ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

|
Google Oneindia Kannada News

ಹುಬ್ಬಳ್ಳಿ, ಮಾ.9 : ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಸ್ಪೈಸ್‌ಜೆಟ್ ವಿಮಾನ ಲ್ಯಾಂಡ್‌ ಆಗುವ ವೇಳೆ ಅಪಘಾತ ಸಂಭವಿಸಿದ್ದು, 77 ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ವಿಮಾನದಲ್ಲಿ ಸಚಿವ ರೋಷನ್ ಬೇಗ್ ಮತ್ತು ಧಾರವಾಡ ಹೈಕೋರ್ಟ್‌ ಪೀಠದ ನಾಲ್ವರು ನ್ಯಾಯಮೂರ್ತಿಗಳಿದ್ದರು.

ಭಾನುವಾರ ಸಂಜೆ 6.30ರ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ವಿಮಾನ ಲ್ಯಾಂಡಿಂಗ್‌ ವೇಳೆ, ಟೈರ್‌ ಸ್ಫೋಟಗೊಂಡು ರನ್‌ವೇಯಿಂದ ಜಾರಿ ಪಕ್ಕದ ಸಿಗ್ನಲ್ ದೀಪಕ್ಕೆ ಡಿಕ್ಕಿ ಹೊಡೆದು, ರನ್‌ವೇ ಪಕ್ಕದ ಮಣ್ಣಿನಲ್ಲಿ ಸಿಕ್ಕಿಕೊಂಡಿತು. ಅಪಘಾತದಿಂದ ವಿಮಾನದ ಎಡಭಾಗದ ರೆಕ್ಕೆ ಜಖಂಗೊಂಡಿದ್ದು ಬಿಟ್ಟರೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ. [ಹುಬ್ಬಳ್ಳಿಯಿಂದ ಮತ್ತೆ ಹಾರಾಟ ಆರಂಭಿಸಿದ ಸ್ಪೈಸ್ ಜೆಟ್]

roshan baig

ವಿಮಾನ ನಿಲ್ದಾಣದಲ್ಲಿ ಮಳೆ ಸುರಿಯುತ್ತಿದ್ದ ಕಾರಣ ಲ್ಯಾಂಡಿಂಗ್ ಮಾಡುವುದು ಕಷ್ಟ ಎಂಬುದನ್ನು ಅರಿತ ಪೈಲಟ್ ಸಂಜಯ ಸಕ್ಸೇನಾ ಹಾಗೂ ಕೋ ಪೈಲಟ್ ಕಾರ್ತಿಕ್ ಸ್ವಾಮಿ ಈ ಕುರಿತು ವಿಮಾನದಲ್ಲಿದ್ದ ಪ್ರಯಾಣಿರಿಗೆ ಮಾಹಿತಿ ನೀಡಿದ್ದರು. ನಂತರ ಲ್ಯಾಂಡ್‌ ಮಾಡುವ ವೇಳೆ ಟೈರ್ ಸ್ಫೋಟಗೊಂಡಿದ್ದು, ವಿಮಾನ ರನ್‌ವೇಯಿಂದ ಪಕ್ಕಕ್ಕೆ ಸರಿದಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. [ಹುಬ್ಬಳ್ಳಿ ನಿಲ್ದಾಣದಲ್ಲಿನ ಕಾಮಗಾರಿ ಏನು?]

ವಿಮಾನ ರನ್‌ವೇಯಿಂದ ಜಾರಿ ಟೈರ್ ಸ್ಫೋಟಗೊಂಡ ತಕ್ಷಣ ನಿಲ್ದಾಣದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಟೈಯರ್‌ಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದರು. ಮಳೆಯೂ ಸುರಿಯುತ್ತಿದ್ದ ಕಾರಣ ಬೆಂಕಿ ತಕ್ಷಣ ಆರಿ ಹೋಗಿದೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿತು. ಪ್ರಯಾಣಿಕರನ್ನು ತುರ್ತು ದ್ವಾರದ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

hubballi air port

ವಿಮಾನ ಪ್ರಯಾಣ ರದ್ದು : ಬೆಂಗಳೂರಿನಿಂದ ಬಂದ ವಿಮಾನ ರಾತ್ರಿ 7.40ಕ್ಕೆ ಹುಬ್ಬಳ್ಳಿಯಿಂದ ವಾಪಸ್ ಹೊರಡಬೇಕಿತ್ತು. ಆದರೆ, ಅಪಘಾತದ ಹಿನ್ನೆಲೆಯಲ್ಲಿ ಪ್ರಯಾಣವನ್ನು ರದ್ದುಪಡಿಸಲಾಯಿತು. ವಿಮಾನದಲ್ಲಿನ ತಾಂತ್ರಿಕ ದೋಷ ಘಟನೆಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದ್ದು, ಸೋಮವಾರ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

passengers

ಯಾವುದೇ ವಿಮಾನ ಹಾರಾಟವಿಲ್ಲ : ಅಪಘಾತದ ಬಗ್ಗೆ ಪರಿಶೀಲನೆ ನಡೆಸಲು ನಾಗರಿಕ ವಿಮಾನಯಾನ ಇಲಾಖೆಯ ಮಹಾನಿರ್ದೇಶಕರ ನೇತೃತ್ವದ ತಂಡ ಸೋಮವಾರ ಹುಬ್ಬಳ್ಳಿಗೆ ಆಗಮಿಸಲಿದೆ. ತಂಡ ತನ್ನ ವರದಿ ನೀಡಿ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿಸುವ ತನಕ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನ ಹಾರಾಟವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಚೋಳನ ಹೇಳಿದ್ದಾರೆ.

ಸಚಿವರಿದ್ದರು : ಹುಬ್ಬಳ್ಳಿಗೆ ಬಂದಿಳಿದ ವಿಮಾನದಲ್ಲಿ ವಾರ್ತಾ ಸಚಿವ ಆರ್. ರೋಷನ್ ಬೇಗ್, ಧಾರವಾಡ ಹೈಕೋರ್ಟ್ ಪೀಠದ 4 ನ್ಯಾಯಮೂರ್ತಿಗಳು, ನಾಲ್ವರು ಮಕ್ಕಳು ಸೇರಿದಂತೆ 77 ಪ್ರಯಾಣಿಕರಿದ್ದರು.

ಕಳೆದ ವಾರ ಸೇವೆ ಆರಂಭವಾಗಿತ್ತು : ಸುಮಾರು ಆರು ತಿಂಗಳ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನಯಾನ ಸೇವೆಯನ್ನು ಕಳೆದ ವಾರ ಪುನಃ ಆರಂಭಿಸಲಾಗಿತ್ತು. ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯದ ಹಿನ್ನಲೆಯಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಸ್ಪೈಸ್‌ಜೆಟ್ ಹುಬ್ಬಳ್ಳಿ-ಬೆಂಗಳೂರು ಮತ್ತು ಮುಂಬೈ ಹುಬ್ಬಳ್ಳಿ ನಡುವೆ ವಿಮಾನಯಾನ ಸೇವೆಯನ್ನು ಈ ನಿಲ್ದಾಣದಿಂದ ನೀಡುತ್ತಿದೆ.

English summary
A Spice-jet plane from Bengaluru with 77 passengers on-board on Sunday skidded off the runway after landing at at Hubballi airport in Karnataka due to heavy rain. All passengers and 4 crew member are safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X