ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡದಲ್ಲಿ ಇಂದು ಯೋಧ ಹಸನ್ ಸಾಬ ಅಂತ್ಯಕ್ರಿಯೆ

|
Google Oneindia Kannada News

ಧಾರವಾಡ, ಆಗಸ್ಟ್ 01 : ಕಾಶ್ಮೀರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಯೋಧ ಹಸನ್ ಸಾಬ ಖುದಾವಂದ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. ಯೋಧನ ಸಾವಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಸಂತಾಪ ಸೂಚಿಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೈದಾಪುರ ಗ್ರಾಮದ ಬಿಎಸ್ಎಫ್ ಯೋಧ ಹಸನ್ ಸಾಬ ಖುದಾವಂದ (24) ಕಾಶ್ಮೀರದಲ್ಲಿ ವೀರಮರಣವನ್ನಪ್ಪಿದ್ದಾರೆ. ಯೋಧನ ಪಾರ್ಥೀವ ಶರೀರ ಇಂದು ಧಾರವಾಡಕ್ಕೆ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.[ಶಿವಮೊಗ್ಗದಲ್ಲಿ ಯೋಧ ಉಮೇಶ ಅಂತ್ಯ ಸಂಸ್ಕಾರ]

Hasansab Khudavand

ಯೋಧ ಹಸನ್ ಸಾಬ ಖುದಾವಂದ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಶಾಸಕ ಸಿ.ಎಸ್.ಶಿವಳ್ಳಿ, ಶಾಸಕರಾದ ಎನ್.ಹೆಚ್.ಕೋನರೆಡ್ಡಿ, ಶ್ರೀನಿವಾಸ ಮಾನೆ ಮುಂತಾದವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.[ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯರನ್ನು ಸ್ಮರಿಸಿದ ಕೊಡವರು]

ಮೃತ ಯೋಧನ ಕುಟುಂಬಕ್ಕೆ ಸಚಿವರು ವಯಕ್ತಿಕವಾಗಿ 1 ಲಕ್ಷ ರೂಪಾಯಿಗಳ ಪರಿಹಾರ ನೀಡಿದರು. ಪಾರ್ಥಿವ ಶರೀರ ಸೋಮವಾರ ಗ್ರಾಮಕ್ಕೆ ತಲುಪಲಿದ್ದು ಅಂತಿಮ ಸಂಸ್ಕಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

vinay kulakarni

ಬೆಳಗಾವಿ ಯೋಧನ ಅಂತ್ಯಕ್ರಿಯೆ : ಕಾಶ್ಮೀರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಯೋಧ ಹಸನ್ ಸಾಬ ಖುದಾವಂದ ಅವರ ಜೊತೆ ಬೆಳಗಾವಿಯ ಗೋಕಾಕ್ ತಾಲೂಕಿನ ಸುಭೇದಾರ್ ಬಸಪ್ಪ ಪಾಟೀಲ್ ಅವರು ಹುತಾತ್ಮರಾಗಿದ್ದು, ಅವರ ಅಂತ್ಯಕ್ರಿಯೆಯೂ ಇಂದು ನಡೆಯುತ್ತಿದೆ.

English summary
Soldier Hasansab Khudavand last rites will take place in Dharwad on Monday, August 1, 2016. Hasansab Khudavand killed near the Line of Control (LoC) in the Kargil sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X