ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಿಂದ ಮತ್ತೆ ಹಾರಾಟ ಆರಂಭಿಸಿದ ಸ್ಪೈಸ್ ಜೆಟ್

|
Google Oneindia Kannada News

ಹುಬ್ಬಳ್ಳಿ, ಮಾ.2 : ಸುಮಾರು ಆರು ತಿಂಗಳ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನಯಾನ ಸೇವೆಯನ್ನು ಪುನಃ ಆರಂಭಿಸಿದೆ. ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯದ ಹಿನ್ನಲೆಯಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿತ್ತು.

ಭಾನುವಾರ ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ ಜೆಟ್ ಸೇವೆಗೆ ಚಾಲನೆ ನೀಡಿದರು. ಇದರಿಂದಾಗಿ ಸುಮಾರು ಆರು ತಿಂಗಳ ಬಳಿಕ ಹುಬ್ಬಳ್ಳಿಯಲ್ಲಿ ವಿಮಾನ ಹಾರಾಟ ಪುನಃ ಆರಂಭವಾದಂತಾಗಿದೆ. [ಹುಬ್ಬಳ್ಳಿಯಲ್ಲಿ ಮತ್ತೆ ಸ್ಪೈಸ್ ಜೆಟ್ ಹಾರಾಟ]

Hubballi

ಸ್ಪೈಸ್ ಜೆಟ್‌ನ ವಿಮಾನ ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿತು. ನಂತರ ಬೆಂಗಳೂರಿಗೆ ವಾಪಸ್ ತೆರಳಿತು. ಮಧ್ಯಾಹ್ನ 2.30ಕ್ಕೆ ಮುಂಬೈನಿಂದ ವಿಮಾನ ಹುಬ್ಬಳ್ಳಿಗೆ ಆಗಮಿಸಿತು. ಮಧ್ಯಾಹ್ನ 3 ಗಂಟೆಗೆ ಮುಂಬೈಗೆ ವಾಪಸ್ ತೆರಳಿತು. [ಹುಬ್ಬಳ್ಳಿ ನಿಲ್ದಾಣದಲ್ಲಿನ ಕಾಮಗಾರಿ ಏನು?]

ಬೆಳಗಾವಿಗೆ ಪ್ರಯಾಣಿಸಬೇಕಿತ್ತು : ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಸ್ಥಗಿತಗೊಂಡ ಕಾರಣ ಜನರು ಮುಂಬೈ ಮತ್ತು ಬೆಂಗಳೂರಿಗೆ ತೆರಳಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕಿತ್ತು. ಆದರೆ, ಈಗ ಪುನಃ ಸ್ಪೈಸ್ ಜೆಟ್ ಹಾರಾಟ ಆರಂಭಿಸಿದೆ.

Hubballi spicejet

ಸ್ಪೈಸ್ ಜೆಟ್ ಮೊದಲಿನಂತೆಯೇ ಬೆಂಗಳೂರು ಮತ್ತು ಮುಂಬೈಗೆ ತನ್ನ ಸೇವೆಯನ್ನು ಪ್ರತಿದಿನ ಒದಗಿಸಲಿದೆ. ಬೆಂಗಳೂರು-ಹುಬ್ಬಳ್ಳಿ ಮಾರ್ಗಕ್ಕೆ 2,931 ಮತ್ತು ಹುಬ್ಬಳ್ಳಿ-ಮುಂಬೈ ಮಾರ್ಗಕ್ಕೆ 3,061 ರೂ. ಪ್ರಯಾಣ ದರವಿರುತ್ತದೆ.

ಹುಬ್ಬಳ್ಳಿಯ ವಿಮಾನಯಾನ ಸೇವೆಗಾಗಿ ಸ್ಪೈಸ್ ಜೆಟ್ 78 ಸೀಟುಗಳ 'Bombardier Q-400' ವಿಮಾನವನ್ನು ಬಳಸಲಿದೆ. ಟಿಕೆಟ್‌ ಬುಕ್ಕಿಂಗ್‌ಗಾಗಿ www.spicejet.com. ವೆಬ್‌ಸೈಟ್ ನೋಡಬಹುದಾಗಿದೆ.

Spice Jet

ಏನಿದು ಕಾಮಗಾರಿ : ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ದರ್ಜೆ ವಿಮಾನ ನಿಲ್ದಾಣವಾಗಿ ಮೇಲ್ದರ್ಜೇಗೇರಿಸುವ ಕಾಮಗಾರಿ ನಡೆಯುತ್ತಿತ್ತು. ಸುಮಾರು 60 ಕೋಟಿ ವೆಚ್ಚದಲ್ಲಿ ನಿಲ್ದಾಣದಲ್ಲಿದ್ದ 4,500 ಅಡಿ ಉದ್ದರ ರನ್ ವೇಯನ್ನು 7,500 ಅಡಿಗೆ ವಿಸ್ತರಣೆ ಮಾಡಲಾಗಿದೆ.

English summary
Spice Jet has resumed its flight services from Hubballi ( Karnataka) from March 1, Sunday. Earlier the services was stopped from August 2014. Union Minister Ananth Kumar flagged of flight services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X