ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತ ಹೋರಾಟಗಾರರ ಮೇಲಿನ ಪ್ರಕರಣಗಳು ವಾಪಾಸ್ ಪಡೆಯಲಿ

By ನವಲಗುಂದ ಶಾಸಕ ಕೋನರಡ್ಡಿ
|
Google Oneindia Kannada News

ನ್ಯಾಯಾಧೀಕರಣದ ಹೊರಗಡೆ ಈ ಸಮಸ್ಯೆ ಬಗೆಹರಿಸಲು ಪ್ರಧಾನಮಂತ್ರಿಗಳು ತಮ್ಮ ಪರಮಾಧಿಕಾರವನ್ನು ಉಪಯೋಗಿಸಬೇಕು. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕೂಡಲೇ ಕರೆದು ರಾಜೀ ಸಂಧಾನದ ಮೂಲಕ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಬಗ್ಗೆ ನಾನು ಕಳೆದ ಸದನದಲ್ಲಿ ನಿಯಮ 69ರ ಅಡಿಯಲ್ಲಿ ಅತೀ ಜರೂರು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷ ಭೇದ ಮರೆತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಿ, ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಬೇಕು ಎಂದು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಕೂಡ ಕೇಂದ್ರ ಮಧ್ಯಪ್ರವೇಶ ಮಾಡಿಲ್ಲ. ಈ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ರಾಜ್ಯದ ಜನರ ಭಾವನೆಯಾಗಿದೆ. ಅಲ್ಲದೆ, ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾದರು ಹಾಗೂ ರಾಜ್ಯದ ಎಲ್ಲ ಸಂಸದರು ದೆಹಲಿಯಲ್ಲಿ ಈ ಯೋಜನೆ ಜಾರಿಗಾಗಿ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ.

ಮಹದಾಯಿ, ಕಳಸಾ-ಬಂಡೂರಿ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕ ರೈತರು ಹುತಾತ್ಮರಾಗಿದ್ದಾರೆ. ನವಲಗುಂದ ತಾಲೂಕಿನ ರೈತರಾದ ಚಿತ್ತರಂಜನ ಕಲ್ಲಣ್ಣವರ, ದೇವಪ್ಪಾ ಪಲ್ಲೇದ, ಹನುಮಂತ ಗೌಡ ಹುಡೇದ, ನರಗುಂದ ತಾಲೂಕಿನ ಧರ್ಮಣ್ಣ ತಹಶೀಲ್ದಾರ, ಕುಂದಗೋಳ ತಾಲೂಕಿನ ರಾಮಪ್ಪ ತಳವಾರ, ರೋಣ ತಾಲೂಕಿನ ಶಿವಯ್ಯ ಪೂಜಾರ, ಬೈಲಹೊಂಗಲ್ದ ರೈತ ಕೋಮಲ್ಕುಮಾರ ಪೂಜಾರ ಅವರು ಹೋರಾಟ ಮಾಡುವ ಸಂದರ್ಭದಲ್ಲಿಯೇ ಮೃತಪಟ್ಟಿರುತ್ತಾರೆ. ಆದರೆ ಈವರಗೆ ಆ ರೈತ ಕುಟುಂಬಗಳ ಪೈಕಿ ಇನ್ನೂ ಕೆಲವರಿಗೆ ರಾಜ್ಯ ಸರಕಾರ ಪರಿಹಾರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಕೂಡಲೇ ಆ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ವಿತರಿಸಬೇಕು.

