ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಕಲಾವಿದರ ಮನಸೆಳೆವ ಸಮೂಹ ಚಿತ್ರಕಲಾ ಪ್ರದರ್ಶನ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ,ಮಾರ್ಚ್,೦4: ಸತ್ವರೂಪ ಫೌಂಡೇಶನ್ ಸಂಸ್ಥೆಯ ಅಡಿಯಲ್ಲಿ ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಕೃತಿ ಕಾಲೇಜಿನಲ್ಲಿ ಆರಂಭವಾದ ಸಮಕಾಲೀನ ಕಲಾಕೃತಿಗಳ ಸಮೂಹ ಚಿತ್ರಕಲಾ ಪ್ರದರ್ಶನ ಮಾರ್ಚ್ 5ರವರೆಗೂ ನಡೆಯಲಿದೆ.

ಸಮೂಹ ಚಿತ್ರಕಲಾ ಪ್ರದರ್ಶನವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ, ಬಾದಾಮಿ ಕೇಂದ್ರದ ದೃಶ್ಯಕಲಾ ವಿಭಾಗದ ಆಡಳಿತಾಧಿಕಾರಿ ಕೆ.ಎಚ್. ಕಟ್ಟಿ ಉದ್ಘಾಟಿಸಿ ಮಾತನಾಡಿ, 'ಹುಬ್ಬಳ್ಳಿಯಲ್ಲಿ ಯಾವುದೇ ಸರಕಾರಿ ಗ್ಯಾಲರಿಗಳಿಲ್ಲ. ಇದರಿಂದ ಕಲಾವಿದರಿಗೆ ನಿರಾಸೆ ಸಹಜ. ಆದರೆ ಸಂಸ್ಕೃತಿ ಕಾಲೇಜಿನವರು ಪ್ರದರ್ಶನ ಗ್ಯಾಲರಿಯನ್ನು ಹೊಸದಾಗಿ ಸ್ಥಾಪನೆ ಮಾಡಿರುವುದು ಸಂತೋಷದ ಸಂಗತಿ' ಎಂದರು.[ಮೈಸೂರಿನ 'ಜ್ಯೋತಿ'ಗೆ ಕರಕುಶಲ ಕಲೆಯೇ ಬಾಳಿನ ಬೆಳಕು]

Satva Roopa foundation welcomes you to Samuha Chitrakala pradarshana in Hubballi

ಚಿತ್ರಕಲೆ ನಿಜಕ್ಕೂ ಸಮಾಜಕ್ಕೆ ಬಹುದೊಡ್ಡ ಕಾಣಿಕೆ ನೀಡಿದೆ. ಇಂದು ನಾವು ಕಾರ್ಟೂನ್ ಹಾಗೂ ಅನಿಮೇಶನ್ ನಂತಹ ದೊಡ್ದ ಕಲಾಕ್ಷೇತ್ರಕ್ಕೆ ಕಾಲಿರಿಸಿದ್ದೇವೆ. ಅಂತೆಯೆ ಅನ್ವಯಿಕ (ಕಮರ್ಶಿಯಲ್) ಕಲೆ ಕೂಡ ಇಂದು ಎಲ್ಲರಿಗೂ ಬೇಕಾಗಿರುವ ಮಾದ್ಯಮವಾಗಿದೆ. ಹಾಗಾಗಿ ಕಲಾವಿದರು ಕಲಾವಿದರಾಗಿ ಉಳಿದು ಕಲಾಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡುವ ಕಡೆಗೆ ಗಮನಹರಿಬೇಕು ಎಂದು ಕಿವಿಮಾತು ಹೇಳಿದರು.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]

ಸಂಸ್ಥೆಯ ಮ್ಯಾನೆಜ್ ಮೆಂಟ್ ಟ್ರಸ್ಟಿ ಡಾನಿಯೇಲ ಹೊಸಕೇರಿ, ಕಲಾವಿದರಾದ ಎನ್. ಆರ್. ನಾಯ್ಕರ್ , ಈರಣ್ಣ ಬಡಿಗೇರ, ವಿಜಯಲಕ್ಷ್ಮಿ ಸತ್ತೀಗೆರಿ, ಡಾ. ಬಿ. ಎಲ್. ಚವ್ಹಾಣ, ಅಜೀತ ಹುಲಮನಿ ,ಡಾ. ವೀಣಾ ಡಾನಿಯೇಲ ಹೋಸಕೇರಿ, ಡಾ. ವಿ. ಬಿ. ನಿಟಾಲಿ, ಕಬಾದಿ, ವಿ. ಜಿ. ಪತ್ತಾರ, ಬಾದಾಮಿ, ಚಂಡೆಪ್ಪನವರ, ಎಮ್ ಶೇಖ ಹಾಗೂ ಪ್ರಾಚಾರ್ಯ ನಟರಾಜ ಹೊನ್ನವಳ್ಳಿ, ಎಮ್ ಜೆ ಬಂಗ್ಲೆವಾಲೆ ಉಪಸ್ಥಿತರಿದ್ದರು.

English summary
Satva Roopa Foundation have organized Samuha Chitrakala pradarshana for 2 days on March 4th and 5th in Hubballi .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X