ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರು ಹಂಚಿಕೆ ವಿವಾದಕ್ಕೆ ರಿಯಲ್ ಸ್ಟಾರ್ ಉಪ್ಪಿಯಿಂದ ಪರಿಹಾರ

By Mahesh
|
Google Oneindia Kannada News

ಹುಬ್ಬಳ್ಳಿ, ಸೆ.13: ಕಳಸಾ-ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗದ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಲವು ವರ್ಷಗಳಿಂದ ಬೆಳೆದು ಬಂದಿರುವ ಈ ಜಲ ವಿವಾದಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮದೇ ರೀತಿಯಲ್ಲಿ ಪರಿಹಾರ ಸೂಚಿಸಿದ್ದಾರೆ.

ಉಪೇಂದ್ರ ಅವರು ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ, 'ಇಡೀ ಕರ್ನಾಟಕವೇ ಅವರ (ರೈತರು) ಹಿಂದೆ ಇದೆ. ದೊಡ್ಡವರು ಈ ಸಮಸ್ಯೆ ಬಗೆ ಹರಿಸಲು ಯತ್ನಿಸುತ್ತಿದ್ದಾರೆ. ನಾವು ಶಾಂತಿಯುತವಾಗಿ ಹೋರಾಟ ನಡೆಸಲು ಬಂದಿದ್ದೇವೆ ಎಂದರು. [ರೈತರಿಗಾಗಿ, ನೀರಿಗಾಗಿ ಕನ್ನಡ ಸಿನಿತಾರೆಯರ ಮೆರವಣಿಗೆ]

ಕಾವೇರಿ ನದಿ ವಿವಾದ ಬಗೆಹರಿಸಲು ಪರಿಹಾರ ಸೂಚಿಸಿದ ಉಪೇಂದ್ರ ಅವರು ಎಚ್ 2ಒ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ನೀಡಿದ್ದನ್ನು ಸ್ಮರಿಸಿದರು. ಪ್ರಕೃತಿ ಕೈ ಹಿಡಿದರೆ ಎಲ್ಲಾ ಸಮಸ್ಯೆ ದೂರಾಗುತ್ತದೆ. ನಾವು ಇದನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಂಡರೂ ಸರಿ, ಹಂಚಿ ತಿನ್ನುವುದರಲ್ಲಿ ಇರುವ ಸುಖ ಏನು ಎಂಬುದು ಎಲ್ಲರಿಗೂ ಗೊತ್ತಿದೆ. [ಏನಿದು ಕಳಸಾ-ಬಂಡೂರಿ ಯೋಜನೆ?]

Upendra

ನದಿ ಜೋಡಣೆ ಬಗ್ಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನದಿಗಳ ಜೋಡಣೆಯಾದರೆ ಸಮಸ್ಯೆ ಇರಲ್ಲ. ನೀರು ಹಂಚಿಕೆ ಸಮಸ್ಯೆಗೆ ಇದೇ ಸೂಕ್ತ ಪರಿಹಾರ. ನಾವು ನಗರೀಕರಣಕ್ಕೆ ಮಾರು ಹೋಗುತ್ತಿದ್ದೇವೆ. ನಮ್ಮ ಪ್ರಕೃತಿ, ನಮ್ಮ ರೈತರು ನಮ್ಮ ಮೂಲ. 'ಇಂಟರ್ ಸ್ಟೆಲ್ಲರ್' ಚಿತ್ರದಲ್ಲಿ ಕೃಷಿ ನಾಶ, ಮನುಷ್ಯರ ಬದುಕು ನಾಶದ ಬಗ್ಗೆ ಚೆನ್ನಾಗಿ ತಿಳಿಸಿದ್ದಾರೆ ಎಂದು ಹೇಳಿದರು. [ಕಳಸಾ ಬಂಡೂರಿಗಾಗಿ ಸೆ.26ರಂದು ಕರ್ನಾಟಕ ಬಂದ್]

ಶಿವರಾಜ್ ಕುಮಾರ್ ನೇತೃತ್ವ: 'ನೆಲ, ಜಲ, ಭಾಷೆಯ ಹೋರಾಟಕ್ಕೆ ಸದಾ ಸಿದ್ಧವಾಗಿದ್ದೇನೆ. ಯಾವಾಗ ಬೇಕಾದರೂ ಹೋರಾಟಕ್ಕೆ ಕರೆದರೂ ಹೋಗಲು ಸಿದ್ಧನಿದ್ದೇನೆ' ಎಂದು ಬೆಂಗಳೂರಿನಲ್ಲಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ [ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]

ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ರಾಕ್‌ಲೈನ್ ವೆಂಕಟೇಶ್, ವಿಜಯಲಕ್ಷ್ಮೀ ಸಿಂಗ್, ದೊಡ್ಡಣ್ಣ, ಸುಂದರ್ ರಾಜ್, ಬಿ.ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್, ಪೂಜಾಗಾಂಧಿ, ಅನುಪ್ರಭಾಕರ್, ವಿಜಯ್ ರಾಘವೇಂದ್ರ, ಸಾ.ರಾ.ಗೋವಿಂದು, ನೀನಾಸಂ ಸತೀಶ್ ಮುಂತಾದವರು ಹುಬ್ಬಳ್ಳಿಗೆ ಬಂದಿದ್ದಾರೆ.[ರೈತರಿಗೆ ಚಿತ್ರರಂಗದ ಬೆಂಬಲ, ಭಾಷಣಕ್ಕೆ ಟ್ವೀಟ್ ಪ್ರತಿಕ್ರಿಯೆ]

ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಕುಡಿಯುವ ನೀರಿನ ಅಭಾವ ನೀಗಿಸಲು ಕಳಸಾ-ಬಂಡೂರಿ ನಾಲೆಗಳನ್ನು ಮಲಪ್ರಭೆಗೆ ಜೋಡಿಸುವ ಯೋಜನೆ ಇದಾಗಿದೆ. ಗೋವಾ ಸರ್ಕಾರ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ವಿವಾದ ನ್ಯಾಯಾಧೀಕರಣದ ಮುಂದಿದೆ. ಯೋಜನೆ ಜಾರಿಯಾಗಲೇಬೇಕು ಎಂದು ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ.

English summary
National River-Linking Project is the solution fot the water dispute : Real Star Upendra. Kalasa-Banduri Nala project protest gets star power. Kannada film industry expressed support for farmers protest. Film stars, producers, directors and technicians are protesting at Hubballi on on September 13, Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X