದವೀಧರರ ಕ್ಷೇತ್ರದಲ್ಲಿ ಜಯಗಳಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ವಿಚಾರವಂತ ಮತ್ತು ಬುದ್ಧಿಜೀವಿಗಳೆಂದ ಕರೆಯಿಸಿಕೊಳ್ಳುವ ಶಿಕ್ಷಕರು ಪಶ್ಚಿಮ ಕ್ಷೇತ್ರದ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಈಶ್ವರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಲಿದ್ದಾರೆ ಎಂದು ಹೇಳಿದರು.[ಯಡಿಯೂರಪ್ಪ ಕರ್ನಾಟಕದ ಮುಂದಿನ ಸಿಎಂ: ವಿ ಸೋಮಣ್ಣ]

ಈಗಾಗಲೇ ನಾನು ಹಾವೇರಿ, ಗದಗ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೆಡೆ ಟಿ. ಈಶ್ವರ ಪರ ಒಲುವು ಕಂಡು ಬರುತ್ತಿದೆ. ಟಿ. ಪಾರ್ ಟೀಚರ್ ಎಂಬಂತೆ ಈಶ್ವರ ಅವರನ್ನು ಶಿಕ್ಷಕರು ಕೈಬಿಡುವುದಿಲ್ಲ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಶಿಕ್ಷಕರನ್ನು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿ ಉಗ್ರಪ್ಪ, ಎರಡೂ ಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಆಧಾರವಿಲ್ಲ ಎಂದು ಟೀಕಿಸಿದರು.[ಅಂಬೇಡ್ಕರ್ ಫೋಟೊ ಎಸೆದ ಬಿಎಸ್ ವೈ ಈಗ ರಾಜ್ಯಾಧ್ಯಕ್ಷ]

ಜೆಡಿಎಸ್ ನ ಬಸವರಾಜ ಹೊರಟ್ಟಿ 36 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ತಾಮ್ಮ ಸಾಧನೆಯನ್ನು ತಾವೇ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರು ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಕರ ವರ್ಗಾವಣೆ ನೀತಿಯನ್ನು ಬದಲಾವಣೆ ಮಾಡಲಿಲ್ಲ. ಶಿಕ್ಷಕರಿಗೆ ಜ್ಯೇಷ್ಠತೆ ಆಧರಿಸಿ ಮುಂಬಡ್ತಿ ನೀಡಲಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಕರ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದರು.

English summary
Hubballi: MLC V S Ugrappa claimed that NDA government has completely neglected Karnataka drought situation. This time Congress candidate T. Ishwar will win the Legislative Council from the Karnataka West Teachers' constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X