Navalagunda MLA Konaraddi article about Mahadayi River part2

ಕೇಂದ್ರದ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರು ಈ ವಿಷಯದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ರಾಜ್ಯಕ್ಕೆ ಪತ್ರ ಬರೆದು ಅವಮಾನಿಸಿದ್ದಾರೆ. ಇದು ರಾಜ್ಯದ ಹಿತದೃಷ್ಠಿಗೆ ಮಾರಕವಾಗಿದ್ದು, ಸರಿಯಾದ ಬೆಳವಣಿಗೆ ಅಲ್ಲ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಲವು ಬಾರಿ ಪತ್ರ ಬರೆದರೂ ಅವರಿಂದ ಮಾತ್ರ ಯಾವುದೇ ಉತ್ತರ ಬಂದಿಲ್ಲ. ರಾಜ್ಯ ಸರಕಾರ ಕೂಡ ಹಲವು ಬಾರಿ ಪತ್ರ ಬರೆದರೂ ಕೇಂದ್ರ ಸ್ಪಂದಿಸದಿರುವುದು ನೋವಿನ ಸಂಗತಿಯಾಗಿದೆ. ಈ ಬಗ್ಗೆ ಸದನದಲ್ಲಿ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ರೈತ ಹೋರಾಟಗಾರರ ಮೇಲಿನ ಪ್ರಕರಣಗಳು ವಾಪಾಸ್ ಪಡೆಯಲಿ:
ಮಹದಾಯಿ, ಕಳಸಾ-ಬಂಡೂರಿಗಾಗಿ ಹೋರಾಟ ನಡೆಸಿದ ನವಲಗುಂದ, ಯಮನೂರು, ಆರೆಕುರಹಟ್ಟಿ, ಅಳಗವಾಡಿ, ಇಬ್ರಾಹಿಂಪುರ ಸೇರಿದಂತೆ ವಿವಿಧೆಡೆಯ 187 ಅಮಾಯಕ ರೈತರು ಹಾಗೂ ವಿವಿಧ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿದ ಪ್ರಕರಣಗಳನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಘೋಷಿಸಿದ್ದರು. ಸಚಿವ ಸಂಪುಟದ ಸಭೆ ವೇಳೆ ಪೊಲೀಸರು ಚಾರ್ಜ್ ಚೀಟ ಸಲ್ಲಿಸಿದ ನಂತರ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದರು. ಈಗಾಗಲೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿ, ಒಂದು ತಿಂಗಳು ಕಳೆದರೂ ಈವರೆಗೂ ರಾಜ್ಯ ಸರಕಾರ ಪ್ರಕರಣ ಹಿಂದಕ್ಕೆ ಪಡೆಯದಿರುವುದು ಇದು ನೋವಿನ ಸಂಗತಿಯಾಗಿದೆ. ತಡವಾಗಿಯಾಗಿಯಾದರೂ ಪರವಾಗಿಲ್ಲ. ಈ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೇ ರೈತರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಾಸ್ಸು ಪಡೆಯುವುದಾಗಿ ಘೋಷಿಸಬೇಕು.

ಮಹಾದಾಯಿ ಕಳಸಾ-ಬಂಡೂರಿ ಯೋಜನೆಯ ಸಂಪೂರ್ಣ ಮಾಹಿತಿ:
ಮಹದಾಯಿ ನದಿ/ಮಾಂಡೋವಿ ನದಿಯು ಪಶ್ಚಿಮ ಘಟ್ಟದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಅಂತರ ರಾಜ್ಯ ನದಿ. ಈ ನದಿಯು ಮೂಲ ಕರ್ನಾಟಕದ ಖಾನಾಪೂರ ತಾಲ್ಲೂಕಿನ ದೇಗಾಂ ಗ್ರಾಮದಲ್ಲಿದ್ದು, ಅರಬ್ಬಿ ಸಮುದ್ರ ಸೇರುವ ಮುನ್ನ ಕರ್ನಾಟಕದಲ್ಲಿ 35 ಕಿ.ಮೀ. ಮತ್ತು ಗೋವಾದಲ್ಲಿ 82 ಕಿ.ಮೀ. ಹರಿಯುತ್ತದೆ. ಮಹದಾಯಿ ನದಿಯು ಒಟ್ಟು 2032 ಚ.ಕಿ.ಮೀ.ನಷ್ಟು ಜಲಾನಯನ ಪ್ರದೇಶ ಹೊಂದಿದ್ದು, ರಾಜ್ಯದಲ್ಲಿ 375 ಚ.ಕಿ.ಮೀ. ಪ್ರದೇಶ ಇರುತ್ತದೆ. ಮಹಾರಾಷ್ಟ್ರದಲ್ಲಿ 77 ಚದರ ಕಿ.ಮೀ. ಮತ್ತು ಗೋವಾದಲ್ಲಿ 1580 ಚ.ಕಿ.ಮೀ. ಪ್ರದೇಶವಿದೆ.

