ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

36 ವರ್ಷ ಶಾಸಕರಾಗಿ ಹೊರಟ್ಟಿ ಶಿಕ್ಷಕರಿಗೆ ಏನು ಮಾಡಿದ್ದಾರೆ ?

|
Google Oneindia Kannada News

ಹುಬ್ಬಳ್ಳಿ, ಮೇ. 6: ಮಾಜಿ ಸಚಿವ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಕಳೆದ 36 ವರ್ಷಗಳಿಂದ ಪಧವೀಧರ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಯಾವ ಶಿಕ್ಷಕರಿಗೂ ಉಪಯೋಗವಾಗಿಲ್ಲ. ಅವರು ಶಿಕ್ಷಕರಿಗೆ ನೀಡಿದ ಕೊಡುಗೆಯಾದರೂ ಏನು ಎಂದು ಕೈಗಾರಿಕಾ ನಿಗಮದ ಅಧ್ಯಕ್ಷ ಮತ್ತು ಕರ್ನಾಟಕ ಬೋಧಕ ಬೋಧಕೇತರ ಮಹಾಸಭೆಯ ರಾಜ್ಯಾಧ್ಯಕ್ಷ ಟಿ. ಈಶ್ವರ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜೂನ್-ಜುಲೈ ತಿಂಗಳಿನಲ್ಲಿ ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ತಮಗೆ ಟಿಕೆಟ್ ನೀಡಿದೆ ಎಂದು ಹೇಳಿದರು.[ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]

hubballi

ಜೆಪಿ ಅಭ್ಯರ್ಥಿ ಮಾ.ನಾಗರಾಜ ಮೊದಲನೇ ಸಲ ಸ್ಪರ್ಧೆ ಮಾಡುತ್ತಿದ್ದು ಅವರ ಗೆಲುವು ಅಸಾಧ್ಯ. ಅಲ್ಲದೇ ಇಡೀ ಶಿಕ್ಷಕ ಸಮುದಾಯ ತಮ್ಮ ಹಿಂದಿದೆ. ಗದಗ, ಹಾವೇರಿ, ಧಾರವಾಡ ಮತ್ತು ಕಾರವಾಡ ಜಿಲ್ಲೆಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಶಿಕ್ಷಕ ಮತದಾರರು ಈ ಬಾರಿ ಹೊರಟ್ಟಿಯವರನ್ನು ಸೋಲಿಸಿ ಬುದ್ಧಿ ಕಲಿಸಲಿದ್ದಾರೆ ಎಂದು ಹೇಳಿದರು.[ಕುಡಿಯಾಕ್ ನೀರಿಲ್ಲ ಮುಂದೆ ಕತಿ ಹೆಂಗಪ್ಪಾ]

ಈ ಮೊದಲು ಕಾಂಗ್ರೆಸ್ ಬಸವರಾಜ ಗುರಿಕಾರ ಅವರಿಗೆ ಟಿಕೆಟ್ ನೀಡಿತ್ತೆನ್ನಲಾಗಿದ್ದು, ಈ ಬಗ್ಗೆ ಪತ್ರಕರ್ತರು ಟಿ.ಈಶ್ವರ ಅವರಿಗೆ ಕೇಳಿದಾಗ ಅವರು ಸಹ ನನಗೆ ನಮಗೆ ಬೆಂಬಲ ಸೂಚಿಸಿದ್ದಾರೆ ಎಂದರು. ಈ ಮೊದಲು ನಾನು ಒಮ್ಮೆ ಸ್ಪರ್ಧೆ ಮಾಡಿ ಸೋತಿದ್ದೇನೆ. ಈ ಬಾರಿ ಮತದಾರರು ನನ್ನನ್ನು ಗೆಲ್ಲಿಸುತ್ತಾರೆ ಎಂದರು. ಹು-ಧಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ವಿ.ಮಾಡೋಳ್ಳಿ ಮತ್ತಿತರರು ಹಾಜರಿದ್ದರು.

ಟಿ. ಈಶ್ವರ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರುವುದಕ್ಕೆ ಅವರ ಅಭಿಮಾನಿಗಳು ಲ್ಯಾಮಿಂಗ್ಟನ್ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದರು.

English summary
Hubballi: 'I am participating for the upcoming graduate and teacher constituency election' T Ishwar Chairman Karnataka State forest Industries Corporations Ltd Government of karnataka & KPCC ST Cell State President said on May 6, at Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X