ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್ 28ರಂದು ಧಾರವಾಡ ಐಐಟಿ ಉದ್ಘಾಟನೆ

|
Google Oneindia Kannada News

ಧಾರವಾಡ, ಆಗಸ್ಟ್ 16 : ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಆಗಸ್ಟ್ 28 ರಂದು ಉದ್ಘಾಟನೆಯಾಗಲಿದೆ. ಆಗಸ್ಟ್ 1ರಿಂದಲೇ ಐಐಟಿ ತರಗತಿಗಳು ಆರಂಭವಾಗಿವೆ. ಔಪಚಾರಿಕವಾಗಿ ಉದ್ಘಾಟನೆಯಾಗುವುದು ಮಾತ್ರ ಬಾಕಿ ಇದೆ.

ಸೋಮವಾರ 70 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆರ್.ಎನ್.ಶೆಟ್ಟಿ ಕ್ರಿಡಾಂಗಣದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು, 'ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಆಗಸ್ಟ್ 28ರಂದು ಐಐಟಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ' ಎಂದು ಹೇಳಿದರು.[ಧಾರವಾಡ ಐಐಟಿ ತರಗತಿಗಳು ಆರಂಭ]

vinay kulkarni

ಪೂರ್ವ ನಿಗದಿಯಂತೆ ಜುಲೈ 31ರಂದು ಐಐಟಿ ಉದ್ಘಾಟನೆ ಮಾಡಬೇಕಿತ್ತು ಮತ್ತು ಆಗಸ್ಟ್ 1ರಿಂದ ತರಗತಿಗಳು ಆರಂಭವಾಗಬೇಕಿತ್ತು. ಆದರೆ, ಮಹದಾಯಿ ಹೋರಾಟದ ಹಿನ್ನಲೆಯಲ್ಲಿ ಉದ್ಘಾಟನಾ ಸಮಾರಂಭ ಮುಂದಕ್ಕೆ ಹೋಗಿತ್ತು. ತರಗತಿಗಳು ಮಾತ್ರ ಆಗಸ್ಟ್ 1ರಿಂದ ಆರಂಭವಾಗಿವೆ.[ಧಾರವಾಡ ಐಐಟಿ ಕ್ಯಾಂಪಸ್ಸಿಗೆ 470 ಎಕರೆ ಜಾಗ]

ಶಾಶ್ವತ ಕಾಂಪಸ್‌ಗೆ ಶಂಕು ಸ್ಥಾಪನೆ : ಧಾರವಾಡದ ಐಐಟಿ ಶಾಶ್ವತ ಕ್ಯಾಂಪಸ್‌ಗೆ ಕೆಲಗೇರಿ ಗ್ರಾಮದಲ್ಲಿ 470 ಎಕರೆ ಜಮೀನು ನೀಡಲಾಗಿದೆ. ಈ ಜಾಗದಲ್ಲಿ ಕ್ಯಾಂಪಸ್ ನಿರ್ಮಾಣವಾಗಲಿದ್ದು, ಆಗಸ್ಟ್ 28ರಂದು ಇದಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತದೆ.

ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೆಡೇಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಐಐಟಿ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

120 ವಿದ್ಯಾರ್ಥಿಗಳಿದ್ದಾರೆ : ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಕಟ್ಟಡದ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಐಐಟಿ ತರಗತಿಗಳು ಆಗಸ್ಟ್ 1ರಿಂದಲೇ ಆರಂಭವಾಗಿವೆ. ಮೊದಲ ಬ್ಯಾಚ್‌ನಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ವಿಭಾಗಕ್ಕೆ ತಲಾ 40 ರಂತೆ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಇವರಲ್ಲಿ 8 ವಿದ್ಯಾರ್ಥಿಗಳು ಕನ್ನಡಿಗರು.

English summary
Union minister Prakash Javadekar will inaugurate the Indian Institute of Technology (IIT) Dharwad on August 28, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X