ಕೇಂದ್ರ ಜಲಾಯೋಗದ (ಸಿ.ಡಬ್ಲೂ.ಸಿ.) ವರದಿಯಂತೆ, ಮಹದಾಯಿ ನದಿ ಕೊಳ್ಳದಲ್ಲಿ ನೀರಿನ ಇಳುವರಿ (ಯೀಲ್ಡ್) ಶೇ. 50 ರ ಅವಲಂಬನೆಯಲ್ಲಿ 220 ಟಿ.ಎಂ.ಸಿ. ಮತ್ತು ಶೇ. 75 ರ ಅವಲಂಬನೆಯಲ್ಲಿ 199.60 ಟಿ.ಎಂ.ಸಿ. ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಕೊಳ್ಳದ ಇಳುವರಿಯು ಶೇ. 75 ರ ಅವಲಂಬನೆಯಲ್ಲಿ 44.15 ಟಿ.ಎಂ.ಸಿ. ಮತ್ತು ಶೇ. 50ರ ಅವಲಂಬನೆಯಲ್ಲಿ 52.60 ಟಿ.ಎಂ.ಸಿ. ನೀರಿನ ಪ್ರಮಾಣವಿದೆ. ಒಟ್ಟಾರೆ ಹರಿವು ಸುಮಾರು 200 ಟಿಎಂಸಿ ಯಷ್ಟು ನೀರು ಯಾವುದೇ ರಾಜ್ಯಗಳು ಬಳಸದೆ ಅನುಪಯುಕ್ತವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ ಎಂದು ರಾಜ್ಯದ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯು ಅಂದಾಜಿಸಿದೆ.

ಆದರೆ, ಗೋವಾ ರಾಜ್ಯವು ಆ ನೀರನ್ನು ಕುಡಿಯುವ ನೀರಿಗಾಗಲಿ ಇಲ್ಲವೇ ನೀರಾವರಿ ಯೋಜನೆಗಾಗಲಿ ಬಳಸಿಕೊಳ್ಳುವುದಿಲ್ಲ. ಕರ್ನಾಟಕಕ್ಕೂ ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಇದು ಸರಿಯಾದ ಬೆಳವಣಿಗೆಯಲ್ಲ.

ರಾಜ್ಯ ಈಗಾಗಲೇ ಮಹದಾಯಿಗಾಗಿ ಒಟ್ಟು 36.558 ಟಿಎಂಸಿ ನೀರನ್ನು ಕೇಳಿದೆ. ಆದರೆ ವಾಸ್ತವಿಕವಾಗಿ ನಮ್ಮ ರಾಜ್ಯದ ಪಾಲು 44.15 ಟಿಎಂಸಿ ಅಥವಾ 52.60 ಟಿಎಂಸಿ ನೀರು ಪಡೆಯಲು ತಾಂತ್ರಿಕವಾಗಿ ಹಾಗೂ ಕಾನೂನಾತ್ಮಕವಾಗಿ ನಮ್ಮ ಪಾಲಿನ ನೀರಿನ ಬೇಡಿಕೆ ಸಲ್ಲಿಸಬೇಕು.

English summary
Dharwad district Navalagunda jds MLA Konaraddi article about Mahadayi river dispute. Mahadayi river flows between Karnataka and Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X